'ಐ ಲವ್ ಯೂ' ಹಾಡಿನ ಬಗ್ಗೆ ಪ್ರಿಯಾಂಕ ತೀವ್ರ ಬೇಸರ : ಚಂದ್ರು, ರಚಿತಾ ಮಾಡಿದ್ದು ಸರಿಯೇ?!

Recommended Video

I Love You Kannada Movie: ರಚಿತಾ ರಾಮ್ ಮಾತಿಗೆ ಉಪೇಂದ್ರ ಪತ್ನಿ ಅಸಮಧಾನ

'ಐ ಲವ್ ಯೂ' ಸಿನಿಮಾದ ಒಂದು ಹಾಡು ಸಿಕ್ಕಾಪಟ್ಟೆ ಬೋಲ್ಡ್ ಮತ್ತು ಹಾಟ್ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡು ಬರುತ್ತಲೇ ಇದೆ. ನಟಿ ರಚಿತಾ ರಾಮ್ ಮೊದಲ ಬಾರಿಗೆ ಇಷ್ಟೊಂದು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ಚಿತ್ರದ ಬಗ್ಗೆ ಒಂದು ಇಂಗ್ಲೀಷ್ ಪತ್ರಿಕೆಗೆ ರಚಿತಾ ಸಂದರ್ಶನ ನೀಡಿದ್ದರು. ಅದರಲ್ಲಿ 'ಮಾತನಾಡಿ ಮಾಯಮಾದೆ..' ಹಾಡನ್ನು ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರು ಎಂದು ಹೇಳಿದ್ದರು. ಆದರೆ, ಈ ಹೇಳಿಕೆ ಉಪ್ಪಿ ಪತ್ನಿ, ನಟಿ ಪ್ರಿಯಾಂಕ ಉಪೇಂದ್ರ ಬೇಸರ ಉಂಟು ಮಾಡಿದೆ.

ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ ಪ್ರಿಯಾಂಕ ಉಪೇಂದ್ರ ''ಆ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವುದು ಚಿನ್ನಿ ಪ್ರಕಾಶ್. ಆದರೆ, ಸುಮ್ಮನೆ ಉಪ್ಪಿ ಹೆಸರನ್ನು ರಚಿತಾ ತೆಗೆದಿದ್ದು, ಸರಿ ಅಲ್ಲ'' ಎಂದು ಹೇಳಿದ್ದಾರೆ.

ಇಡೀ ಸಿನಿಮಾದಲ್ಲಿ ಒಂದೇ ಒಂದು ಹಾಡಿನ ದೃಶ್ಯವನ್ನೇ ಹೈಲೈಟ್ ಮಾಡುತ್ತಿದ್ದು, ಹೀಗೆ ಯಾಕೆ ರೀತಿ ಮಾಡುತ್ತಿದ್ದಾರೆ. ಎಂದು ಪ್ರಿಯಾಂಕ ಉಪೇಂದ್ರ ತಮ್ಮ ಅಸಮಾದಾನ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ...

ರಚಿತಾ ಹೇಳಿಕೆ ಕಂಡು ಬೇಸರ ಆಯ್ತು

ರಚಿತಾ ಹೇಳಿಕೆ ಕಂಡು ಬೇಸರ ಆಯ್ತು

''ಕೆಲವು ದಿನಗಳ ಹಿಂದೆ ಒಂದು ಇಂಗ್ಲೀಷ್ ಪತ್ರಿಕೆಯಲ್ಲಿ ರಚಿತಾ ಅವರ ಒಂದು ಸಂದರ್ಶನ ನೋಡಿದೆ. ಅವರಲ್ಲಿ 'ಐ ಲವ್ ಯೂ' ಚಿತ್ರದ ಹಾಡನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರು. ಅದಕ್ಕೆ ನನಗೆ ಆಕ್ಟ್ ಮಾಡಲು ಸುಲಭ ಆಯ್ತು ಎಂದು ಹೇಳಿದ್ದರು. ಆ ವಿಷಯ ನೋಡಿದಾಗ ತುಂಬ ಬೇಸರ ಆಯಿತು. ಅದಕ್ಕೆ ಆ ಪತ್ರಿಕೆಯ ಜೊತೆಗೆಯೇ ಮಾಡಿನಾಡಿ ಇದರ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದೆ.''

ಹಾಡನ್ನು ಉಪ್ಪಿ ನಿರ್ದೇಶನ ಮಾಡಿದ್ದಾರೆ ಎನ್ನುವುದು ತಪ್ಪು

ಹಾಡನ್ನು ಉಪ್ಪಿ ನಿರ್ದೇಶನ ಮಾಡಿದ್ದಾರೆ ಎನ್ನುವುದು ತಪ್ಪು

''ಆ ಹಾಡನ್ನು ಉಪೇಂದ್ರ ನಿರ್ದೇಶನ ಮಾಡಿದ್ದಾರೆ ಎನ್ನುವುದು ತಪ್ಪು. ಉಪೇಂದ್ರ ಒಬ್ಬ ದೊಡ್ಡ ನಿರ್ದೇಶಕರು. ಅವರು ಆ ಹಾಡನ್ನು ಡೈರೆಕ್ಟ್ ಮಾಡಿದ್ದಾರೆ ಎನ್ನುವುದು ತುಂಬ ದೊಡ್ಡ ಹೇಳಿಕೆ. ಸುಮ್ಮನೆ ಹಾಗೆ ಹೇಳಬಾರದು. ಆ ಹಾಡನ್ನು ಚಿನ್ನ ಪ್ರಕಾಶ್ ಮಾಸ್ಟರ್ ನಿರ್ದೇಶಕ ಮಾಡಿದ್ದಾರೆ. ನಾನು ಹಾಡನ್ನೂ ನೋಡಿಲ್ಲ.. ಸಿನಿಮಾವನ್ನೂ ನೋಡಿಲ್ಲ.. ಸಾಂಗ್ ಶೂಟಿಂಗ್ ನಲ್ಲಿಯೂ ಇರಲಿಲ್ಲ. ನಾನು ಈ ದೃಶ್ಯವನ್ನು ಟ್ರೇಲರ್ ನಲ್ಲಿ ನೋಡಿದೆ. ಅದೆ ಬಗ್ಗೆ ಕೇಳಿದಾಗ ಮೂವಿಯಲ್ಲಿ ಬೇರೆ ರೀತಿ ಇರುತ್ತದೆ ಎಂದಿದ್ದರು.''

ಆ ಹಾಡನ್ನೇ ಯಾಕೆ ಅಷ್ಟೊಂದು ಹೈಲೈಟ್ ಮಾಡುತ್ತಿದ್ದೀರಿ

ಆ ಹಾಡನ್ನೇ ಯಾಕೆ ಅಷ್ಟೊಂದು ಹೈಲೈಟ್ ಮಾಡುತ್ತಿದ್ದೀರಿ

''ರಚಿತಾ ಆ ಹಾಡಿನಲ್ಲಿ ನಟನೆ ಮಾಡಬಾರದಿತ್ತು. ಮುಂದೆ ಈ ರೀತಿಯ ಪಾತ್ರ ಮಾಡುವುದಿಲ್ಲ. ಆ ಹಾಡನ್ನು ಚಿತ್ರದಿಂದ ತೆಗೆಸುತ್ತೇನೆ ಎಂದೆಲ್ಲ ಹೇಳುತ್ತಿದ್ದಾರೆ. ಇದನ್ನು ಯಾಕೆ ಅದನ್ನು ಅಷ್ಟೊಂದು ದೊಡ್ಡದು ಮಾಡುತ್ತಿದ್ದಾರೆ. ನೀನು ಪಾತ್ರದ ಒಳಗೆ ಬಾ, ನಾನು ಪಾತ್ರದ ಒಳಗೆ ಬರುತ್ತೇನೆ ಎಂದು ಉಪೇಂದ್ರ ಹೇಳಿದರು ಎಂದೆಲ್ಲ ಹೇಳುತ್ತಿದ್ದಾರೆ. ರಚಿತಾ ಯಾಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತುಂಬ ಬೇಸರ ಆಯ್ತು.''

