»   » ಹಸಿರು, ಹಸಿರ ನಡುವಣ ವೈವಿಧ್ಯಮಯ ಉಸಿರು ಇಷ್ಟವೆನ್ನುವ ಈ ಮಾತಿನಮಲ್ಲಿ ‘ಎಚ್‌2ಓ’ ಮೂಲಕ ಕೋಟಿ ಕನಸು ಕಟ್ಟಿಕೊಂಡಿದ್ದಾಳೆ

ಹಸಿರು, ಹಸಿರ ನಡುವಣ ವೈವಿಧ್ಯಮಯ ಉಸಿರು ಇಷ್ಟವೆನ್ನುವ ಈ ಮಾತಿನಮಲ್ಲಿ ‘ಎಚ್‌2ಓ’ ಮೂಲಕ ಕೋಟಿ ಕನಸು ಕಟ್ಟಿಕೊಂಡಿದ್ದಾಳೆ

Posted By:
Subscribe to Filmibeat Kannada

‘ನನಗೆ ಪ್ರಕೃತಿ ಎಂದರೆ ಇಷ್ಟ. ನಾನೇ ಪ್ರಕೃತಿ!’

ನೀರು ಅರ್ಥಾತ್‌ ‘ಎಚ್‌2ಓ’ ಚಿತ್ರದಲ್ಲಿ ಅಭಿನಯಿಸಿದ್ದರಿಂದಲೋ ಏನೋ, ನಟಿ ಪ್ರಿಯಾಂಕ ಮಾತುಗಳು ಕೂಡ ಪ್ರಕೃತಿ ಮಯವಾಗಿದ್ದವು. ಪ್ರಿಯಾಂಕ ಮಾತನಾಡುತ್ತಿದ್ದುದು ‘ಕೋಟಿಗೊಬ್ಬ’ ಚಿತ್ರದ ಸೆಟ್‌ನಲ್ಲಿ ; ವಿಷ್ಮುವರ್ಧನ್‌ ಅವರೊಂದಿಗೆ ನಟಿಸುತ್ತಿರುವ ಖುಷಿಯನ್ನು ತುಂಬಿಕೊಂಡು.

ಕೋಟಿಗೊಬ್ಬ ಸೆಟ್‌ನಲ್ಲಿದ್ದರೂ ಪ್ರಿಯಾಂಕ ಎಚ್‌2ಓ ಗುಂಗಿನಿಂದ ಹೊರಬಂದಂತಿರಲಿಲ್ಲ . ಎಚ್‌2ಓ ಸೂಪರ್‌ಹಿಟ್‌ ಆಗುವ ಬಗೆಗೂ ಅವರಿಗೆ ಯಾವುದೇ ಅನುಮಾನ ಉಳಿದಂತಿರಲಿಲ್ಲ . ‘ಎಚ್‌2ಓ ಅದ್ಭುತ ಸಿನಿಮಾ. ಈ ಬಹುಭಾಷಾ ಸಿನಿಮಾದ ಮೂಲಕ ತಮ್ಮ ವೃತ್ತಿಜೀವನಕ್ಕೆ ಬ್ರೇಕ್‌ ಸಿಗಬಹುದೆನ್ನುವ ನಿರೀಕ್ಷೆಯೂ ಇದೆ’ ಎಂದರು ಪ್ರಿಯಾಂಕ.


ಪ್ರಿಯಾಂಕ ಹೊಗಳಿಕೆಯ ಸರದಿಯಲ್ಲಿ ನಂತರದ ಸ್ಥಾನ ಎಚ್‌2ಓ ನಾಯಕರಾದ ಉಪೇಂದ್ರ ಹಾಗೂ ಪ್ರಭುದೇವ್‌ ಅವರಿಗೆ. ಒಬ್ಬರಿಗಿಂತ ಒಬ್ಬರು ಅನ್ನುವಂತೆ ಚೆನ್ನಾಗಿ ನಟಿಸಿದ್ದಾರೆ ಎಂದ ಪ್ರಿಯಾಂಕ ‘ತಾವು ಯಾರಿಗೆ ಸೇರುತ್ತೀರಿ’ ಅನ್ನುವ ಪ್ರಶ್ನೆಗೆ ಮಾತ್ರ ನಾಚಿಕೊಂಡು ಸುಮ್ಮನಾದರು.

ಮಾತಿಗೆ ಕೂತರೆ ಮೈ ಮರೆಯುತ್ತೇನೆ ಎಂದು ಖುಷಿಯಿಂದಲೇ ಹೇಳಿಕೊಂಡ ಪ್ರಿಯಾಂಕ ಮಾತಿನ ಜೋಗದಲ್ಲಿ ಕಾವೇರಿ, ಪ್ರಕೃತಿ, ಕಲಾತ್ಮಕ ಸಿನಿಮಾ, ಕಮರ್ಷಿಯಲ್‌ ಸಿನಿಮಾ ಎಲ್ಲವೂ ಹರಿದವು. ಮುಖ್ಯಾಂಶಗಳನ್ನು ಪಟ್ಟಿ ಮಾಡುವುದಾದರೆ-

 • ಉಗಮಸ್ಥಾನದಿಂದ ಅನೇಕ ಅವಸ್ಥೆಗಳನ್ನು ಹೊಂದುತ್ತಾ ನದಿಯಾಂದು ಹರಿದುಬರುತ್ತದಲ್ಲ , ಅಂಥಾದ್ದು ಎಚ್‌2ಓ ನಲ್ಲಿ ನನ್ನ ಪಾತ್ರ. ಚಿತ್ರದಲ್ಲಿ ಹಾಡಿ ಕುಣಿಯುತ್ತೇನೆ. ಕೆಲವೊಮ್ಮೆ ನಾಯಕನ ಬದಲು ಪ್ರಾಣಿ ಪಕ್ಷಿಗಳೇ ಕುಣಿತಕ್ಕೆ ಜೊತೆಯಾಗುವುದುಂಟು. ನನಗೆ ಕೆಲವೊಮ್ಮೆ ಯಾವುದೋ ಪ್ರಾಣಿ ಸಂಗ್ರಹಾಲಯದಲ್ಲಿದ್ದೆ ಎನಿಸಿದ್ದೂ ಉಂಟು.
 • ಬೆಂಕಿ, ಗಾಳಿ, ನೀರು ಇದೆಲ್ಲ ಪ್ರಕೃತಿ ದೇವರ ಕೊಡುಗೆ. ದೇವರು ಕೊಟ್ಟಿದ್ದಕ್ಕಾಗಿ ಕಚ್ಚಾಡುತ್ತೇವೆ. ಪ್ರಕೃತಿಯಿಂದ ಉಪಕೃತವಾಗಿರುವುದನ್ನು ಮರೆಯುತ್ತೇವೆ. ಇದರ ಫಲವೇ ಅತಿವೃಷ್ಟಿ , ಅನಾವೃಷ್ಟಿ . ಇದೆಲ್ಲ ಜನ ಅರ್ಥ ಮಾಡಿ ಕೋಬೇಕು (ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿದ್ದು ).
 • ಕಲಾತ್ಮಕ, ಗ್ಲಾಮರಸ್‌ ಎರಡೂ ಬಗೆಯ ಪಾತ್ರಗಳು ನಂಗಿಷ್ಟ. ರಾಂಗೋಪಾಲ್‌ ವರ್ಮ ಅವರ ಚಿತ್ರಗಳಲ್ಲಿ ಅವಕಾಶ ಸಿಕ್ಕಿದರೆ... ಅವರು ಎಷ್ಟು ಚೆನ್ನಾಗಿ ಕಲಾತ್ಮಕತೆ ಹಾಗೂ ಗ್ಲಾಮರ್‌ ಬೆರೆಸುತ್ತಾರೆ ಗೊತ್ತಾ ?
 • ವಿಷ್ಣುವರ್ಧನ್‌ ಜೊತೆ ಅಭಿನಯಿಸುತ್ತಿರುವುದು ನನ್ನ ಪುಣ್ಯ. ಮೇಷ್ಟ್ರಂತೆ ಹೇಳಿಕೊಡ್ತಾರೆ. ಮಕ್ಕಳಂತೆ ಬೆರೀತಾರೆ.
 • ಎಂಬಿಎ ಪೂರೈಸಬೇಕು ಅನ್ನೋ ಆಸೆ ಇನ್ನೂ ಈಡೇರಿಲ್ಲ .

  Post your opinion

  ಉಪ್ಪಿ - ಧನ ರಾಜ್‌ ಧನ್ಯ ಧನ್ಯ ಮಿಲನ !
  ಕನ್ನಂಬಾಡಿಯ ವಿಶ್ವೇಶ್ವರಯ್ಯ ಬೆಳ್ಳಿತೆರೆಗೆ? ಹೌದೆನ್ನುತ್ತಾರೆ ಎಚ್‌2ಓ ಧನರಾಜ್‌

  ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada