twitter
    For Quick Alerts
    ALLOW NOTIFICATIONS  
    For Daily Alerts

    ಶ್ರುತಿ ಹರಿಹರನ್ ವಿವಾದ: 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ ಪ್ರಿಯಾಂಕಾ ಮತ್ತು ತಂಡ.!

    |

    ಕಳೆದ ವಾರದಿಂದ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಿಮಗೆಲ್ಲ ಚೆನ್ನಾಗಿ ಗೊತ್ತೇ ಇದೆ. #ಮೀಟೂ ಅಭಿಯಾನ ಸ್ಯಾಂಡಲ್ ವುಡ್ ಗೂ ಕಾಲಿಟ್ಟ ಮೇಲೆ 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಆರೋಪಿಸಿದರು.

    'ಫೈರ್' ಸಂಸ್ಥೆಯಲ್ಲಿ ಇರುವ ಶ್ರುತಿ ಹರಿಹರನ್ ಪ್ರೆಸ್ ಮೀಟ್ ಕೂಡ ಮಾಡಿದರು. ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಎಲ್ಲೆಡೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಶ್ರುತಿ ಹರಿಹರನ್ ಗೆ ಸಪೋರ್ಟ್ ಮಾಡಿದ ಚೇತನ್ ಮೇಲೆಯೂ 'ಹಣ'ದ ಆರೋಪ ಕೇಳಿಬಂದಿದೆ.

    ಒಳ್ಳೆಯ ಉದ್ದೇಶದಿಂದ 'ಫೈರ್' ಸಂಸ್ಥೆಯನ್ನ ಹುಟ್ಟುಹಾಕಲಾಗಿತ್ತು. ಆದ್ರೆ, ಈಗ ಆಗಿರುವ ಬೆಳವಣಿಗೆಗಳಿಂದ ಬೇಸರಗೊಂಡಿರುವ ಪ್ರಿಯಾಂಕಾ ಉಪೇಂದ್ರ 'ಫೈರ್' ಸಂಸ್ಥೆಯ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬರೀ ಪ್ರಿಯಾಂಕಾ ಉಪೇಂದ್ರ ಮಾತ್ರ ಅಲ್ಲ, ರೇಖಾ ರಾಣಿ, ವೀಣಾ ಸುಂದರ್, ಪಲ್ಲವಿ ಗುರುಕಿರಣ್, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ್ದಾರೆ. ಮುಂದೆ ಓದಿರಿ...

    ಪ್ರಿಯಾಂಕಾ ಉಪೇಂದ್ರ ಏನಂತಾರೆ.?

    ಪ್ರಿಯಾಂಕಾ ಉಪೇಂದ್ರ ಏನಂತಾರೆ.?

    ''ಹೆಣ್ಮಕ್ಕಳಿಗೆ ಸಹಾಯ ಮಾಡೋಣ ಅಂತ ನಾವು ಈ ಸಂಸ್ಥೆಯನ್ನು ಶುರು ಮಾಡಿದ್ವಿ. ಆದರೆ ಬರ್ತಾ ಬರ್ತಾ ಅವರ ಐಡಿಯಾಲಜಿಗಳು ಬೇರೆ ಆಗಿತ್ತು. ಅಧ್ಯಕ್ಷೆ ಆಗಿ ನಾನು ಪೂರ್ತಿ ಕಮಿಟ್ಮೆಂಟ್ ಕೊಡಲು ಸಾಧ್ಯ ಆಗುತ್ತಿರಲಿಲ್ಲ. ಹೀಗಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ'' ಎನ್ನುತ್ತಾರೆ ಪ್ರಿಯಾಂಕಾ ಉಪೇಂದ್ರ.

    ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

    ಪ್ರಿಯಾಂಕಾ ಉಪೇಂದ್ರಗೆ ಬೇಸರ

    ಪ್ರಿಯಾಂಕಾ ಉಪೇಂದ್ರಗೆ ಬೇಸರ

    ''ಶ್ರುತಿ ಹರಿಹರನ್ ಗೆ ಹೀಗೆ ಆದಾಗ, ಐಸಿಸಿಗೆ ದೂರು ಕೊಡಬೇಕಿತ್ತು. ಡೈರೆಕ್ಟ್ ಫೇಸ್ ಬುಕ್ ನಲ್ಲಿ ಬರೆದು, ಮಾರನೇ ದಿನ ಪ್ರೆಸ್ ಮೀಟ್ ಮಾಡಿದ್ದು ನನಗೆ ಸರಿ ಅಂತ ಅನಿಸಲಿಲ್ಲ. ನಾನು ಇಲ್ಲದೇ ಪ್ರೆಸ್ ಮೀಟ್ ಮಾಡಿದ್ದಾರೆ. ಹೀಗಾಗಿ, ನಾನು ರಾಜೀನಾಮೆ ಕೊಡಲು ನಿರ್ಧಾರ ಮಾಡಿದೆ'' ಅಂತಾರೆ ಪ್ರಿಯಾಂಕಾ ಉಪೇಂದ್ರ

    ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?

    ಸಮಸ್ಯೆ ಮನೆಯೊಳಗೆ ತೀರ್ಮಾನ ಆಗ್ಬೇಕಿತ್ತು

    ಸಮಸ್ಯೆ ಮನೆಯೊಳಗೆ ತೀರ್ಮಾನ ಆಗ್ಬೇಕಿತ್ತು

    ''ನಾನು, ಪ್ರಿಯಾಂಕಾ ಉಪೇಂದ್ರ ಮತ್ತು ಚೇತನ್ 'ಫೈಯರ್' ಸಂಸ್ಥೆ ಮಾಡಿದ್ವಿ. ಜೊತೆಗೆ ಇಬ್ಬರು ವಕೀಲರು ಇದ್ದರು. ನಮ್ಮ ಮನೆಯ ಸಮಸ್ಯೆಯನ್ನ ಮನೆಯೊಳಗೆ ಬಗೆಹರಿಸಿಕೊಳ್ಳುವುದು ಈ ಸಂಸ್ಥೆಯ ಉದ್ದೇಶ ಆಗಿತ್ತು. ಹೆಣ್ಮಕ್ಕಳ ಮಾನವನ್ನು ಹರಾಜಿಗೆ ಹಾಕದೆ, ಸಮಸ್ಯೆ ಬಗೆಹರಿಸಲು ಐಸಿಸಿ (ಇಂಟರ್ನಲ್ ಕಂಪ್ಲೇಂಟ್ ಕಮಿಟಿ) ಫಾರ್ಮ್ ಮಾಡಿದ್ವಿ. ಐಸಿಸಿಗೆ ಕಂಪ್ಲೇಂಟ್ ಬಂದರೆ, ಅಲ್ಲೇ ನ್ಯಾಯ ತೀರ್ಮಾನ ಮಾಡುತ್ತಿದ್ವಿ'' - ರೇಖಾ ರಾಣಿ

    ಧ್ರುವ ಜೊತೆ ಸಿನಿಮಾ ಸಿಗಲಿಲ್ಲ, ಸೇಡು ತೀರಿಸಿಕೊಳ್ಳಲು ಶ್ರುತಿ ಹೀಗೆ ಮಾಡಿದ್ರಂತೆ.!ಧ್ರುವ ಜೊತೆ ಸಿನಿಮಾ ಸಿಗಲಿಲ್ಲ, ಸೇಡು ತೀರಿಸಿಕೊಳ್ಳಲು ಶ್ರುತಿ ಹೀಗೆ ಮಾಡಿದ್ರಂತೆ.!

