ಮತ್ತೆ ಖಾಕಿ ತೊಟ್ಟು ಬಂದ ಪ್ರಿಯಾಂಕಾ ಉಪೇಂದ್ರ
ನಟಿ ಪ್ರಿಯಾಂಕಾ ಉಪೇಂದ್ರ ಅವರು ಇತ್ತೀಚಿನ ದಿನಗಳಲ್ಲಿ ಬಹಳ ಪರಿಣಾಮಕಾರಿ ಹಾಗೂ ಪ್ರಾಮುಖ್ಯತೆ ಹೊಂದಿರುವ ಕಥೆಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ಹೊಸ ಸೇರ್ಪಡೆ 'ಉಗ್ರಾವತಾರ' ಸಿನಿಮಾ.
'ದೇವಕಿ' ಸಿನಿಮಾ ಬಳಿಕ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರದಲ್ಲಿ ಪ್ರಿಯಾಂಕಾ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇಷ್ಟು ದಿನ ಮಾಡಿದ್ದ ಚಿತ್ರಗಳಿಗಿಂತ ಇದು ವಿಭಿನ್ನವಾಗಿರಲಿದೆ. ಯಾಕಂದ್ರೆ, ಇದು ಆಕ್ಷನ್ ಸಿನಿಮಾ. ಆಕ್ಷನ್ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿರುವುದು ಇದೇ ಮೊದಲು.
ಈ ಹಿಂದೆ 'ಸೆಕೆಂಡ್ ಹಾಫ್' ಎಂಬ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪೊಲೀಸ್ ಕಾನ್ಸ್ ಟೇಬಲ್ ಆಗಿ ನಟಿಸಿದ್ದರು, ಇದೀಗ, ಉಗ್ರಾವತಾರ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ (ತನಿಖಾಧಿಕಾರಿ) ಕಾಣಿಸಿಕೊಳ್ಳುತ್ತಿದ್ದಾರೆ.

ಡಿಐಜಿ ರೂಪಾ, ಕಿರಣ್ ಬೇಡಿ ಅಂತಹ ದಿಟ್ಟ ಆಫೀಸರ್ ಅವರಂತೆ ಹೋಲುವ ಪಾತ್ರ ಇದಾಗಿದೆಯಂತೆ. ಅವರಿಂದ ಸ್ಪೂರ್ತಿ ಪಡೆದಿರುವ ಖಡಕ್ ಅಧಿಕಾರಿ ಪಾತ್ರವನ್ನ ಪ್ರಿಯಾಂಕಾ ನಿಭಾಯಿಸುತ್ತಿದ್ದಾರಂತೆ.
ಅಂದ್ಹಾಗೆ, ಈ ಚಿತ್ರವನ್ನ ಗುರುಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಮೊದಲು ಪಿ.ವಾಸು ಅವರ ಅಣ್ಣನ ಮಗ ಗೌತಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾರರ್ ಸಿನಿಮಾದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











