»   » ಉಪ್ಪಿ ರಾಜಕೀಯ ಎಂಟ್ರಿ ಬಗ್ಗೆ ಪ್ರಿಯಾಂಕಾ ಉಪೇಂದ್ರ ಏನಂದ್ರು?

ಉಪ್ಪಿ ರಾಜಕೀಯ ಎಂಟ್ರಿ ಬಗ್ಗೆ ಪ್ರಿಯಾಂಕಾ ಉಪೇಂದ್ರ ಏನಂದ್ರು?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಪ್ರವೇಶ ಬಗ್ಗೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಪ್ರತಿಕ್ರಿಯಿಸಿದ್ದು, ''ಇದು ನನಗೂ ಕೂಡ ಸರ್ಪ್ರೈಸ್'' ಎಂದಿದ್ದಾರೆ.

ಉಪೇಂದ್ರ ಅವರು ಮೊದಲಿನಿಂದಲೂ ರಾಜಕೀಯದ ಕಡೆ ಒಲುವು ಹೊಂದಿದ್ದರು. ಹೀಗಾಗಿ ಪಾರಾದರ್ಶಕವಾದ ರಾಜಕೀಯ ಪಕ್ಷ ಕಟ್ಟಲಿದ್ದಾರೆ, ನಮ್ಮ ಸಂಪೂರ್ಣ ಬೆಂಬಲ ಅವರಿಗಿದೆ ಎಂದು ಉಪೇಂದ್ರ ಅವರ ಮಡದಿ ತಿಳಿಸಿದ್ದಾರೆ.

ಅಷ್ಟಕ್ಕೂ, ಉಪೇಂದ್ರ ಅವರ ರಾಜಕೀಯ ಎಂಟ್ರಿ ಬಗ್ಗೆ ಪ್ರಿಯಾಂಕಾ ಉಪೇಂದ್ರ ಏನಂದ್ರು? ಉಪ್ಪಿ ಪಕ್ಷದ ಬಗ್ಗೆ ಪ್ರಿಯಾಂಕಾ ಬಿಟ್ಟುಕೊಟ್ಟ ಸುಳಿವೇನು ಮುಂದೆ ಓದಿ....

ನನಗೂ ಸರ್ಪ್ರೈಸ್ ಆಗಿದೆ

'ಉಪೇಂದ್ರ ಅವರಿಗೆ ರಾಜಕೀಯದ ಬಗ್ಗೆ ಐಡಿಯಾಗಳಿದ್ದವು. ಒಳ್ಳೆಯ ಧ್ಯೇಯಗಳೂ ಇದ್ದವು. ಅವುಗಳ ಬಗ್ಗೆ ಮನೆಯಲ್ಲಿ ನನ್ನ ಜೊತೆ ಚರ್ಚೆಯನ್ನೂ ಮಾಡುತ್ತಿದ್ದರು. ಆದರೆ, ರಾಜಕೀಯ ಪ್ರವೇಶಿಸುವ ಸುದ್ದಿ ನನಗೂ ಸರ್​ಪ್ರೈಸ್. ಆ ಸುದ್ದಿ ನನಗೂ ಗೊತ್ತಿರಲಿಲ್ಲ' - ಪ್ರಿಯಾಂಕಾ ಉಪೇಂದ್ರ, ಉಪೇಂದ್ರ ಪತ್ನಿ

ಉಪ್ಪಿಯ ಈ ಐಡಿಯಾಗಳು ಜಾರಿಯಾದ್ರೆ ಭವ್ಯ ಭಾರತ ನಿರ್ಮಾಣ ಶತಸಿದ್ಧ

ಪಾರದರ್ಶಕ ರಾಜಕೀಯ ಪಕ್ಷ ಕಟ್ಟಲಿದ್ದಾರೆ

'ಉಪೇಂದ್ರ ಅವರ ರಾಜಕೀಯ ಪಕ್ಷದ ರೂಪುರೇಷೆ ನನಗೂ ಗೊತ್ತಿಲ್ಲ. ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಪಕ್ಷ ಕಟ್ಟುವ ಉತ್ಸಾಹದಲ್ಲಿದ್ದಾರೆ. ಎಲ್ಲರನ್ನೂ ಒಳಗೊಂಡು, ಸಂಪೂರ್ಣ ಪಾರದರ್ಶಕವಾಗಿ ರಾಜಕೀಯ ಪಕ್ಷ ಕಟ್ಟಲಿದ್ದಾರೆ' - ಪ್ರಿಯಾಂಕಾ ಉಪೇಂದ್ರ, ಉಪೇಂದ್ರ ಪತ್ನಿ

ತುಂಬು ಪ್ರೀತಿಯಿಂದ ನಮ್ಮ ಉಪೇಂದ್ರರಿಗೊಂದು ಪತ್ರ...

ನಮ್ಮ ಸಂಪೂರ್ಣ ಬೆಂಬಲವಿದೆ

''ನನ್ನ ಮತ್ತು ಕುಟುಂಬದ ಸಂಪೂರ್ಣ ಬೆಂಬಲವಿದೆ. ಅವರಲ್ಲಿ ಜನಸೇವೆ ಮಾಡಬೇಕು ಎಂಬ ಪ್ರಾಮಾಣಿಕ ಮನಸ್ಸಿದೆ. ಅವರು ಗೆದ್ದೇ ಗೆಲ್ತಾರೆ'' ಎಂಬ ಭರವಸೆ ಕೂಡ ಪ್ರಿಯಾಂಕಾ ಅವರು ವ್ಯಕ್ತಪಡಿಸುತ್ತಾರೆ.

'ಪ್ರಜಾಕೀಯ'ದ ಬಗ್ಗೆ ಉಪೇಂದ್ರ ಮಾತನಾಡಿರುವ ಎಕ್ಸ್ ಕ್ಲೂಸಿವ್ ಆಡಿಯೋ ಇಲ್ಲಿದೆ

ಇಂದು ಅಧಿಕೃತ ಘೋಷಣೆ

ಈ ಎಲ್ಲ ಬೆಳವಣಿಗೆಗಳನ್ನ ನೋಡುತ್ತಿದ್ದರೇ, ಬಹುಶಃ ಉಪೇಂದ್ರ ಅವರು ಸ್ವತಂತ್ರ ಪಕ್ಷ ಕಟ್ಟುವುದು ಬಹುತೇಕ ಖಚಿತ. ರಾಜಕೀಯ ಕುರಿತು ಮಾತನಾಡಲು ಇಂದು ಉಪೇಂದ್ರ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದು, ತಮ್ಮ ರಾಜಕೀಯ ರೂಪುರೇಷೆ ಬಗ್ಗೆ ಬಹಿರಂಗಪಡಿಸಲಿದ್ದಾರೆ.

ಹೊಸ ಪಕ್ಷದೊಂದಿಗೆ ರಾಜಕೀಯ ರಣರಂಗಕ್ಕೆ ಎಂಟ್ರಿ ಕೊಡ್ತಾರಾ ರಿಯಲ್ ಸ್ಟಾರ್..?

English summary
Upendra's Wife Priyanka Upendra Talk About Real Star Upendra Political Entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada