»   » ಪ್ರೀತಿಯ ಪತಿ ಉಪೇಂದ್ರಗೆ ಪ್ರಿಯಾಂಕಾ ಉಪೇಂದ್ರ ವಿಶ್ ಮಾಡಿದ್ದು ಹೀಗೆ

ಪ್ರೀತಿಯ ಪತಿ ಉಪೇಂದ್ರಗೆ ಪ್ರಿಯಾಂಕಾ ಉಪೇಂದ್ರ ವಿಶ್ ಮಾಡಿದ್ದು ಹೀಗೆ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ ನಾಳೆ (ಸಪ್ಟೆಂಬರ್ 18) ನಡೆಯಲಿದೆ. ಈಗಾಗಲೇ ಉಪ್ಪಿ ಹುಟ್ಟುಹಬ್ಬಕ್ಕೆ ಅನೇಕ ಸಿದ್ದತೆಗಳು ನಡೆದಿದೆ. ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೊರಲು ಶುರು ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಈ ವರ್ಷದ ಹುಟ್ಟುಹಬ್ಬಕ್ಕೆ ಬರಲಿದೆ ಒಂದು ವಿಶೇಷ ಪುಸ್ತಕ

ಅಭಿಮಾನಿಗಳ ಸಡಗರ ಒಂದೆಡೆಯಾದರೆ ಪತ್ನಿ ಪ್ರಿಯಾಂಕಾ ಉಪೇಂದ್ರ ತಮ್ಮ ಗಂಡನಿಗೆ ಅಡ್ವಾನ್ಸ್ ಆಗಿ ವಿಶ್ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಪ್ರಿಯಾಂಕಾ ಉಪೇಂದ್ರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶುಭ ಕೋರಿದ್ದಾರೆ. ''ಹ್ಯಾಪಿ ಬರ್ತ್ ಡೇ ಡಾರ್ಲಿಂಗ್'' ಎಂದು ಉಪ್ಪಿಗೆ ಪ್ರಿಯಾಂಕ ವಿಶ್ ಮಾಡಿದ್ದಾರೆ.

Priyanka Upendra wishes her husband Actor Upendra for his 49th birthday

ಅಂದಹಾಗೆ, 'ಉತ್ತಮ ಪ್ರಜಾ ಪಾರ್ಟಿ' ಪಕ್ಷವನ್ನು ಸ್ಥಾಪನೆ ಮಾಡಿರುವ ಉಪ್ಪಿ ಈ ವರ್ಷದ ತಮ್ಮ ಹುಟ್ಟುಹಬ್ಬವನ್ನು ಅದಷ್ಟೂ ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಇದರ ಜೊತೆಗೆ ಉಪೇಂದ್ರ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ 'ನಮ್ಮ ಉಪ್ಪಿ, ಹತ್ತಿರದವರು ಕಂಡಂತೆ' ಎಂಬ ವಿಶೇಷವಾದ ಪುಸ್ತಕ ಕೂಡ ಬರಲಿದೆ.

English summary
Priyanka Upendra wishes her husband Actor Upendra for his 49th birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada