'ಕಾಕ್ಟೇಲ್' ಹೀರೊ ವೀರೇನ್ ಕೇಶವ್‌ ಬೆಸ್ಟ್ ಡೆಬ್ಯೂ ನಟ ಪ್ರಶಸ್ತಿ

By ಫಿಲ್ಮಿಬೀಟ್ ಡೆಸ್ಕ್

ಪ್ಯಾನ್ ಇಂಡಿಯಾ ಸಿನಿಮಾ ಹಿಟ್‌ ಲಿಸ್ಟ್ ಸೇರುತ್ತಿದ್ದಂತೆ ಹೊಸಬರು ಕೂಡ ಸದ್ದು ಮಾಡುತ್ತಿದ್ದಾರೆ. ಹೊಸ ಪ್ರಯತ್ನಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಶತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಹೊಸಬರ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲೊಂದು 'ಕಾಕ್ಟೇಲ್' ಸಿನಿಮಾ. ಈ ಸಿನಿಮಾ ಹೀರೊ ವೀರೇನ್ ಕೇಶವ್‌ ಕೂಡ ಸಿನಿಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

Priyanka Upendra Gave the Best Debut Award on Cocktail Hero Viren Keshav At KIFF 2022

ಇತ್ತೀಚೆಗೆ ಎರಡನೇ ಕರ್ನಾಟಕ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ 2022ರ ಪ್ರಶಸ್ತಿ ಪ್ರಧಾನ ಸಮಾರಂಭ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜನೆ ಗೊಂಡಿತ್ತು. ನವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಂ. ಎ .ಮೂಮಿ ಗಟ್ಟಿ ಮುಂದಾಳತ್ವವಿತ್ತು.ಇದೇ ಕಾರ್ಯಕ್ರಮದಲ್ಲಿ ಚಲನಚಿತ್ರ ಹಾಗೂ ಕಿರುಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕರ್ನಾಟಕ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ 2022ರ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ "ಕಾಕ್ಟೇಲ್" ಸಿನಿಮಾದ ಹೀರೊಗೆ ಪ್ರಶಸ್ತಿ ಲಭಿಸಿದೆ. ವೀರೇನ್ ಕೇಶವ್ ಬೆಸ್ಟ್ ಡೆಬ್ಯು ನಟ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ನಟಿ ಪ್ರಿಯಾಂಕ ಉಪೇಂದ್ರ ನೀಡಿ ಗೌರವಿಸಿದ್ದಾರೆ.

ಕರ್ನಾಟಕ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ 2022ರ ಪ್ರಶಸ್ತಿ ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗ ಗಣ್ಯರು ಹಾಗೂ ಆತ್ಮೀಯರು ಆಗಮಿಸಿದ್ದರು. 'ಕಾಕ್ಟೇಲ್' ಸಿನಿಮಾ ಇನ್ನೂ ಬಿಡುಗಡೆಯಾಗಬೇಕಿದೆ. ಆಗಲೇ ಬೆಸ್ಟ್ ಡೆಬ್ಯೂ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅಂದ್ಹಾಗೆ 'ಕಾಕ್ಟೆಲ್' ಸಿನಿಮಾ ಸಸ್ಪೆನ್ಸ್ , ಥ್ರಿಲ್ಲರ್, ರೊಮ್ಯಾನ್ಸ್ ಹಾಗೂ ಮರ್ಡರ್ ಮಿಸ್ಟರಿ ಹೊಂದಿದೆ. ಈ ಸಿನಿಮಾ 2023, ಜನವರಿ 6 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ವೀರೇನ್ ಕೇಶವ್ ಮತ್ತು ನಾಯಕಿ ಚರಿಷ್ಮ ಚೊಂಡಮ್ಮ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಶ್ರೀರಾಮ್ ನಿರ್ದೇಶಿಸಿದ್ದು, ಡಾ.ಶಿವಪ್ಪ ನಿರ್ಮಿಸಿದ್ದಾರೆ.

Priyanka Upendra Gave the Best Debut Award on Cocktail Hero Viren Keshav At KIFF 2022

ಈ ಸಿನಿಮಾದಲ್ಲಿ ಶೋಭ್ ರಾಜ್, ಶಿವಮಣಿ, ರಮೇಶ್ ಪಂಡಿತ್, ಚಂದ್ರಕಲಾ ಮೋಹನ್, ಕರಿಸುಬ್ಬು, ಮಹಂತೇಶ್ ನಟಿಸಿದ್ದಾರೆ. ಈ ಸಿನಿಮಾಗೆ ಲೋಕಿ ತವಸ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಹೃದಯಶಿವ ಮತ್ತು ಸಿರಾಜ್ ಮಿಜರ್ ಬರೆದಿರೋ ಅರ್ಮಾನ್ ಮಲಿಕ್ ಹಾಡಿರುವ 'ಮಳೆ ಮೋಡದ' ಹಾಡು ಸಂಗೀತ ಪ್ರಿಯರ ಮನಗೆದ್ದಿದೆ.

More from Filmibeat

English summary
Priyanka Upendra Bestowed the Best Debut Award on Cocktail Hero Viren Keshav at KIFF 2022,know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X