ಪುನೀತ್ ಅಜರಾಮರ: ಆರ್ದ್ರಗೊಳಿಸುತ್ತದೆ ಪಿಆರ್‌ಕೆ ಸಲ್ಲಿಸಿದ ಗೌರವ

ಪುನೀತ್ ರಾಜ್‌ಕುಮಾರ್ ನಿಧನದ ನೋವು ಇನ್ನೂ ಆರಿಲ್ಲ. ಸುಲಭಕ್ಕೆ ಮರೆಯಬಹುದಾದ ದುಃಖವೂ ಅದಲ್ಲ. ಅಭಿಮಾನಿಗಳ ಪಾಲಿಗೆ, ಕನ್ನಡ ಚಿತ್ರರಂಗದ ಪಾಲಿಗೆ ಈ ದುಃಖ ದಶಕಗಳ ವರೆಗೆ ಕಾಡಲಿದೆ. ಪುನೀತ್ ರಾಜ್‌ಕುಮಾರ್ ಕುಟುಂಬದವರಿಗಂತೂ ಇದು ಜೀವನ ಪರ್ಯಂತ ಕಾಡುವ ನೋವು.

Recommended Video

ಕೇವಲ ಒಂದೇ ಗಂಟೆಯಲ್ಲಿ ರೆಕಾರ್ಡ್ ಬರೆದ ಅಪ್ಪು ಜೇಮ್ಸ್ ಟೀಸರ್

ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕ ಅವರ ಕನಸಿನ ಕೂಸಾದ ಪಿಆರ್‌ಕೆಯ ಸಂಪೂರ್ಣ ಜವಾಬ್ದಾರಿಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಗಲಿಗೇರಿಸಿಕೊಂಡಿದ್ದಾರೆ.

ಪುನೀತ್ ಇದ್ದಾಗ ಪಿಆರ್‌ಕೆಯಿಂದ ನಿರ್ಮಾಣವಾಗಿದ್ದ ಕೆಲವು ಸಿನಿಮಾಗಳು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗುತ್ತಿವೆ. ಈಗಾಗಲೇ ಒಂದು ಸಿನಿಮಾ ಬಿಡುಗಡೆ ಸಹ ಆಗಿದೆ. ಅದುವೇ 'ಒನ್‌ ಕಟ್ ಟು ಕಟ್'.

ಹೊಸಬರ ಕನಸನ್ನು ನನಸು ಮಾಡುವ ಘನ ಉದ್ದೇಶದಿಂದ ಪುನೀತ್ ರಾಜ್‌ಕುಮಾರ್ ಕಟ್ಟಿದ್ದ ಪಿಆರ್‌ಕೆ ಸಂಸ್ಥೆಯಿಂದ ಬಿಡುಗಡೆ ಆದ 'ಒನ್ ಕಟ್ ಟು ಕಟ್' ಸಿನಿಮಾದಲ್ಲಿ ಪುನೀತ್ ಅವರನ್ನು ವಿಶೇಷವಾಗಿ ನೆನಪಿಸಿಕೊಳ್ಳಲಾಗಿದೆ. ಇತ್ತೀಚೆಗೆ ಬಿಡುಗಡೆ ಆಗುವ ಎಲ್ಲ ಸಿನಿಮಾಗಳಲ್ಲೂ ಪುನೀತ್‌ಗೆ ಗೌರವ ಇದೆ. ಆದರೆ ಪಿಆರ್‌ಕೆ ಸಲ್ಲಿಸಿರುವ ಗೌರವ ಆ ಸಂಸ್ಥೆ ಹಾಗೂ ಆ ಸಂಸ್ಥೆಯ ಪ್ರಸ್ತುತ ಮಾಲಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಪುನೀತ್ ನೆನಪು ಅದೆಷ್ಟು ಗಾಢ ಎಂಬುದನ್ನು ತಿಳಿಸುತ್ತಿದೆ.

'ಒನ್ ಕಟ್ ಟು ಕಟ್' ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ಮೊದಲಿಗೆ ಸಿಬಿಎಫ್‌ಸಿ ಪ್ರಮಾಣ ಪತ್ರ, ಆ ಬಳಿಕ ಶಾಸನ ವಿಧಿಸಿದ ಎಚ್ಚರಿಕೆಗಳು ಪ್ರದರ್ಶಿಸಿದ ಬಳಿಕ 'ಆಶೀರ್ವಾದಗಳೊಂದಿಗೆ' ಎಂಬ ಅಡಿಬರಹದ ಜೊತೆಗೆ ಡಾ.ರಾಜ್‌ ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಬಳಿಕ ಪುನೀತ್ ರಾಜ್‌ಕುಮಾರ್ ಅವರ ಚಿತ್ರ ಮೂಡುತ್ತದೆ.

