ದೊಡ್ಡ ಪ್ರತಿಕ್ರಿಯೆ ಪಡೆಯುತ್ತಿದೆ 'ದೇವಕಿ' ಟ್ರೇಲರ್
Recommended Video
'ದೇವಕಿ' ಸಿನಿಮಾದ ಟ್ರೇಲರ್ ನಿನ್ನೆ (ಗುರುವಾರ) ಬಿಡುಗಡೆಯಾಗಿದೆ. ನಟ ರಕ್ಷಿತ್ ಶೆಟ್ಟಿ ಚಿತ್ರದ ಟ್ರೇಲರ್ ಅನ್ನು ಲಾಂಚ್ ಮಾಡಿದ್ದಾರೆ.
ಟ್ರೇಲರ್ ನೋಡಿವರಿಗೆ ಒಂದು ಕ್ಷಣ ವಾವ್ ಅನಿಸುತ್ತದೆ. ಸಿನಿಮಾದ ಮೇಕಿಂಗ್ ಸ್ಟೈಲ್, ಹಿನ್ನಲೆ ಸಂಗೀತ, ಕ್ಯಾಮರಾ ವರ್ಕ್ ಅದ್ಭುತವಾಗಿದೆ. ಟ್ರೇಲರ್ ನಲ್ಲಿ ಪ್ರತಿಯೊಂದು ಅಂಶವನ್ನು ಹೊಸದಾಗಿ ತೋರಿಸಲಾಗಿದೆ.
ಆರಾಧ್ಯ ಎಂಬ ಹುಡುಗಿಯ ಪಾತ್ರದಲ್ಲಿ ಐಶ್ವರ್ಯ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಿಶೋರ್ ಖದರ್ ಜೋರಾಗಿದೆ. ಪ್ರಿಯಾಂಕ ಉಪೇಂದ್ರ ನಟನೆ ಕೂಡ ತುಂಬನೇ ಚೆನ್ನಾಗಿದೆ.

ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಈ ಟ್ರೇಲರ್ ಗೆ ಈಗ 55 ಸಾವಿರಕ್ಕೂ ಹೆಚ್ಚು ಹಿಟ್ಸ್ ಸಿಕ್ಕಿದೆ. ಮೂರು ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಮುಖ್ಯವಾಗಿ ಟ್ರೇಲರ್ ಗೆ ಬಂದಿರುವ ಎಲ್ಲ ಕಾಮೆಂಟ್ಸ್ ಗಳು ಕೂಡ ಪಾಸಿಟಿವ್ ಆಗಿದೆ.
''ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರೀಯ ಅದ್ಭುತ ಚಿತ್ರಕಥೆಗಳ ಸಾಲಿಗೆ ಈ ಸಿನಿಮಾ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.'' ಎಂದು ಟ್ರೇಲರ್ ನೋಡಿದ ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.
ಒಂದು ಮಹತ್ವದ ವಿಷಯ ಜೊತೆಗೆ ಅದನ್ನು ಕೇಳಿರುವ ಶೈಲಿ ರೋಚಕವಾಗಿದೆ. ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಗಳಲ್ಲಿ ಸೌಂಡ್ ಪ್ರಮುಖವಾಗಿದೆ. ನೋಬಿನ್ ಪೌಲ್ ಸಂಗೀತ, ಹೆಚ್ ಸಿ ವೇಣು ಕ್ಯಾಮರಾ ಸಿನಿಮಾಗೆ ಬಲ ತುಂಬಿದೆ. ಮದನ್ ಬೆಳ್ಳಿಸಾಲು ಚಿತ್ರದ ಹಾಡುಗಳನ್ನು ಬರೆದಿದ್ದಾರೆ.
ನಿರ್ದೇಶಕ ಲೋಹಿತ್ ಹೆಚ್ ಮನು ಮತ್ತೆ ತಮ್ಮ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಅವರ ಪರಿಶ್ರಮ ತೆರೆ ಮೇಲೆ ಕಾಣುತ್ತಿದೆ. 'ದೇವಕಿ' ಸಿನಿಮಾ ಜುಲೈ 5 ರಂದು ಬಿಡುಗಡೆಯಾಗಿದೆ. ನಿರ್ಮಾಪಕ ಕಾರ್ತಿಕ್ ಗೌಡ ಚಿತ್ರದ ವಿತರಣೆ ಮಾಡಲಿದ್ದಾರೆ.
'ದೇವಕಿ' ಟ್ರೇಲರ್ ನೋಡಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











