»   » 'ಅಂಜನೀಪುತ್ರ' ಪುನೀತ್ ಕೆರಿಯರ್ ನ ಮೈಲಿಗಲ್ಲು ಸಿನಿಮಾ, ಕಾರಣ ಏನು..?

'ಅಂಜನೀಪುತ್ರ' ಪುನೀತ್ ಕೆರಿಯರ್ ನ ಮೈಲಿಗಲ್ಲು ಸಿನಿಮಾ, ಕಾರಣ ಏನು..?

Posted By:
Subscribe to Filmibeat Kannada
ಅಂಜನೀಪುತ್ರ' ಪುನೀತ್ ಕೆರಿಯರ್ ನ ಮೈಲಿಗಲ್ಲು ಸಿನಿಮಾ, ಕಾರಣ ಏನು..? | Filmibeat Kannada

ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನೀಪುತ್ರ' ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಅಲ್ಲದೆ ಈ ಸಿನಿಮಾ ಈಗ ಪುನೀತ್ ಕೆರಿಯರ್ ನಲ್ಲಿ ಒಂದು ಮೈಲಿಗಲ್ಲು ಚಿತ್ರವಾಗುವುದು ಪಕ್ಕಾ ಆಗಿದೆ.

ಒಬ್ಬ ನಟನಾಗಿ, ಗಾಯಕನಾಗಿ ಒಬ್ಬ ನಿರ್ಮಾಪಕನಾಗಿ ಪುನೀತ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಬಳಿಕ ಒಂದು ಹೆಜ್ಜೆ ಮುಂದೆ ಹೋಗಿ ಅಪ್ಪು ತಮ್ಮದೇ ಆದ ಆಡಿಯೋ ಸಂಸ್ಥೆ ಸಹ ಶುರು ಮಾಡಿದ್ದರು. ಆದರೆ ಇದೀಗ 'ಅಂಜನೀಪುತ್ರ' ಚಿತ್ರದ ಹಾಡುಗಳ ಮೂಲಕ ಪುನೀತ್ ಆಡಿಯೋ ಸಂಸ್ಥೆ ಶುಭಾರಂಭ ಮಾಡಲಿದೆಯಂತೆ. ಮುಂದೆ ಓದಿ...

ಪಿ.ಆರ್.ಕೆ ಆಡಿಯೋ ಸಂಸ್ಥೆ

'ಅಂಜನೀಪುತ್ರ' ಸಿನಿಮಾದ ಹಾಡುಗಳು ಪುನೀತ್ ಅವರ ಪಿ.ಆರ್.ಕೆ ಆಡಿಯೋ ಸಂಸ್ಥೆಯಿಂದ ಹೊರಬರಲಿದೆ. ಈ ಮೂಲಕ ಅಪ್ಪು ಆಡಿಯೋ ಕಂಪನಿಯಿಂದ ಖಾತೆ 'ಅಂಜನೀಪುತ್ರ' ದಿಂದ ಶುರುವಾಗಲಿದೆ.

24 ರಂದು ಆಡಿಯೋ ರಿಲೀಸ್

'ಅಂಜನೀಪುತ್ರ' ಆಡಿಯೋ ಬಿಡುಗಡೆ ಕಾರ್ಯಕ್ರಮ ಇದೇ ತಿಂಗಳ 24 ರಂದು ಅದ್ದೂರಿ ಕಾರ್ಯಕ್ರಮದಲ್ಲಿ ನಡೆಯಲಿದೆ. ಇದೇ ಕಾರ್ಯಕ್ರಮದಲ್ಲಿ ಪುನೀತ್ ತಮ್ಮ ಆಡಿಯೋ ಸಂಸ್ಥೆ ಬಗ್ಗೆ ಅನೌನ್ಸ್ ಮಾಡಲಿದ್ದಾರಂತೆ.

ಅಣ್ಣಾವ್ರ ಚಿತ್ರ

ಡಾ.ರಾಜ್ ಕುಮಾರ್ ಅವರ ಹಾಡುತ್ತಿರುವ ಚಿತ್ರವನ್ನು ಪಿ.ಆರ್.ಕೆ ಆಡಿಯೋ ಸಂಸ್ಥೆಯ ಲೋಗೋ ಆಗಿ ಬಳಸಿಕೊಂಡಿರುವುದು ವಿಶೇಷವಾಗಿದೆ.

'ಅಂಜನಿಪುತ್ರ'ನ ಕ್ರೇಜ್ ಶುರು: ಮೊದಲು ಟಿ-ಶರ್ಟ್ ಬಂತು.!

ರವಿ ಬಸ್ರೂರ್ ಸಂಗೀತ

'ಅಂಜನೀಪುತ್ರ' ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಚಿತ್ರದ ಒಂದು ಹಾಡನ್ನು ಪುನೀತ್ ಅವರೇ ಹಾಡಿದ್ದಾರೆ.

ಕನ್ನಡದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ 'ರಾಜಕುಮಾರ'!

'ಟಗರು' ಹಾಡುಗಳು

'ಅಂಜನೀಪುತ್ರ' ನಂತರ ಶಿವಣ್ಣನ 'ಟಗರು' ಸಿನಿಮಾದ ಹಾಡುಗಳು ಸಹ ಪಿ.ಆರ್.ಕೆ ಆಡಿಯೋ ಸಂಸ್ಥೆಯಿಂದ ಹೊರಬರಲಿದೆ.

English summary
Puneeth Rajkumar's 'PRK Audio' label opens with 'Anjaniputra' movie.ಅಂಜನೀಪುತ್ರ ಸಿನಿಮಾದ ಮೂಲಕ ಪಿ.ಆರ್.ಕೆ ಆಡಿಯೋ ಕಂಪನಿಯ ಖಾತೆ ಶುರುವಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada