»   » ಪ್ರಿಯಾಂಕಾ ಉಪೇಂದ್ರ ಈಗ 7 ತಿಂಗಳ ಗರ್ಭಿಣಿ..!

ಪ್ರಿಯಾಂಕಾ ಉಪೇಂದ್ರ ಈಗ 7 ತಿಂಗಳ ಗರ್ಭಿಣಿ..!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಅಭಿಮಾನಿಗಳಿಗಿಲ್ಲಿದೆ ಬ್ರೇಕಿಂಗ್ ನ್ಯೂಸ್..! ಉಪ್ಪಿಯ ಪ್ರಿಯಪತ್ನಿ ಪ್ರಿಯಾಂಕಾ ಇದೀಗ 7 ತಿಂಗಳ ಗರ್ಭಿಣಿ..! ಹಾಗಂತ ರಿಯಲ್ ಸ್ಟಾರ್ ಉಪೇಂದ್ರ ತಂದೆಯಾಗ್ತಿಲ್ಲ..!

ಶಾಕ್ ಆಗದೆ, ಬಾಕಿ ಸಮಾಚಾರವನ್ನ ಕೇಳಿ...ಪ್ರಿಯಾಂಕಾ ಉಪೇಂದ್ರ ಗರ್ಭಿಣಿಯಾಗುವುದು ತೆರೆಮೇಲೆ ಮಾತ್ರ. ಈ ಸುದ್ದಿ ಪ್ರಿಯಾಂಕಾರನ್ನ ತೆರೆಮೇಲೆ ನೋಡದೆ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಸಂತಸದ ಸುದ್ದಿನೇ. ಯಾಕಂದ್ರೆ, ಕ್ರೇಜಿ ಸ್ಟಾರ್ ಸಿನಿಮಾ ಬಿಟ್ಟರೆ ಇತ್ತೀಚೆಗೆ ಬೆಳ್ಳಿತೆರೆ ಮೇಲೆ ಕಾಣದಂತೆ ಮಾಯವಾಗಿದ್ದ ಪ್ರಿಯಾಂಕಾ ಇದೀಗ 'ಅಮ್ಮ'ನಾಗುವ ಮೂಲಕ ರೀಎಂಟ್ರಿ ಕೊಡ್ತಿದ್ದಾರೆ.

ವಿಶೇಷ ಅಂದ್ರೆ, ಇವತ್ತು ಪ್ರಿಯಾಂಕಾ ಉಪೇಂದ್ರರವರ ಹುಟ್ಟುಹಬ್ಬ. ಬರ್ತಡೇ ದಿನವೇ ಅವರ ಹೊಸ ಚಿತ್ರ ಅನೌನ್ಸ್ ಆಗಿರುವುದು ಡಬಲ್ ಸ್ಪೆಷಲ್.

ಅಂದ್ಹಾಗೆ, ಏಳು ತಿಂಗಳ ತುಂಬು ಗರ್ಭಿಣಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಲುಕ್ ಥೇಟ್ ವಿದ್ಯಾ ಬಾಲನ್ ಅಭಿನಯದ 'ಕಹಾನಿ'ಯಂತಿದ್ಯಲ್ಲಾ..! ಅಂತ ನೀವು ಕೇಳಬಹುದು. ಆದರೆ, ಬಾಲಿವುಡ್ 'ಕಹಾನಿ'ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಕಹಾನಿ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ರೆ, ಪ್ರಿಯಾಂಕಾ ಪ್ರೆಗ್ನಂಟ್ ಆಗುವುದು ಹಾರರ್ ಚಿತ್ರದಲ್ಲಿ..!

Priyanka upendra is now 7 months pregnant!

ಈ ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಪ್ರಿಯಾಂಕಾ ಹುಟ್ಟುಹಬ್ಬದಂದೇ ಫಸ್ಟ್ ಲುಕ್ ರಿಲೀಸ್ ಮಾಡಬೇಕು ಅಂತ ಚಿತ್ರತಂಡ ಪ್ಲಾನ್ ಮಾಡಿ, ಉಪ್ಪಿ ಮಡದಿಗೆ ಸರ್ಪ್ರೈಸ್ ನೀಡಿದ್ದಾರೆ. ''ಇಲ್ಲಿವರೆಗೂ ಸಿನಿಮಾ ಪೋಸ್ಟರ್ ಗಳಿಗಾಗಿ ಫೋಟೋಶೂಟ್ ಮಾಡಲಾಗುತ್ತಿತ್ತು. ಆದರೆ, ಆ ಫಾರ್ಮ್ಯಾಟ್ ನ ಬ್ರೇಕ್ ಮಾಡಬೇಕು ಅಂತ ಪ್ರಿಯಾಂಕಾ ಕ್ಯಾರೆಕ್ಟರ್ ರಿವೀಲ್ ಆಗುವ ಹಾಗೆ ಸ್ಕೆಚ್ ಮಾಡಿಸಿದ್ದೇವೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಲೋಹಿತ್ ತಿಳಿಸಿದ್ದಾರೆ.

