For Quick Alerts
  ALLOW NOTIFICATIONS  
  For Daily Alerts

  ಹಾರರ್ ಸಿನಿಮಾಗಾಗಿ ಒಂದಾದ ಪ್ರಿಯಾಮಣಿ, ಪ್ರಿಯಾಂಕಾ ಮತ್ತು ಛಾಯಾ ಸಿಂಗ್

  |

  ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಮಹಿಳಾ ಪ್ರಧಾನ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ಮೂವರು ನಾಯಕಿಯರು ಒಟ್ಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ನಟಿ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ ಮತ್ತು ಛಾಯಾ ಸಿಂಗ್ ಮೂವರು ನಟಿಯರು ಹಾರರ್ ಸಿನಿಮಾಗಾಗಿ ಒಂದಾಗಿದ್ದಾರೆ.

  3 ಜನ ಒಳ್ಳೆ ಗ್ಲಾಮರ್ ಎಂದು ಕಾಲೆಳೆದ Upendra | Filmibeat Kannada

  ಈ ಮೂವರು ನಟಿಯರಿಗೆ ಕಾಲಿವುಡ್ ನಿರ್ದೇಶಕ ಗೌತಮ್ ವಿ.ಪಿ ಆಕ್ಷನ್ ಕಟ್ ಹೇಳುವ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಇನ್ನೂ ಬಹಿರಂಗವಾಗಿಲ್ಲ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಹಾರರ್ ಅಂಶಗಳು ಇದಿಯಂತೆ.

  '1980'ರಲ್ಲಿ ಪ್ರಿಯಾಂಕಾ: ರೆಟ್ರೋ ಲುಕ್ ನಲ್ಲಿ ಉಪೇಂದ್ರ ಪತ್ನಿ ಮಿಂಚಿಂಗ್'1980'ರಲ್ಲಿ ಪ್ರಿಯಾಂಕಾ: ರೆಟ್ರೋ ಲುಕ್ ನಲ್ಲಿ ಉಪೇಂದ್ರ ಪತ್ನಿ ಮಿಂಚಿಂಗ್

  ಚಿತ್ರದಲ್ಲಿ ಈ ಮೂವರು ನಟಿಯರು ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಚಿತ್ರೀಕರಣ ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಚಿತ್ರದಲ್ಲಿ ಶಿವಾಜಿ ಸೂರತ್ಕಲ್ ಖ್ಯಾತಿಯ ನಟ ವಿನಯ್ ಗೌಡ ಸಹ ನಟಿಸುತ್ತಿದ್ದಾರೆ.

  ಈ ಸಿನಿಮಾ ಪ್ರಸ್ತುತ ಕಾಲಘಟ್ಟದ ಜೊತೆಗೆ 1960ರ ದಶಕದ ಕಥೆಯನ್ನೂ ಒಳಗೊಂಡಿದೆ. ಹಾಗಾಗಿ ಪಾತ್ರಗಳು ಎರಡು ಶೇಡ್ ಗಳಲ್ಲಿ ಮೂಡಿಬರಲಿದೆ. ಅಂದಹಾಗೆ ಈ ಹೊಸ ಸಿನಿಮಾ ನವೆಂಬರ್ 17ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ನವೆಂಬರ್ 11ರಂದು ಸಿನಿಮಾ ಟೈಟಲ್ ರಿವೀಲ್ ಆಗಲಿದೆ.

  ಬೆಂಗಳೂರಿನಲ್ಲಿ ಟೈಟಲ್ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಶೀರ್ಷಿಕೆ ಬಹಿರಂಗಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಟ ಉಪೇಂದ್ರ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  English summary
  Kannada Actress Priyanka Upendra Priyamani And chaya singh are Screen space in Horror movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X