twitter
    For Quick Alerts
    ALLOW NOTIFICATIONS  
    For Daily Alerts

    'ದೇವಕಿ' : ಉಪೇಂದ್ರ ಮಗಳ ಮೊದಲ ಚಿತ್ರದ ಮೊದಲ ಟೀಸರ್

    |

    'ಹೌರಬ್ರಿಡ್ಜ್' ಸಿನಿಮಾ ಈಗ 'ದೇವಕಿ'ಯಾಗಿ ಬದಲಾಗಿದೆ. 'ದೇವಕಿ' ಸಿನಿಮಾದ ಮೊದಲ ಟೀಸರ್ ನಿನ್ನೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಟ ಉಪೇಂದ್ರ ಪ್ರೀತಿಯ ಮಗಳು ಐಶ್ವರ್ಯ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಲಾಂಚ್ ಆಗಿದ್ದಾರೆ. ಪಾರೂಲ್ ಯಾದವ್ ಐಶ್ವರ್ಯ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

    'ದೇವಕಿ' ಟೀಸರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟೀಸರ್ ಕುತೂಹಲ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ ಮೇಕಿಂಗ್ ಹಾಗೂ ಸೌಂಡ್ ಎಷ್ಟೊಂದು ವಿಶೇಷವಾಗಿದೆ ಎಂಬುದನ್ನು ಟೀಸರ್ ಹೇಳುತ್ತಿದೆ. ನಿರ್ದೇಶಕ ಲೋಹಿತ್ ಮತ್ತೆ ತಮ್ಮ ಅದ್ಬುತ ಕೆಲಸವನ್ನು ತೆರೆ ಮೇಲೆ ತೋರಿಸಿದ್ದಾರೆ.

    'ದೇವಕಿ'ಯಾಗಿ ಬದಲಾಯ್ತು 'ಹೌರಬ್ರಿಡ್ಜ್' ಸಿನಿಮಾ ಟೈಟಲ್ 'ದೇವಕಿ'ಯಾಗಿ ಬದಲಾಯ್ತು 'ಹೌರಬ್ರಿಡ್ಜ್' ಸಿನಿಮಾ ಟೈಟಲ್

    2K ಯಲ್ಲಿ ಟೀಸರ್ ಹೊರಬಂದಿದ್ದು, ಕ್ವಾಲಿಟಿಗೆ ದೊಡ್ಡ ಪ್ರಶಂಸೆ ಸಿಕ್ಕಿದೆ. ಸಿಕ್ಕಾಪಟ್ಟೆ ರಾ ಆಗಿ, ನೈಜತೆಯ ದೃಶ್ಯಗಳಿವೆ. ಇಡೀ ವಿಶ್ವದಲ್ಲಿಯೇ 'ಚಲ್ಡ್ ಟ್ರಾಕಿಂಗ್' ದೊಡ್ಡ ಮಾಫಿಯಾ ಆಗಿದ್ದು, ಆ ವಿಷಯದ ಮೇಲೆ ಸಿನಿಮಾದ ಕಥೆ ಹೆಣೆಯಲಾಗಿದೆ.

    priyanka upendras devaki kannada movie teaser out

    ಪ್ರಿಯಾಂಕ ಉಪೇಂದ್ರ ದೇವಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ಉಪೇಂದ್ರ ಮೊದಲ ಚಿತ್ರದಲ್ಲಿಯೇ ತಮ್ಮ ಪ್ರತಿಭೆ ತೋರಿಸಿದ್ದಾರೆ. ಉಳಿದಂತೆ, ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಖದರ್ ಪ್ರದರ್ಶಿಸಿದ್ದಾರೆ.

    ದೇವಕಿ ಟೀಸರ್ ಗೆ ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಟೀಸರ್ ಗೆ ಬಂದಿರುವ ಎಲ್ಲ ಕಮೆಂಟ್ಸ್ ಗಳು ಪಾಸಿಟಿವ್ ಆಗಿವೆ. ವೇಣು ಕ್ಯಾಮರಾ, ನೊಬಿನ್ ಪೌಲ್ ಸಂಗೀತ ಹಾಗೂ ಸಿ ರವಿಚಂದ್ರನ್ ಸಂಕಲನ ಟೀಸರ್ ನ ಹೈಲೈಟ್ ಆಗಿದೆ. ಆರ್ ಸಿ ಎಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗದ್ದು, ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

    English summary
    Actress Priyanka Upendra and her daughter Aishwarya Upendra's 'Devaki' kannada movie teaser out. This is Aishwarya Upendra's debut movie. The movie is directed by Lohith
    Friday, March 15, 2019, 10:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X