twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಂದು ಹಾರರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ

    |

    ನಟಿ ಪ್ರಿಯಾಂಕಾ ಉಪೇಂದ್ರ 'ದೇವಕಿ' ಸಿನಿಮಾದ ನಂತರ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇವುಗಳ ಪೈಕಿ ಒಂದು ಸಿನಿಮಾ ಹಾರರ್ ಸಿನಿಮಾವಾಗಿದೆ.

    'ಮಮ್ಮಿ' ಸಿನಿಮಾದಲ್ಲಿ ಭಯ ಹುಟ್ಟಿಸಿದ್ದ ಪ್ರಿಯಾಂಕಾ ಉಪೇಂದ್ರ ಆ ಬಳಿಕ ಸಸ್ಪೆನ್ಸ್ ಚಿತ್ರವಾದ 'ದೇವಕಿ'ಯಲ್ಲಿ ಅಭಿನಯಿಸಿದರು. ಈ ಎರಡು ಸಿನಿಮಾಗಳನ್ನು ಲೋಹಿತ್ ನಿರ್ದೇಶಕ ಮಾಡಿದ್ದರು. ಇವುಗಳ ಬಳಿಕ ಹೊಸ ನಿರ್ದೇಶಕರಿಗೆ ಪ್ರಿಯಾಂಕ ಅವಕಾಶ ನೀಡಿದ್ದಾರೆ.

    ಮೊಮ್ಮಗಳ ಸಿನಿಮಾ ನೋಡಿ ಭಾವುಕವಾದ ಉಪೇಂದ್ರ ತಾಯಿಮೊಮ್ಮಗಳ ಸಿನಿಮಾ ನೋಡಿ ಭಾವುಕವಾದ ಉಪೇಂದ್ರ ತಾಯಿ

    ವಿಶೇಷ ಅಂದರೆ, ನಿರ್ದೇಶಕ ಪಿ ವಾಸು ಅಣ್ಣನ ಮಗನ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಗೌತಮ್ ವಿ ಪಿ ಈಗಾಗಲೇ ಒಂದು ತಮಿಳು ಸಿನಿಮಾ ಮಾಡಿದ್ದು, ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಪಿ ವಾಸು ಸಹೋದರ ವಿಮಲ್ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಪಿ ವಾಸು ರೀತಿ ಅವರ ಅಣ್ಣನ ಮಗ ಕೂಡ ಹಾರರ್ ಸಿನಿಮಾಗೆ ಕೈ ಹಾಕಿದ್ದಾರೆ.

    Priyanka Upendra Next Movie Will Be Horror

    ನವೆಂಬರ್ 9 ರಂದು ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬದ ವಿಶೇಷವಾಗಿ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ.

    Devaki Review : 'ರೆಡ್ ಲೈಟ್'ನಲ್ಲಿ ಅರಳಿದ ತಾಯಿ ಮಗಳ ಅನುಬಂಧDevaki Review : 'ರೆಡ್ ಲೈಟ್'ನಲ್ಲಿ ಅರಳಿದ ತಾಯಿ ಮಗಳ ಅನುಬಂಧ

    ಈ ಸಿನಿಮಾದ ಜೊತೆಗೆ ಗುರು ಮೂರ್ತಿ ಎಂಬ ಹೊಸ ನಿರ್ದೇಶಕನ ಸಿನಿಮಾದಲ್ಲಿಯೂ ಪ್ರಿಯಾಂಕ ನಟಿಸುತ್ತಿದ್ದಾರೆ. ಇದೊಂದು ಕಮರ್ಷಿಯಲ್ ಸಿನಿಮಾವಾಗಿದ್ದು, ಗುರುಮೂರ್ತಿ ಮೊದಲ ಚಿತ್ರವಾಗಿದೆ. ಸಿನಿಮಾದಲ್ಲಿ ಪ್ರಿಯಾಂಕ ಖಾಕಿ ತೊಡಲಿದ್ದಾರೆ.

    English summary
    Actress Priyanka Upendra next movie will horror.
    Wednesday, October 23, 2019, 9:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X