ಶ್ರುತಿ ಮೀಟೂ ವಿವಾದದ ಬಗ್ಗೆ ಪ್ರಿಯಾಂಕಾಗೂ ಕಾಡ್ತಿದೆ 2 ಅನುಮಾನ.!
ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿರುವ ಬಗ್ಗೆ ಸಾಕಷ್ಟು ಪರ-ವಿರೋಧ ವ್ಯಕ್ತವಾಗುತ್ತಿದೆ. ತಮಗೆ ಅನಿಸಿದ್ದನ್ನ ತಮ್ಮ ಗಮನಕ್ಕೆ ಬಂದ ಅಂಶಗಳನ್ನ ಸಿನಿ ಇಂಡಸ್ಟ್ರಿಯವರು ಹೇಳಿಕೊಳ್ಳುತ್ತಿದ್ದಾರೆ.
ಇದೀಗ, ಫೈರ್ ಸಂಸ್ಥೆಯಿಂದ ಹೊರಬಂದಿರುವ ನಟಿ ಪ್ರಿಯಾಂಕಾ ಉಪೇಂದ್ರ ಅವರು ಶ್ರುತಿ ಮೀಟೂ ವಿವಾದದ ಬಗ್ಗೆ ಮಾತನಾಡಿದ್ದು, ತಮಲ್ಲಿ ಉಂಟಾದ ಎರಡು ಅನುಮಾನಗಳನ್ನ ಪ್ರಸ್ತಾಪಿಸಿದ್ದಾರೆ.
ಯಾಕಂದ್ರೆ, ಫೈರ್ ಸಂಸ್ಥೆಗೆ ಪ್ರಿಯಾಂಕಾ ಉಪೇಂದ್ರ ಅವರು ಅಧ್ಯಕ್ಷರಾಗಿದ್ದರು. ಈ ಸಂಸ್ಥೆಯಡಿ ಏನೇ ಆದರೂ ತಮ್ಮ ಗಮನಕ್ಕೆ ಬರಬೇಕಿತ್ತು. ಆದ್ರೆ, ಪ್ರಿಯಾಂಕಾ ಅವರ ಗಮನಕ್ಕೆ ಬಾರದೇ ಕೆಲವು ಸಂಗತಿಗಳು ನಡೆದಿದ್ದರಿಂದ ಫೈರ್ ನಿಂದ ಹೊರಬಂದಿದ್ದಾರೆ. ಈ ಘಟನೆ ಬಗ್ಗೆ ಶ್ರುತಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ಪ್ರಮುಖವಾಗಿ ಎರಡು ಅಂಶಗಳನ್ನ ಚರ್ಚಿಸಿದ್ದಾರೆ. ಏನದು.? ಮುಂದೆ ಓದಿ.....

ಐಸಿಸಿ ಕಮಿಟಿ ಜೊತೆ ಚರ್ಚೆಯಾಗಿಲ್ಲ
'ಶ್ರುತಿ ಹರಿಹರನ್ ಅವರು ಮೀಟೂ ಆರೋಪ ಮಾಡುವ ಮುಂಚೆ, ನಮ್ಮ ಫೈರ್ ಸಂಸ್ಥೆಯ ಐಸಿಸಿ ಕಮಿಟಿ ಜೊತೆ ಚರ್ಚೆ ಮಾಡಬೇಕಿತ್ತು. ಇದು ನನ್ನ ಗಮನಕ್ಕೆ ಬಂದಿಲ್ಲ. ಇನ್ನು ಫೈರ್ ಸಂಸ್ಥೆಯ ಸುದ್ದಿಗೋಷ್ಠಿಯಲ್ಲಿ ಬರಿ ಹರಿಹರನ್ ಅವರದ್ದೇ ಸುದ್ದಿಯಾಯಿತು' ಎಂದು ಪ್ರಿಯಾಂಕಾ ಉಪೇಂದ್ರ
ಪ್ರಶ್ನಿಸಿದ್ದಾರೆ.

