For Quick Alerts
  ALLOW NOTIFICATIONS  
  For Daily Alerts

  ಮೇ 1ಕ್ಕೆ ಹಾಡು ಕೇಳಿಸಲು ಬರುತ್ತಾರೆ ಪ್ರಿಯಾಂಕ ಉಪೇಂದ್ರ

  By Naveen
  |
  ಮೇ ೧ ಕ್ಕೆ ಪ್ರಿಯಾಂಕಾ ಉಪೇಂದ್ರ ಸೆಕೆಂಡ್ ಹಾಫ್ ಸ್ಪೆಷಲ್ | Filmibeat Kannada

  ನಟಿ ಪ್ರಿಯಾಂಕ ಉಪೇಂದ್ರ ಈಗ ಪೊಲೀಸ್ ಯೂನಿಫಾಂ ನಲ್ಲಿ ಮಿಂಚುತ್ತಿದ್ದಾರೆ. '2nd ಹಾಫ್' ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಪೊಲೀಸ್ ಕಾನ್ಸ್ಟೇಬಲ್ ಪಾತ್ರ ಮಾಡಿದ್ದು, ಈ ಸಿನಿಮಾ ಈಗ ಆಡಿಯೋ ಬಿಡುಗಡೆಗೆ ಸಿದ್ಧವಾಗಿದೆ. ಮೇ 1ಕ್ಕೆ ಸಿನಿಮಾದ ಹಾಡುಗಳು ಬಿಡುಗಡೆ ಆಗಲಿದೆ.

  ಚಿಕ್ಕಮ್ಮನ ಜೊತೆ ತೆರೆ ಹಂಚಿಕೊಂಡ ಉಪೇಂದ್ರ ಅಣ್ಣನ ಮಗ.! ಚಿಕ್ಕಮ್ಮನ ಜೊತೆ ತೆರೆ ಹಂಚಿಕೊಂಡ ಉಪೇಂದ್ರ ಅಣ್ಣನ ಮಗ.!

  ನವ ನಿರ್ದೇಶಕ ಯೋಗಿ 'ಸೆಕೆಂಡ್ ಹಾಫ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ನಟ ಉಪೇಂದ್ರ ಅವರ ಕುಟುಂಬದ ಮತ್ತೊಬ್ಬ ಕುಡಿ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದೆ. ಉಪೇಂದ್ರ ಅಣ್ಣ ಸುನೀಂದ್ರ ಅವರ ಪುತ್ರ ನಿರಂಜನ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ತಮ್ಮ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಅವರ ಸಿನಿಮಾದಲ್ಲಿ ನಟಿಸಿದ್ದಾರೆ.

  ಈಗಾಗಲೇ ಪ್ರಿಯಾಂಕಾ ಉಪೇಂದ್ರ ಫಸ್ಟ್ ಲುಕ್ ಟಾಕ್ ಆಫ್ ದಿ ಟೌನ್ ಆಗಿತ್ತು. ಸಿನಿಮಾದ ಟ್ರೇಲರ್ ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಈಗ ಆಡಿಯೋ ಬಗ್ಗೆ ನಿರೀಕ್ಷೆ ಇದೆ. ನಾಗೇಶ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಚೇತನ್ ಸೋಸ್ಕಾ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದೆ. ಯೋಗರಾಜ್ ಭಟ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಮೇ 1 ರಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ '2nd ಹಾಫ್' ಸಿನಿಮಾದ ಆಡಿಯೋ ಲಾಂಚ್ ಆಗಲಿದೆ.

  English summary
  Actress Priyanka Upendra's 'Second Half' movie audio will launch on May 1st. Actor Upendra's brother son Niranjan Debut in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X