    ದಿಢೀರ್ ಅಂತ ಮೀಡಿಯಾಗೆ ಹೋದರು

    ದಿಢೀರ್ ಅಂತ ಮೀಡಿಯಾಗೆ ಹೋದರು

    ''ಐಸಿಸಿಗೆ ಒಂದು ದೂರು ಬಂದಿತ್ತು. ಅದರ ಬಗ್ಗೆ ತೀರ್ಮಾನ ಮಾಡುತ್ತಿದ್ವಿ. ಹೀಗಿರುವಾಗಲೇ, ಶ್ರುತಿ ಹರಿಹರನ್ ದಿಢೀರ್ ಅಂತ ಮೀಡಿಯಾಗೆ ಹೋದರು. ಐಸಿಸಿಗೆ ಏನೂ ತಿಳಿಸಲಿಲ್ಲ. ಅವರು ಮೀಡಿಯಾಗೆ ಹೋಗುವುದು ತಪ್ಪಲ್ಲ. ಆದ್ರೆ, ನಮ್ಮನ್ನ ತಯಾರಿ ಮಾಡದೇ ಹೋಗಿದ್ದಕ್ಕೆ ನಾವು ಕಕ್ಕಾಬಿಕ್ಕಿ ಆದ್ವಿ'' - ರೇಖಾ ರಾಣಿ

    ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳುಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು

    ಚಿತ್ರರಂಗದ ಬಗ್ಗೆ ಗೌರವ ಇದೆ

    ಚಿತ್ರರಂಗದ ಬಗ್ಗೆ ಗೌರವ ಇದೆ

    ''ಕನ್ನಡ ಚಿತ್ರರಂಗ ನಮಗೆ ಅನ್ನ ಹಾಕಿದೆ. ನಮಗೆ ಅದರ ಬಗ್ಗೆ ತುಂಬಾ ಗೌರವ ಇದೆ. ಶ್ರುತಿ ಹರಿಹರನ್ ಐಸಿಸಿಗೆ ಕಂಪ್ಲೇಂಟ್ ಕೊಡದೆ, ಫೈರ್ ಸಂಸ್ಥೆಯನ್ನ ಬಳಸಿಕೊಂಡು ಏಕಾಏಕಿ ಪ್ರೆಸ್ ಮೀಟ್ ಮಾಡಿದರೆ ಹೇಗೆ.? ಪೂರ್ವ ತಯಾರಿ ಮಾಡದೆ ಯುದ್ಧ ಮಾಡುವ ಹೆಣ್ಣಿನ ಜೊತೆಗೆ ನಾನು ಇರಲ್ಲ'' - ರೇಖಾ ರಾಣಿ

    ನಮಗೆ ಸರಿ ಹೋಗಲಿಲ್ಲ.!

    ನಮಗೆ ಸರಿ ಹೋಗಲಿಲ್ಲ.!

    ''ಶ್ರುತಿ ಹರಿಹರನ್ ಐಸಿಸಿಗೆ ಕಂಪ್ಲೇಂಟ್ ಮಾಡಿದ್ದರೆ, ಖಂಡಿತ ನಾವು ಅರ್ಜುನ್ ಸರ್ಜಾ ರನ್ನ ಕರೆದು ಮಾತನಾಡುತ್ತಿದ್ವಿ. ಅವರು ಕೂಡ ಖಂಡಿತ ಬರುತ್ತಿದ್ದರು. ಅರ್ಜುನ್ ಸರ್ಜಾ ಹೆಣ್ಮಕ್ಕಳಿಗೆ ತುಂಬಾ ಗೌರವ ಕೊಡ್ತಾರೆ. ಇಲ್ಲೇ ಸಮಸ್ಯೆಯ ತೀರ್ಮಾನ ಆಗಿರೋದು. ಆದರೆ, ಉದ್ದೇಶ ಏನಿತ್ತೋ.? ನಮಗೆ ಸರಿ ಹೋಗಲಿಲ್ಲ. ಹೀಗಾಗಿ, 'ಫೈರ್' ಇಂದ ಹೊರಗೆ ಬಂದಿದ್ದೇನೆ'' ಎಂದು 'ಫಿಲ್ಮಿಬೀಟ್ ಕನ್ನಡ'ಕ್ಕೆ ರೇಖಾ ರಾಣಿ ತಿಳಿಸಿದ್ದಾರೆ.

    English summary
    Priyanka Upendra, Rekha Rani and team bids good bye to 'FIRE'.
    Wednesday, October 24, 2018, 18:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X