ಮೊಟ್ಟ ಮೊದಲ ಬಾರಿಗೆ ವಿಶಿಷ್ಟ ಪಾತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ.!

By Harshitha

Recommended Video

ಪ್ರಿಯಾಂಕ ಉಪೇಂದ್ರ ಬಗ್ಗೆ ಹೀಗೊಂದು ಸುದ್ದಿ..! Filmibeat Kannada

ಬೆಂಗಾಲಿ ಬೆಡಗಿ ನಟಿ ಪ್ರಿಯಾಂಕಾ ಉಪೇಂದ್ರ ಕನ್ನಡದಲ್ಲಿ ಇಲ್ಲಿಯವರೆಗೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಕೋಟಿಗೊಬ್ಬ', 'H2O', 'ರೌಡಿ ಅಳಿಯ' ಚಿತ್ರಗಳಲ್ಲಿ ಬೆಳ್ಳಿ ಬೊಂಬೆಯಂತೆ ಪ್ರಿಯಾಂಕಾ ಮಿಂಚಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ರವರನ್ನ ಮದುವೆ ಆದ್ಮೇಲೆ, ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ಪ್ರಿಯಾಂಕಾ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವುದು ನಿಮಗೆಲ್ಲಾ ಗೊತ್ತೇ ಇದೆ.

ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಹೆಚ್ಚು ಒಲವು ತೋರುತ್ತಿರುವ ಪ್ರಿಯಾಂಕಾ ಉಪೇಂದ್ರ, 'ಪ್ರಿಯಾಂಕಾ', 'ಮಮ್ಮಿ ಸೇವ್ ಮಿ', 'ಸೆಕೆಂಡ್ ಹಾಫ್' ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

'ಮಮ್ಮಿ ಸೇವ್ ಮಿ' ಚಿತ್ರದಲ್ಲಿ ತುಂಬು ಗರ್ಭಿಣಿಯಾಗಿ ನಟಿಸಿದ್ದ ಪ್ರಿಯಾಂಕಾ, 'ಸೆಕೆಂಡ್ ಹಾಫ್'ನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದರು. ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯಾವುದು ಆ ಸಿನಿಮಾ.? ಯಾವುದು ಆ ವಿಶೇಷ ಪಾತ್ರ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...

ಪ್ರಿಯಾಂಕಾ ಉಪೇಂದ್ರ ಒಪ್ಪಿಕೊಂಡಿರುವ ಹೊಸ ಸಿನಿಮಾ ಯಾವುದು.?

ಪ್ರಿಯಾಂಕಾ ಉಪೇಂದ್ರ ಒಪ್ಪಿಕೊಂಡಿರುವ ಹೊಸ ಸಿನಿಮಾ ಯಾವುದು.?

ಪ್ರತಿಭಾವಂತ ಯುವ ನಿರ್ದೇಶಕ ಭುವನ್ ನಾಯಕ್ ಆಕ್ಷನ್ ಕಟ್ ಹೇಳಲು ಹೊರಟಿರುವ ಹೊಸ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಆದ್ರೆ, ಪ್ರಿಯಾಂಕಾ ಉಪೇಂದ್ರ ರವರಿಗೆ ಮಾತ್ರ ತಮ್ಮ ಪಾತ್ರ ಸಿಕ್ಕಾಪಟ್ಟೆ ಇಷ್ಟವಾಗಿದೆ.

ಪ್ರಿಯಾಂಕಾ ಪಾತ್ರವೇನು.?

ಪ್ರಿಯಾಂಕಾ ಪಾತ್ರವೇನು.?

ಇದೇ ಮೊದಲ ಬಾರಿಗೆ ನಟಿ ಪ್ರಿಯಾಂಕಾ ಉಪೇಂದ್ರ ಅವಳಿ-ಜವಳಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟ್ವಿನ್ಸ್ ಆಗಿ ನಟಿಸುವುದು ಅಷ್ಟು ಸುಲಭ ಅಲ್ಲ. ತುಂಬಾ ಚಾಲೆಂಜಿಂಗ್ ಆಗಿರುವ ಈ ಪಾತ್ರವನ್ನ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕಾ ಜೊತೆಗೆ...

ಪ್ರಿಯಾಂಕಾ ಜೊತೆಗೆ...

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಪ್ರಿಯಾಂಕಾ ಜೊತೆಗೆ ನಟಿ ಶರ್ಮಿಳಾ ಮಾಂಡ್ರೆ, ಭಾವನಾ ರಾವ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೋಸ್ಕರ ಇವರಿಬ್ಬರೂ ಬೈಕ್ ಓಡಿಸುವುದನ್ನು ಕಲಿಯುತ್ತಿದ್ದಾರಂತೆ.

ಶೂಟಿಂಗ್ ಯಾವಾಗ್ಲಿಂದ ಶುರು.?

ಶೂಟಿಂಗ್ ಯಾವಾಗ್ಲಿಂದ ಶುರು.?

ನಿರ್ದೇಶಕ ಭುವನ್ ಸದ್ಯ 'ಗಮ್ಯ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಅದು ಮುಗಿದ ಬಳಿಕ ಈ ಚಿತ್ರ ಸೆಟ್ಟೇರಲಿದೆ. ಅಂದ್ಹಾಗೆ, ಪ್ರಿಯಾಂಕಾ ಅಭಿನಯದ 'ಹೌರಾ ಬ್ರಿಡ್ಜ್' ಇನ್ನೂ ಕೆಲವೇ ತಿಂಗಳಲ್ಲಿ ತೆರೆಗೆ ಬರಲಿದೆ.

More from Filmibeat

English summary
Priyanka Upendra to play Twins in Bhuvan Nayak's directorial next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X