For Quick Alerts
  ALLOW NOTIFICATIONS  
  For Daily Alerts

  ಪಿಆರ್‌ಕೆ ಸಂಸ್ಥೆ ಜೊತೆ ಹೊಸ ಸಿನಿಮಾ ಆರಂಭಿಸಿದ ಡ್ಯಾನಿಶ್ ಸೇಠ್

  |

  ಪಿಆರ್‌ಕೆ ಸಂಸ್ಥೆ ಮತ್ತೊಂದು ಹೊಸ ಸಿನಿಮಾ ಆರಂಭಿಸಿದೆ. ಲಾಕ್‌ಡೌನ್ ಸಮಯದಲ್ಲಿ 'ಫ್ರೆಂಚ್ ಬಿರಿಯಾನಿ' ಉಣಬಡಿಸಿದ ಡ್ಯಾನಿಶ್ ಸೇಠ್ ಈಗ 'ಒನ್ ಕಟ್ ಟು ಕಟ್' ಎಂಬ ಚಿತ್ರ ಕೈಗೆತ್ತಿಕೊಂಡಿದ್ದಾರೆ.

  'ಒನ್ ಕಟ್ ಟು ಕಟ್' ಚಿತ್ರದ ಸ್ಕ್ರಿಪ್ಟ್ ಪೂಜೆ ಇಂದು ನೆರವೇರಿದ್ದು, ಚಿತ್ರತಂಡಕ್ಕೆ ಪುನೀತ್ ರಾಜ್ ಕುಮಾರ್ ಶುಭಕೋರಿದ್ದಾರೆ. ಈ ಚಿತ್ರ ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್‌ನಿಂದ ಕೂಡಿದ್ದು, ವಂಸಿಧರ್ ಭೋಗರಾಜು ನಿರ್ದೇಶನ ಮಾಡ್ತಿದ್ದಾರೆ.

  'ಅಮಾಯಕ ಗೋಪಿ' ಅವತಾರದಲ್ಲಿ ಬೆಳ್ಳಿತೆರೆಗೆ ಬರಲಿರುವ ದಾನಿಶ್ ಸೇಠ್'ಅಮಾಯಕ ಗೋಪಿ' ಅವತಾರದಲ್ಲಿ ಬೆಳ್ಳಿತೆರೆಗೆ ಬರಲಿರುವ ದಾನಿಶ್ ಸೇಠ್

  ಅಧಿಕೃತವಾಗಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಫೆಬ್ರವರಿ 5 ರಿಂದ ಚಿತ್ರೀಕರಣ ಆರಂಭಿಸಲಿದ್ದಾರೆ.

  ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ದಂಪತಿ ಪಿಆರ್‌ಕೆ ಸಂಸ್ಥೆ ಹೊಸಬರಿಗೆ ಹೆಚ್ಚು ಅವಕಾಶ ಕೊಡ್ತಿದೆ. ಒಳ್ಳೆಯ ಸದಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರ ಮುಂದೆ ತರುವ ಉದ್ದೇಶ ಹೊಂದಿದೆ.

  ಈ ಚಿತ್ರ ಬಿಟ್ಟು ಪಿಆರ್‌ಕೆ ಬ್ಯಾನರ್‌ನಲ್ಲಿ 'ಫ್ಯಾಮಿಲಿ ಪ್ಯಾಕ್' ಎಂಬ ಚಿತ್ರವೂ ತಯಾರಾಗಿದೆ. ಲಿಖಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಅರ್ಜುನ್ ಕುಮಾರ್ ನಿರ್ದೇಶಿಸಿದ್ದಾರೆ.

  ಅಭಿಮಾನಿಗಳಿಗೆ ಮತ್ತೊಂದು ಸಪ್ರೈಸ್ ಕೊಟ್ಟ ಕಿಚ್ಚ ಸುದೀಪ್ | Filmibeat Kannada

  ಹಂಬಲ್ ಪೊಲಿಟಿಶಿಯನ್ ನೊಗರಾಜ್ ಚಿತ್ರದ ನೊಗರಾಜ್ ಪಾತ್ರ, ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಅಸ್ಗರ್ ಪಾತ್ರ ಈಗ ಒನ್ ಕಟ್ ಟು ಕಟ್ ಚಿತ್ರದಲ್ಲಿ ಗೋಪಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ ಡ್ಯಾನಿಶ್ ಸೇಠ್.

  English summary
  PRK Productions Danish sait Starrer One Cut Two Cut Movie Started with Script Pooja. Shooting to commence from February 5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X