ಬರಿ ಶ್ರುತಿ ವಿಷ್ಯವೇಕೆ ದೊಡ್ಡದಾಯಿತು.?
'ನಮ್ಮ ಫೈರ್ ಸಂಸ್ಥೆಗೆ ಹಲವು ಮೀಟೂ ಆರೋಪ ಮತ್ತು ದೂರುಗಳು ಬಂದಿದ್ದವು. ಆದ್ರೆ, ಶ್ರುತಿ ಹರಿಹರನ್ ಅವರದ್ದೇ ಯಾಕೆ ಹೈಲೈಟ್ ಮಾಡಲಾಯಿತು.?' ಎಂದು ಫೈರ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಪ್ರಿಯಾಂಕಾ ಉಪೇಂದ್ರ ಪ್ರಶ್ನಿಸಿದ್ದಾರೆ.

ಹೊರಗಿನ ಜನಕ್ಕೆ ಈ ಅನುಮಾನ ಬರುತ್ತೆ
'ಕಳೆದ ನಾಲ್ಕೈದು ದಿನಗಳಿಂದ ನಡೆದ ಬೆಳವಣಿಗೆಗಳನ್ನ ಗಮನಿಸಿದ್ರೆ, ಶ್ರುತಿ ಹರಿಹರನ್ ಅವರನ್ನ ಮೀಟೂ ಆರೋಪವನ್ನ ಹೊರಗೆ ಹೇಳಬೇಕು, ಅದಕ್ಕೆ ಫೈರ್ ಸಂಸ್ಥೆ ವೇದಿಕೆಯಾಗಬೇಕೆಂದು ಮೊದಲೇ ನಿರ್ಧರಿಸಿದ್ದರು ಎಂಬ ಅನುಮಾನ ಸಾಮಾನ್ಯ ಜನರಿಗೆ ಬರುತ್ತೆ' ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.

8 ತಿಂಗಳಿಂದ ಶ್ರುತಿ ಫೈರ್ ಸದಸ್ಯರು
'ಆರಂಭದಲ್ಲಿ ಶ್ರುತಿ ಹರಿಹರನ್ ಫೈರ್ ಸಂಸ್ಥೆಯಲ್ಲಿ ಇರಲಿಲ್ಲ. ಈಗ ಏಳೆಂದು ತಿಂಗಳ ಹಿಂದೆ ಸೇರಿಕೊಂಡಿದ್ದರು. ಚೇತನ್ ಅವರೇ ಅವರನ್ನ ನಮ್ಮ ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ್ದರು. ಚೇತನ್ ಮತ್ತು ಶ್ರುತಿ ಇಬ್ಬರು ತುಂಬಾ ಆಕ್ಟೀವ್ ಆಗಿದ್ದರು. ತುಂಬಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ' ಎಂದು ಪ್ರಿಯಾಂಕಾ ತಿಳಿಸಿದ್ದರು.

'ಫೈರ್' ದುರ್ಬಳಕೆ ಆಯ್ತಾ.?
ಪ್ರಿಯಾಂಕಾ ಉಪೇಂದ್ರ ಅವರು ಹೇಳುವ ಪ್ರಕಾರ ಫೈರ್ ಸಂಸ್ಥೆಯ ಉದ್ದೇಶಗಳು, ಕೆಲಸಗಳು ಬೇರೆಯಾಗಿದ್ದವು. ಎಲ್ಲವನ್ನೂ ಸಂಸ್ಥೆ ಒಳಗಡೆಯೇ ಬಗೆಹರಿಸುವ ನಿರ್ಧಾರವಿತ್ತು. ಆದ್ರೆ, ಶ್ರುತಿ ವಿಷ್ಯ ಬಂದಾಗ ಯಾಕೆ ಇಷ್ಟು ದೊಡ್ಡದಾಯಿತು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಇದು ಸಾಮಾನ್ಯ ಜನರಿಗೂ ಅನುಮಾನ ಉಂಟು ಮಾಡುತ್ತಿದೆ. ಒಳ್ಳೆಯ ಉದ್ದೇಶದಿಂದ ಆರಂಭವಾದ ಫೈರ್, ಅಧಿಕೃತ ಚಾಲನೆಗೂ ಮುಂಚೆ ಗೊಂದಲದ ಗೂಡಾಗಿದೆ.


Click it and Unblock the Notifications