ಈ ಹಿಂದೆ 'ಜಯಮ್ಮನ ಮಗ', 'ರಜಿನಿಕಾಂತ', ಮಿಸ್ಟರ್ 420', 'ಗೋವಾ' ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿದ್ದ ಲೋಹಿತ್, ಈ ಹಾರರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ''2 ವರ್ಷದಿಂದ ಚಿತ್ರಕಥೆಯನ್ನ ರೆಡಿಮಾಡುತ್ತಿದ್ದೇನೆ. ಗರ್ಭಿಣಿ ಅಮ್ಮ ಮತ್ತು 6 ವರ್ಷದ ಮಗುವಿನ ಸುತ್ತ ನಡೆಯುವ ಕಥೆ ಇದು. ಪಾತ್ರಕ್ಕೆ ಪ್ರಿಯಾಂಕಾ ಸೂಟ್ ಆಗ್ತಾರೆ ಅಂದುಕೊಂಡ್ವಿ. ಅವ್ರನ್ನ ಅಪ್ರೋಚ್ ಮಾಡಿದಾಗ, ಕಥೆ ಕೇಳಿ ಇಂಪ್ರೆಸ್ ಆಗಿ ಒಪ್ಪಿಕೊಂಡ್ರು'' ಅಂತಾರೆ ನಿರ್ದೇಶಕ ಲೋಹಿತ್.

ಹಿಂದೆಂದೂ ಕಂಡಿರದ ಪ್ರಿಯಾಂಕಾರನ್ನ ಈ ಚಿತ್ರದಲ್ಲಿ ನೋಡಬಹುದು. ಚಿತ್ರದ ಫಸ್ಟ್ ಲುಕ್ ಕಂಡು ಪ್ರಿಯಾಂಕಾ ಖುಷಿ ಪಟ್ಟಿದ್ದಾರೆ ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಸಂತಸವನ್ನ ಹಂಚಿಕೊಂಡಿರುವ ಲೋಹಿತ್, ಜನವರಿಯಲ್ಲಿ ಶೂಟಿಂಗ್ ಗೆ ಚಾಲನೆ ನೀಡ್ತಾರಂತೆ.

ಮಹಿಳಾ ಪ್ರಧಾನ ಚಿತ್ರವಾಗಿರುವ ಈ ಹಾರರ್ ಮೂವಿಯಲ್ಲಿ ಪ್ರಿಯಾಂಕಾಗೆ ಜೋಡಿಯಾರಾಗ್ತಾರೆ ಅನ್ನೋದಿನ್ನ ನಿರ್ದೇಶಕರು ಸಸ್ಪೆನ್ಸ್ ಆಗಿಟ್ಟಿದ್ದಾರೆ. ಆದ್ರೆ ಪ್ರಿಯಾಂಕಾ ಮಗಳ ಪಾತ್ರದಲ್ಲಿ 'ಅಭಿಮನ್ಯು' ಚಿತ್ರದಲ್ಲಿ ನಟಿಸಿದ್ದ ಯೂನಾ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿವರೆಗೂ ವಿತರಣೆ ಮಾಡುತ್ತಿದ್ದ ನಾರಾಯಣ ಮೂರ್ತಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ ಚಿತ್ರಕ್ಕಿದ್ದು, ಅಜನೀಶ್ ಲೋಕನಾಥ್ ಮ್ಯೂಸಿಕ್ ನೀಡಲಿದ್ದಾರೆ.

ನಟಿಯಿಂದ ನಿರ್ಮಾಪಕಿಯಾಗಿ ಬಡ್ತಿ ಪಡೆದಿರುವ ಪ್ರಿಯಾಂಕಾ, ಉಪ್ಪಿ-2 ಪ್ರೊಡಕ್ಷನ್ ಕಂಪ್ಲೀಟ್ ಆಗ್ತಿದ್ದ ಹಾಗೆ ಬಣ್ಣ ಹಚ್ಚಲಿದ್ದಾರೆ. ಏನೇ ಆಗಲಿ, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಿಯಾಂಕಾಗೆ ನಮ್ಮ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು. (ಫಿಲ್ಮಿಬೀಟ್ ಕನ್ನಡ)

Priyanka upendra is now 7 months pregnant!2
English summary
Priyanka Upendra is back in action again. After Crazy Star, Priyanka Upendra is making her come back in horror movie. Interestingly, Priyanka upendra will be seen as 7 months pregnant. Since, its Priyanka Upendra's birthday today i.e, november 12th, the first look of her upcoming horror movie is released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada