ಪ್ರಿಯಾಂಕ ಪ್ರಕಾರ ಪತಿ ಉಪೇಂದ್ರ ಬೆಸ್ಟ್ ನಟ, ಬೆಸ್ಟ್ ಡೈರೆಕ್ಟರ್ ಅಲ್ಲವಂತೆ! ಮತ್ತೇನು?

ರಿಯಲ್ ಸ್ಟಾರ್ ಉಪೇಂದ್ರ.. ಚಿತ್ರರಂಗ ಕಂಡ ಸಾರ್ವಕಾಲಿಕ ಅತ್ಯುನ್ನತ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ನಟ. ಇನ್ನು ನಟನೆ ವಿಚಾರಕ್ಕೆ ಬಂದರೆ ಕೂಡ ಉಪೇಂದ್ರ ವಿಭಿನ್ನ ಹಾಗೂ ಸೂಪರ್. ಈ ಮೂಲಕ ಉಪೇಂದ್ರ ತಮ್ಮ ನಿರ್ದೇಶನ ಹಾಗೂ ನಟನೆ ಎರಡರಿಂದಲೂ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇನ್ನು ಇಷ್ಟರ ಮಟ್ಟಿಗೆ ನಿರ್ದೇಶನ ಹಾಗೂ ನಟನೆಯಲ್ಲಿ ಗೆದ್ದಿರುವ ಉಪೇಂದ್ರ ಅವರ ನಿರ್ದೇಶನ ಹಾಗೂ ನಟನೆಗಿಂತ ತನಗೆ ಉಪೇಂದ್ರ ಅವರ ಬೇರೆಯದ್ದೇ ಪಾತ್ರ ಸಿಕ್ಕಾಪಟ್ಡೆ ಇಷ್ಟ ಎಂದು ಪ್ರಿಯಾಂಕ ಉಪೇಂದ್ರ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಹೌದು, ಇಂದು ( ಜೂನ್ 18 ) ಅಪ್ಪಂದಿರ ದಿನಾಚರಣೆ ಅಂಗವಾಗಿ ಪ್ರಿಯಾಂಕ ಉಪೇಂದ್ರ ತಮ್ಮ ಪತಿ ಹಾಗೂ ಮಕ್ಕಳ ಫೋಟೊಗಳನ್ನು ಟ್ವೀಟ್ ಮಾಡಿದ್ದು, "ಜನರು ನೀವು ಉತ್ತಮ ನಿರ್ದೇಶಕನಾ ಅಥವಾ ನಟನಾ ಎಂಬ ಪ್ರಶ್ನೆಯನ್ನು ನನ್ನ ಬಳಿ ಕೇಳಿದರೆ ನೀವು ನಿರ್ವಹಿಸುತ್ತಿರುವ ತಂದೆಯ ಪಾತ್ರ ಅತ್ಯುತ್ತಮ ಎಂದು ನಾನು ಹೇಳುತ್ತೇನೆ. ತಂದೆಯಂದಿರ ದಿನದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ತಂದೆಯಂದಿರ ದಿನಾಚರಣೆಯಂದು ವಿಶೇಷವಾಗಿ ಪ್ರಿಯಾಂಕಾ ಉಪೇಂದ್ರ ಪೋಸ್ಟ್ ಮಾಡಿದ್ದು, ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











