twitter
    For Quick Alerts
    ALLOW NOTIFICATIONS  
    For Daily Alerts

    ನೇಕಾರರ ಸಂಕಷ್ಟ ನೀಗಲು ಅಭಿಯಾನ ಆರಂಭಿಸಿದ ಪ್ರಿಯಾಂಕಾ ಉಪೇಂದ್ರ

    |

    ಕೊರೊನಾ ವೈರಸ್ ಲೋಕವನ್ನೇ ತಲ್ಲಣಗೊಳಿಸಿದೆ. ಕೊರೊನಾ ದಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪರಿಣಾಮಕ್ಕೆ ಒಳಗಾದವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ.

    ಲಕ್ಷಾಂತರ ಮಂದಿಯ ಆರೋಗ್ಯವನ್ನು ಹದಗೆಡಿಸಿರುವ ಕೊರೊನಾ ಅದಕ್ಕಿಂತಲೂ ಹೆಚ್ಚಿನ ಮಂದಿಯ ಜೀವನವನ್ನು ಅಂದಗೆಡಸಿದೆ. ಲಾಕ್‌ಡೌನ್ ನಿಂದಾಗಿಯಂತೂ ಲಕ್ಷಾಂತರ ಮಂದಿ ವ್ಯಾಪಾರವಿಲ್ಲದೆ, ಆದಾಯವಿಲ್ಲದೆ ಆರ್ಥಿಕವಾಗಿ ಸೊರಗಿ ಹೋಗಿದ್ದಾರೆ.

    ಅನ್‌ಲಾಕ್ ಆಗಿದ್ದರೂ ಸಹ ಎಷ್ಟೋ ಉದ್ಯಮಗಳು ಇನ್ನೂ ಚೇತರಿಸಿಕೊಂಡಿಲ್ಲ. ಅವುಗಳಲ್ಲಿ ಪ್ರಮುಖವಾದುದು ಉಡುಪು ಉದ್ಯಮ. ಅದರಲ್ಲಿಯೂ ನೇಕಾರರಂತೂ ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಇವರ ನೆರವಿಗೆ ಧಾವಿಸಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.

    ಕುಶಲಕರ್ಮಿಗಳು, ನೇಕಾರರು, ದೇಸಿ ವಸ್ತುಗಳ ಉತ್ಪಾದಕರಿಗೆ ನೆರವಾಗಲೆಂದು ಪ್ರಿಯಾಂಕಾ ಉಪೇಂದ್ರ, ದೇಸಿ ಉತ್ಪನ್ನಗಳು ಹಾಗೂ ಖಾದಿ ಉಡುಪುಗಳ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಒಂದನ್ನು ಸಹ ಹಂಚಿಕೊಂಡಿದ್ದಾರೆ.

    87000 ಮೀಟರ್ ಬಟ್ಟೆ ಉಳಿದಿದೆ: ಪ್ರಿಯಾಂಕಾ

    87000 ಮೀಟರ್ ಬಟ್ಟೆ ಉಳಿದಿದೆ: ಪ್ರಿಯಾಂಕಾ

    'ಲಾಕ್‌ಡೌನ್ ಕಾರಣದಿಂದಾಗಿ ಸುಮಾರು 87000 ಮೀಟರ್ ಬಟ್ಟೆ ವ್ಯಾಪಾರವಾಗದೆ ಉಳಿದುಬಿಟ್ಟಿದೆ. ಶಿವಮೊಗ್ಗ ಹಾಗೂ ರಾಜ್ಯದ ಇತರ ದೇಸಿ ನೇಯ್ಗೆ ಸಮುದಾಯದ ಸಾಹಸೋಧ್ಯಮದ ಬಗ್ಗೆ ಕೇಳಿದ್ದ ನನಗೆ ಅವರ ಈಗಿನ ಪರಿಸ್ಥಿತಿ ಕೇಳಿ ಚಿಂತೆ ಹೆಚ್ಚಿದೆ' ಎಂದಿದ್ದಾರೆ ಪ್ರಿಯಾಂಕಾ.

    ಎಲ್ಲರೂ ದೇಸಿ ಉತ್ಪನ್ನ ಖರೀದಿಸಬೇಕಿದೆ: ಪ್ರಿಯಾಂಕಾ

    ಎಲ್ಲರೂ ದೇಸಿ ಉತ್ಪನ್ನ ಖರೀದಿಸಬೇಕಿದೆ: ಪ್ರಿಯಾಂಕಾ

    ಈ ಲಾಕ್‌ಡೌನ್ ದೇಸಿ ಕರಕುಶಲಕರ್ಮಿಗಳು, ನೇಕಾರರ ಬದುಕನ್ನು ಮುರಾಬಟ್ಟೆ ಮಾಡಿದೆ. ನಾವು ಈ ಸಮಯದಲ್ಲಿ ಅವರ ಸಹಾಯಕ್ಕೆ ನಿಲ್ಲಲೇ ಬೇಕಿದೆ. ನಾವು ಮೊದಲ್ಗೊಂಡು ದೇಸಿ ಕರಕುಶಲಕರ್ಮಿಗಳ ಉತ್ಪನ್ನಗಳನ್ನು ಖರೀದಿಸಬೇಕಿದೆ, ಆ ಮೂಲಕ ಅವರ ಜೀವನ ಹಾಗೂ ಕಲೆಯನ್ನು ಉಳಿಸಬೇಕಿದೆ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

    ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಿದ ಪ್ರಿಯಾಂಕಾ

    ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಿದ ಪ್ರಿಯಾಂಕಾ

    ಎಲ್ಲರೂ ದೇಸಿ ಉತ್ಪನ್ನವನ್ನು ಖರೀದಿಸಿ ಎಂದಿರುವ ಪ್ರಿಯಾಂಕಾ ಉಪೇಂದ್ರ, ದೇಸಿ ಉತ್ಪನ್ನವನ್ನು ಖರೀದಿಸುವ ಹಾಗೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದಾರೆ ಪ್ರಿಯಾಂಕಾ.

    Recommended Video

    ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja
    ಹಲವರನ್ನು ನಾಮಿನೇಟ್ ಮಾಡಿರುವ ಪ್ರಿಯಾಂಕಾ ಉಪೇಂದ್ರ

    ಹಲವರನ್ನು ನಾಮಿನೇಟ್ ಮಾಡಿರುವ ಪ್ರಿಯಾಂಕಾ ಉಪೇಂದ್ರ

    ದೇಸಿ ಉತ್ಪನ್ನ ಖರೀದಿಸುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವ ಅಭಿಯಾನದಲ್ಲಿ ನಟಿ ಪಾರೂಲ್ ಯಾದವ್, ಪತಿ ಉಪೇಂದ್ರ, ಪಲ್ಲವಿ ಗುರುಕಿರಣ್, ಶಿಲ್ಪಾ ಗಣೇಶ್, ಕವಿತಾ ಲಂಕೇಶ್ ಇನ್ನೂ ಹಲವರನ್ನು ನಾಮಿನೇಟ್ ಮಾಡಿದ್ದಾರೆ ಪ್ರಿಯಾಂಕಾ ಉಪೇಂದ್ರ.

    English summary
    Actress Priyanka Upendra calls to buy Desi products she started social media campaign for helping weavers.
    Saturday, October 17, 2020, 22:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X