»   » ಪೊಲೀಸ್ ಕಾನ್ಸ್‌ಟೇಬಲ್ ಆಗಿ ಖದರ್ ತೋರಿಸಲಿದ್ದಾರೆ ಪ್ರಿಯಾಂಕಾ ಉಪೇಂದ್ರ!

ಪೊಲೀಸ್ ಕಾನ್ಸ್‌ಟೇಬಲ್ ಆಗಿ ಖದರ್ ತೋರಿಸಲಿದ್ದಾರೆ ಪ್ರಿಯಾಂಕಾ ಉಪೇಂದ್ರ!

Posted By:
Subscribe to Filmibeat Kannada

ಪ್ರಿಯಾಂಕಾ ಉಪೇಂದ್ರ ಈಗ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಪ್ರಿಯಾಂಕಾ ಈ ರೀತಿಯ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆ ಮೂಲಕ 'ಮಮ್ಮಿ ಸೇವ್ ಮಿ' ಸಿನಿಮಾದ ನಂತರ ಪ್ರಿಯಾಂಕಾ ಉಪೇಂದ್ರ ಯಾವ ಸಿನಿಮಾ ಮಾಡುತ್ತಾರೆ ಎಂಬ ನಿರೀಕ್ಷೆಗೆ ಈಗ ಉತ್ತರ ಸಿಕ್ಕಿದೆ.

ಪ್ರಿಯಾಂಕಾ ಉಪೇಂದ್ರ-ಅನಸೂಯ: ಅತ್ತೆ-ಸೊಸೆ ಅಂದ್ರೆ ಹೀಗಿರ್ಬೇಕು.!

'ಪ್ರಿಯಾಂಕ' ಮತ್ತು 'ಮಮ್ಮಿ ಸೇವ್ ಮಿ' ಚಿತ್ರಗಳು ಪ್ರಿಯಾಂಕಾ ಉಪೇಂದ್ರ ಅಭಿಮಾನಿಗಳಿಗೆ ತುಂಬ ಇಷ್ಟ ಆಗಿತ್ತು. ಹೊಸ ಹೊಸ ಪಾತ್ರಗಳ ಹುಡುಕಾಟದಲ್ಲಿರುವ ಪ್ರಿಯಾಂಕಾ ಈಗ ಪೊಲೀಸ್ ಕಾನ್ಸ್‌ಟೇಬಲ್ ಅವತಾರದಲ್ಲಿ ಎಂಟ್ರಿ ಕೊಡಲಿದ್ದಾರೆ. ಮುಂದೆ ಓದಿ....

ಪೊಲೀಸ್ ಬಗ್ಗೆ ಸ್ಟಡಿ ಮಾಡ್ತಿದ್ದಾರೆ ಪ್ರಿಯಾಂಕಾ! ಏನ್ ಬುಕ್ ಬರೀತಿದಾರಾ?

ಪೋಲೀಸ್ ಗೆಟಪ್

ಪ್ರಿಯಾಂಕಾ ಉಪೇಂದ್ರ ತಮ್ಮ ಮುಂದಿನ ಸಿನಿಮಾದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿನ ಅವರ ಲುಕ್ ಈಗ ರಿವೀಲ್ ಆಗಿದೆ.

ಯಾವ ಸಿನಿಮಾ?

'ಸೆಕೆಂಡ್ ಹಾಫ್' ಎಂಬ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿದ್ದು, ಚಿತ್ರದಲ್ಲಿ ಅವರು ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾರೆ.

ಹೊಸ ನಿರ್ದೇಶಕ

ನವ ನಿರ್ದೇಶಕ ಯೋಗಿ 'ಸೆಕೆಂಡ್ ಹಾಫ್' ಸಿನಿಮಾದ ನಿರ್ದೇಶಕರಾಗಿದ್ದು, ಚಿತ್ರದ ಪ್ರಮುಖ ಪಾತ್ರಕ್ಕೆ ಪ್ರಿಯಾಂಕಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಥೆ ಇಷ್ಟ ಆಗಿದೆ

ಸಿನಿಮಾದ ಕಥೆ ಮಹಿಳಾ ಪ್ರಧಾನವಾಗಿದೆಯಂತೆ. ಅನುರಾಧ ಎಂಬ ಒಬ್ಬ ಮಧ್ಯಮ ವರ್ಗದ ಹುಡುಗಿಯ ಪಾತ್ರವನ್ನು ಪ್ರಿಯಾಂಕಾ ಇಲ್ಲಿ ನಿರ್ವಹಿಸುತ್ತಿದ್ದು, ಕಥೆ ಅವರಿಗೆ ತುಂಬ ಇಷ್ಟ ಆಗಿದೆಯಂತೆ.

ಪೊಲೀಸ್ ಕಾನ್ಸ್‌ಟೇಬಲ್

ಪ್ರಿಯಾಂಕಾ ಉಪೇಂದ್ರ ಪೊಲೀಸ್ ಕಾನ್ಸ್ಟೇಬಲ್ ಪಾತ್ರವನ್ನು ಮಾಡುತ್ತಿರುವುದು ಇದೇ ಮೊದಲು. ಈ ಪಾತ್ರ ತುಂಬ ಚಾಲೆಂಜಿಂಗ್ ಆಗಿದೆ ಅಂತ ಅವರು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ.

ಖದರ್ ಲುಕ್

ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಪ್ರಿಯಾಂಕಾ ಖಾಕಿ ಹಾಕಿ, ಲಾಟಿ ಹಿಡಿದು, ಲೂನ ಓಡಿಸಿಕೊಂಡು ಬರುವ ಲುಕ್ ಚೆನ್ನಾಗಿದೆ.

English summary
Kannada Actress 'Priyanka Upendra' to play Police Constable in her next movie Titled 'Second Half'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada