ಸಿಕ್ಸ್‌ಪ್ಯಾಕ್ ನಿಂದ ಫ್ಯಾಮಿಲಿ ಪ್ಯಾಕ್ ಕಡೆಗೆ ಪುನೀತ್ ರಾಜ್‌ಕುಮಾರ್!
ಪುನೀತ್ ರಾಜ್‌ಕುಮಾರ್ ಫಿಟ್‌ನೆಟ್ ಬಗ್ಗೆ ಬಹುತೇಕರಿಗೆ ಗೊತ್ತು, ಕನ್ನಡದ ಕೆಲವೇ ಸಿಕ್ಸ್ ಪ್ಯಾಕ್ ನಟರಲ್ಲಿ ಅವರೂ ಒಬ್ಬರು.
ಫಿಟ್‌ನೆಸ್ ಫ್ರೀಕ್ ಆಗಿದ್ದ ಪುನೀತ್ ರಾಜ್‌ಕುಮಾರ್ ಸಿಕ್ಸ್‌ಪ್ಯಾಕ್ ಬಿಟ್ಟು ಒಮ್ಮೆಲೆ ಫ್ಯಾಮಿಲಿ ಪ್ಯಾಕ್ ಕಡೆಗೆ ಹೊರಳಿದ್ದಾರೆ.
ಆದರೆ ಅಭಿಮಾನಿಗಳು ಆತಂಕಪಡಬೇಕಿಲ್ಲ, ಪುನೀತ್ ಅವರು ದೇಹತೂಕ ಹೆಚ್ಚಿಸಿಕೊಳ್ಳುತ್ತಿಲ್ಲ, ಬದಲಿಗೆ ಅವರು ನಿರ್ಮಿಸುತ್ತಿರುವ ಹೊಸ ಸಿನಿಮಾದ ಹೆಸರು 'ಫ್ಯಾಮಿಲಿ ಪ್ಯಾಕ್'. ಪ್ಯಾಮಿಕ್ ಪ್ಯಾಕ್ ಸಿನಿಮಾ ಪುನೀತ್ ಒಡೆತನದ ಪಿಆರ್‌ಕೆ ಸ್ಟುಡಿಯೋದಿಂದ ನಿರ್ಮಾಣಗೊಳ್ಳುತ್ತಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

ಪುನೀತ್ ಪತ್ನಿ ನಿರ್ಮಾಪಕಿ
ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ಈ ಚಿತ್ರದ ನಿರ್ಮಾಪಕರಾಗಿದ್ದು, ಸದಭಿರುಚಿಯ ಸಿನಿಮಾಗಳಿಗೆ ಹೆಸರಾಗಿರುವ ಪಿಆರ್‌ಕೆ ಪ್ರೊಡಕ್ಷನ್ ವತಿಯಿಂದ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.

ಸಂಕಷ್ಟ ಕರ ನಿರ್ದೇಶಕ ಅರ್ಜುನ್ ನಿರ್ದೇಶನ
ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಈ ಹಿಂದೆ ಸಂಕಷ್ಟ ಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್ ಎಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಲಿಖಿತ್ ಶೆಟ್ಟಿ ನಾಯಕ
ಸಂಕಷ್ಟಕರ ಗಣಪತಿ ಚಿತ್ರದ ನಾಯಕ ಲಿಖಿತ್ ಶೆಟ್ಟಿ ಈ ಚಿತ್ರದಲ್ಲೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸಲಿರುವ ಈ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಅಚ್ಯುತಕುಮಾರ್, ದತ್ತಣ್ಣ, ತಿಲಕ್, ನಾಗಭೂಷಣ್ ಮುಂತಾದವರಿದ್ದಾರೆ.

ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ
ಸಿನಿಮಾದ ಪೋಸ್ಟರ್ ಬಿಡುಗಡೆ ಈಗಷ್ಟೆ ಬಿಡುಗಡೆ ಆಗಿದೆ. ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಉದಯಲೀಲ ಅವರ ಛಾಯಾಗ್ರಹಣವಿದೆ. ಮಾಸ್ತಿ 'ಫ್ಯಾಮಿಲಿ ಪ್ಯಾಕ್' ಗೆ ಸಂಭಾಷಣೆ ಬರೆಯುತ್ತಿದ್ದಾರೆ.

'ಫ್ರೆಂಚ್ ಬಿರಿಯಾನಿ' ರೆಡಿಯಾಗಿದೆ
ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಾಣಗೊಂಡಿರುವ 'ಫ್ರೆಂಚ್ ಬಿರಿಯಾನಿ' ಸಿನಿಮಾ ಚಿತ್ರೀಕರಣ ಮುಗಿದಿದ್ದು, ಇದೇ ತಿಂಗಳ ಅಂತ್ಯಕ್ಕೆ ನೇರವಾಗಿ ಅಮೆಜಾನ್ ಪ್ರೈಂ ಗೆ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದಾರೆ.


Click it and Unblock the Notifications