For Quick Alerts
  ALLOW NOTIFICATIONS  
  For Daily Alerts

  '1980' ಸಿನಿಮಾದ ಶೂಟಿಂಗ್ ಮುಗಿಸಿದ ನಟಿ ಪ್ರಿಯಾಂಕಾ ಉಪೇಂದ್ರ

  |

  ಲಾಕ್‌ಡೌನ್‌ ಆದ್ಮೇಲೆ 1980 ಸಿನಿಮಾದ ಚಿತ್ರೀಕರಣ ಆರಂಭಿಸಿದ್ದ ನಟಿ ಪ್ರಿಯಾಂಕಾ ಉಪೇಂದ್ರ ಈಗ ಶೂಟಿಂಗ್ ಮುಗಿಸಿದ್ದಾರೆ. ಇದೀಗ, 1980 ಸಿನಿಮಾದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.

  ಸಂಪೂರ್ಣವಾಗಿ ರೆಟ್ರೋ ಶೈಲಿಯಲ್ಲಿ ಈ ಸಿನಿಮಾ ತಯಾರಾಗುತ್ತಿರುವುದು ವಿಶೇಷ. ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಬಹುತೇಕ ಶೂಟಿಂಗ್ ನಡೆದಿದೆ.

  '1980'ಕ್ಕೆ ವಾಪಸ್ ಹೋಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ'1980'ಕ್ಕೆ ವಾಪಸ್ ಹೋಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ

  ಸ್ವತಃ ಚಿತ್ರತಂಡ ಪ್ರಕಟಿಸಿರುವ ಪ್ರಕಾರ ಫೆಬ್ರವರಿ 22 ರಂದು 1980 ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಸಂಜೆ 6 ಗಂಟೆ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಯಾರು ಬರಲಿದ್ದಾರೆ ಎಂಬ ಕುತೂಹಲ ಮೂಡಿದೆ.

  ಅಂದ್ಹಾಗೆ, ಈ ಸಿನಿಮಾಗೆ ರಾಜ್ ಕಿರಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸವಾರಿ-2, ವಸಂತ ಕಾಲ, ಮಿಸ್ಡ್ ಕಾಲ್ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ರಾಜ್ ಕಿರಣ್‌ ಅವರಿಗೆ ಚೊಚ್ಚಲ ಸಿನಿಮಾ.

  ಪ್ರಿಯಾಂಕಾ ಅವರ ಜೊತೆ ಪ್ರಮುಖ ಪಾತ್ರಗಳಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮಾ ಮುಂತಾದವರು ನಟಿಸುತ್ತಿದ್ದಾರೆ.

  ಈ ಸಿನಿಮಾ ಹೊರತುಪಡಿಸಿ, ಪ್ರಿಯಾಮಣಿ, ಛಾಯಾ ಸಿಂಗ್ ಜೊತೆ ಹಾರರ್ ಥ್ರಿಲ್ಲರ್ ಸಿನಿಮಾ ಆರಂಭಿಸಿದ್ದಾರೆ. ಇದರ ಜೊತೆಗೆ 'ಉಗ್ರಾವತಾರ' ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದಲ್ಲೂ ನಟಿಸುತ್ತಿದ್ದಾರೆ.

  ಹಾಡಲ್ಲೇ ಹೀಗೆ ಇನ್ನೂ ಸಿನಿಮಾ ಹೇಗಿರುತ್ತೊ..? | Pogaru | Filmibeat Kannada
  English summary
  Kannada actress Priyanka Upendra's 1980 movie shooting wrapped up and Teaser releasing on February 22nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X