'1980'ರಲ್ಲಿ ಪ್ರಿಯಾಂಕಾ: ರೆಟ್ರೋ ಲುಕ್ ನಲ್ಲಿ ಉಪೇಂದ್ರ ಪತ್ನಿ ಮಿಂಚಿಂಗ್
ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ 'ಲೈಫ್ ಈಸ್ ಬ್ಯುಟಿಫುಲ್' ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದ ಪ್ರಿಯಾಂಕಾ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಒಪ್ಪಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ಪ್ರಿಯಾಂಕಾ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಕೊರೊನಾ ಲಾಕ್ ಡೌನ್ ಬಳಿಕ ಪ್ರಿಯಾಂಕಾ ಉಪೇಂದ್ರ 'ಉಗ್ರಾವತಾರ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಪ್ರಿಯಾಂಕಾ ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬರ್ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದೆ ಓದಿ..

1980 ಸಿನಿಮಾದಲ್ಲಿ ಪ್ರಿಯಾಂಕಾ
ಲೈಫ್ ಈಸ್ ಬ್ಯೂಟಿಫುಲ್ ಮತ್ತು ಉಗ್ರಾವತಾರ ಸಿನಿಮಾಗಳ ಜೊತೆಗೆ ಪ್ರಿಯಾಂಕಾ ಈಗ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ದೇವಕಿ ಸಿನಿಮಾ ನಂತರ ಪ್ರಿಯಾಂಕಾ ಇನ್ನೊಂದು ಥ್ರಿಲ್ಲರ್ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರಕ್ಕೆ 1980 ಎಂದು ಹೆಸರಿಡಲಾಗಿದೆ. ಹೆಸರೇ ಹೇಳುವ ಹಾಗೆ ಇದು 1980ಯಲ್ಲಿ ನಡೆಯುವ ಕಥೆ.

ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ ಸಿನಿಮಾ
ಪ್ರಿಯಾಂಕಾ ಹೊಸ ಸಿನಿಮಾವನ್ನು ದುರ್ಗಾಪೂಜೆಯ ದಿನ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಸಂಪೂರ್ಣ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ. ಬಹುತೇಕ ಸಿನಿಮಾ ಕೊಡಗು ಮತ್ತು ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ರಾಜ್ ಕಿರಣ್ ನಿರ್ದೇಶನ
ಅಂದ್ಹಾಗೆ ಈ ಸಿನಿಮಾಗೆ ರಾಜ್ ಕಿರಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸವಾರಿ-2, ವಸಂತ ಕಾಲ, ಮಿಸ್ಡ್ ಕಾಲ್ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ರಾಜ್ ಕಿರಣ್ ಇದೀಗ 1980 ಸಿನಿಮ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
Recommended Video

ವರ್ಕೌಟ್ ಮಾಡಿ ತೆಳ್ಳಗಾಗಿರುವ ಪ್ರಿಯಾಂಕಾ
1980 ಸಿನಿಮಾದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ತಾರಬಳಗದಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮಾ ಮುಂತಾದವರು ನಟಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಖತ್ ವರ್ಕೌಟ್ ಮಾಡಿ ಮತ್ತಷ್ಟು ಫಿಟ್ ಆಗಿರುವ ನಟಿ ಪ್ರಿಯಾಂಕಾ, 1980 ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.


Click it and Unblock the Notifications