ಇಷ್ಟ ಇಲ್ಲದಿದ್ದರೆ ಹಾಡು ಮಾಡಲೇಬಾರದಿತ್ತು

ಇಷ್ಟ ಇಲ್ಲದಿದ್ದರೆ ಹಾಡು ಮಾಡಲೇಬಾರದಿತ್ತು

''ಉಪ್ಪಿ ಸರ್ ಡೈರೆಕ್ಷನ್ ಮಾಡಿದ್ದಾರೆ ಎಂದು ರಚಿತಾ ಹೇಳಿದಾಗ ನಾನು ಅದಕ್ಕೆ ಸ್ಪಷ್ಟನೆ ನೀಡುತ್ತಿದ್ದೇನೆ ಅಷ್ಟೇ. ಅವರಿಗೆ ಇಷ್ಟ ಇಲ್ಲ ಎಂದ ಮೇಲೆ ನಾನು ಆ ಸಾಂಗ್ ಮಾಡುವುದಿಲ್ಲ ಎಂದು ಹೇಳಬಹುದಿತ್ತು. ಸಿನಿಮಾಗೆ ಯು ಎ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರದ ನಿರ್ದೇಶಕರು ಆ ರೀತಿ ಏನು ಇಲ್ಲ ಎಂದು ಹೇಳಿದ್ದಾರೆ. ಆದರೆ, ಒಬ್ಬ ನಟಿಯೇ ಈ ರೀತಿ ಹೇಳಿದರೆ ನಾವು ಸಿನಿಮಾ ನೋಡುವುದು ಹೇಗೆ.''

ಈ ರೀತಿ ದೃಶ್ಯ ಹೈಲೈಟ್ ಆದ್ರೆ, ಫ್ಯಾಮಿಲಿ ಹೇಗೆ ಬರುತ್ತದೆ?

ಈ ರೀತಿ ದೃಶ್ಯ ಹೈಲೈಟ್ ಆದ್ರೆ, ಫ್ಯಾಮಿಲಿ ಹೇಗೆ ಬರುತ್ತದೆ?

''ಎರಡು ವರ್ಷ ಆದ ಮೇಲೆ ಉಪ್ಪಿ ಸಿನಿಮಾ ಬರುತ್ತಿದೆ. ಜನರಿಗೆ ಸಿನಿಮಾ ನೋಡಲು ಇಷ್ಟ ಇರುತ್ತದೆ. ಆದರೆ, ಆ ಒಂದೇ ಹಾಡಿನ ಸನ್ನಿವೇಶವನ್ನು ಹೈಲೈಟ್ ಮಾಡಿ ತೋರಿಸುವುದು ಯಾಕೆ?. ಸಿನಿಮಾ ಚೆನ್ನಾಗಿದ್ದರೂ ಈ ರೀತಿ ದೃಶ್ಯ ಹೈಲೈಟ್ ಆದ್ರೆ, ಫ್ಯಾಮಿಲಿ ಹೇಗೆ ಬರುತ್ತದೆ. ಇದರಿಂದ ಉಪ್ಪಿ ಇಮೇಜ್ ಹಾಳಾಗಬಾರದು. ಜನರನ್ನು ಸೆಳೆಯಲು ಅದೇ ಹಾಡಿನ ಪೋಟೋಗಳೆನ್ನೇ ಹೆಚ್ಚು ಬಳಸುತ್ತಿದ್ದಾರೆ. ಇಂಟರ್ ನೆಟ್ ತುಂಬ ಅದೇ ಫೋಟೊಗಳು ಇವೆ. ಹಾಡು ಚಿತ್ರದ ಒಂದು ಭಾಗವಾಗಿರಲಿ ಆದರೆ, ಇಷ್ಟೊಂದು ಹೈಲೈಟ್ ಆಗಬಾರದು ಸಿನಿಮಾ ಎಂದ ಮೇಲೆ ಎಲ್ಲವೂ ಇರುತ್ತದೆ ಅಲ್ಲವೇ.''

