ಮತ್ತೊಂದು ಹಾರರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ
ನಟಿ ಪ್ರಿಯಾಂಕಾ ಉಪೇಂದ್ರ 'ದೇವಕಿ' ಸಿನಿಮಾದ ನಂತರ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇವುಗಳ ಪೈಕಿ ಒಂದು ಸಿನಿಮಾ ಹಾರರ್ ಸಿನಿಮಾವಾಗಿದೆ.
'ಮಮ್ಮಿ' ಸಿನಿಮಾದಲ್ಲಿ ಭಯ ಹುಟ್ಟಿಸಿದ್ದ ಪ್ರಿಯಾಂಕಾ ಉಪೇಂದ್ರ ಆ ಬಳಿಕ ಸಸ್ಪೆನ್ಸ್ ಚಿತ್ರವಾದ 'ದೇವಕಿ'ಯಲ್ಲಿ ಅಭಿನಯಿಸಿದರು. ಈ ಎರಡು ಸಿನಿಮಾಗಳನ್ನು ಲೋಹಿತ್ ನಿರ್ದೇಶಕ ಮಾಡಿದ್ದರು. ಇವುಗಳ ಬಳಿಕ ಹೊಸ ನಿರ್ದೇಶಕರಿಗೆ ಪ್ರಿಯಾಂಕ ಅವಕಾಶ ನೀಡಿದ್ದಾರೆ.
ವಿಶೇಷ ಅಂದರೆ, ನಿರ್ದೇಶಕ ಪಿ ವಾಸು ಅಣ್ಣನ ಮಗನ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಗೌತಮ್ ವಿ ಪಿ ಈಗಾಗಲೇ ಒಂದು ತಮಿಳು ಸಿನಿಮಾ ಮಾಡಿದ್ದು, ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಪಿ ವಾಸು ಸಹೋದರ ವಿಮಲ್ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಪಿ ವಾಸು ರೀತಿ ಅವರ ಅಣ್ಣನ ಮಗ ಕೂಡ ಹಾರರ್ ಸಿನಿಮಾಗೆ ಕೈ ಹಾಕಿದ್ದಾರೆ.

ನವೆಂಬರ್ 9 ರಂದು ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬದ ವಿಶೇಷವಾಗಿ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ.
ಈ ಸಿನಿಮಾದ ಜೊತೆಗೆ ಗುರು ಮೂರ್ತಿ ಎಂಬ ಹೊಸ ನಿರ್ದೇಶಕನ ಸಿನಿಮಾದಲ್ಲಿಯೂ ಪ್ರಿಯಾಂಕ ನಟಿಸುತ್ತಿದ್ದಾರೆ. ಇದೊಂದು ಕಮರ್ಷಿಯಲ್ ಸಿನಿಮಾವಾಗಿದ್ದು, ಗುರುಮೂರ್ತಿ ಮೊದಲ ಚಿತ್ರವಾಗಿದೆ. ಸಿನಿಮಾದಲ್ಲಿ ಪ್ರಿಯಾಂಕ ಖಾಕಿ ತೊಡಲಿದ್ದಾರೆ.


Click it and Unblock the Notifications