'ಎ', 'ಉಪೇಂದ್ರ' ಚಿತ್ರದ ಪ್ರಸ್ತಾಪ ಹೆಚ್ಚು ಆಗುತ್ತಿದೆ

'ಎ', 'ಉಪೇಂದ್ರ' ಚಿತ್ರದ ಪ್ರಸ್ತಾಪ ಹೆಚ್ಚು ಆಗುತ್ತಿದೆ

''ಎ', 'ಉಪೇಂದ್ರ' ರೀತಿಯ ಸಿನಿಮಾ 'ಐ ಲವ್ ಯೂ' ಎಂದು ಚಿತ್ರವನ್ನು ಪ್ರೊಜೆಕ್ಟ್ ಮಾಡಿದ್ದಾರೆ. ಆ ಚಿತ್ರಗಳು ಕ್ಲಾಸಿಕ್ ಸಿನಿಮಾಗಳು. ಅದನ್ನು ಎಷ್ಟು ಕಷ್ಟ ಪಟ್ಟು ಆ ಸಮಯದಲ್ಲಿ ಮಾಡಿದ್ದಾರೆ. ತುಂಬ ದೊಡ್ಡ ಹೆಸರು ಮಾಡಿರುವ ಚಿತ್ರವನ್ನು ಇಟ್ಟುಕೊಂಡು, ಅದರ ಜನಪ್ರಿಯತೆ ಬಳಸಿಕೊಂಡು ಏನೋ ಮಾಡಬಾರದು. ಆದ್ರೆ, ಯಾಕೆ ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ.''

ಹಾಡಿನ ಬೀಟ್ ಪ್ರಚಾರ ಆಗುತ್ತಿದೆ

ಹಾಡಿನ ಬೀಟ್ ಪ್ರಚಾರ ಆಗುತ್ತಿದೆ

''ಕುಟುಂಬ ಸಮೇತವಾಗಿ ಬನ್ನಿ ಎಂದು ಪೋಸ್ಟರ್ ನಲ್ಲಿ ಹಾಕಿದ್ದಾರೆ. ಆದರೆ, ಒಂದೇ ಹಾಡನ್ನು ಹೈಲೈಟ್ ಮಾಡುತ್ತಿದ್ದಾರೆ. ಕೆಲ ಡೈಲಾಗ್ ಕೇಳಿಯೂ ತುಂಬ ಬೇಸರ ಆಗಿದೆ. ತೆಲುಗು ಟ್ರೇಲರ್ ನಲ್ಲಿ ಹಾಗೂ ಎಲ್ಲ ಕಡೆಯೂ ಆ ಹಾಡಿನ ಬೀಟ್ ಪ್ರಚಾರ ಆಗುತ್ತಿದೆ. ಆ ಹಾಡು ಚೆನ್ನಾಗಿದೆ ಅದನ್ನು ಬೇರೆ ರೀತಿಯಲ್ಲೂ ಶೂಟ್ ಮಾಡುವ ಸಾಧ್ಯತೆ ಇತ್ತು. ಇದೆಲ್ಲ ಯಾಕೆ ಆಗುತ್ತಿದೆ ನನಗೆ ಗೊತ್ತಿಲ್ಲ.''

More from Filmibeat

English summary
Actress Priyanka Upendra unhappy with Rachita Ram statement about 'I Love you' movie song. 'I Love you' movie is starring Upendra and Rachita directed by R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X