ವರ್ಷದ ಬದಲಿಗೆ ಅನಂತದ ಚಿಹ್ನೆ

ವರ್ಷದ ಬದಲಿಗೆ ಅನಂತದ ಚಿಹ್ನೆ

'ಪ್ರೀತಿತುಂಬಿದ ನೆನಪಲ್ಲಿ ಶ್ರೀ ಪುನೀತ್ ರಾಜ್‌ಕುಮಾರ್' ಎಂಬ ಸಾಲಿನೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ನಗುವ ಚಿತ್ರ ಪ್ರಕಟಿಸಲಾಗಿದೆ. ಬಳಿಕ ಪುನೀತ್ ಜನನದ ವರ್ಷವಾದ 1975 ಎಂದು ಬರೆದು ಮುಂದೆ ನಿಧನದ ವರ್ಷ ಬರೆವ ಜಾಗದಲ್ಲಿ ಇನ್‌ಫಿನಿಟಿ (ಅನಂತ) ಚಿಹ್ನೆ ಬಳಸಲಾಗಿದೆ. ಆ ಮೂಲಕ ಪುನೀತ್‌ ಎಂಬ 'ಶಕ್ತಿ'ಗೆ ವ್ಯಕ್ತಿತ್ವಕ್ಕೆ ಸಾವೇ ಇಲ್ಲ ಎಂದು ಸಾರಲಾಗಿದೆ. ಜೊತೆಗೆ 'ಸದಾ ನಮ್ಮ ಹೃದಯಗಳಲ್ಲಿ' ಎಂದು ಬರೆಯಲಾಗಿದೆ.

ತಲೆಮಾರುಗಳ ವರೆಗೆ ನೆನಪು ಮುಂದುವರೆಯಲಿದೆ

ತಲೆಮಾರುಗಳ ವರೆಗೆ ನೆನಪು ಮುಂದುವರೆಯಲಿದೆ

ಪುನೀತ್ ಇನ್ನಿಲ್ಲ ಎಂದು ಹೇಳಲು ಅಥವಾ ಒಪ್ಪಿಕೊಳ್ಳಲು ಸಹ ಅಶ್ವಿನಿ ಅವರಿಗೆ ಸಾಧ್ಯವಾಗಿಲ್ಲ ಎನಿಸುತ್ತದೆ. ಹಾಗಾಗಿಯೇ ಅವರು ನಿಧನದ ವರ್ಷದ ಬಳಿ ಅನಂತದ ಚಿಹ್ನೆ ಬಳಸಿದ್ದಾರೆ. ಅವರು ಬಳಸಿರುವ ಅನಂತದ ಚಿಹ್ನೆ ಸೂಕ್ತವಾಗಿಯೇ ಇದೆ. ಪುನೀತ್ ನೆನಪು ಬಹುತಲೆಮಾರುಗಳವರೆಗೆ ಮುಂದುವರೆಯಲಿದೆ. ಪುನೀತ್ ಸುಲಭಕ್ಕೆ ಮರೆಯಬಹುದಾದ ವ್ಯಕ್ತಿಯಲ್ಲ, ಮರೆತುಬಿಡಬಹುದಾದ ವ್ಯಕ್ತಿತ್ವವೂ ಅವರದ್ದಲ್ಲ.

ಪುನೀತ್ ಅಗಲಿದ ಬಳಿಕ ಬಿಡುಗಡೆ ಆದ ಸಿನಿಮಾ

ಪುನೀತ್ ಅಗಲಿದ ಬಳಿಕ ಬಿಡುಗಡೆ ಆದ ಸಿನಿಮಾ

ದಾನಿಶ್ ಸೇಠ್ ನಟನೆಯ 'ಒನ್ ಕಟ್ ಟು ಕಟ್' ಸಿನಿಮಾ ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ಬಿಡುಗಡೆ ಆಗುತ್ತಿರುವ ಐದನೇ ಸಿನಿಮಾ. ಪುನೀತ್ ಅಗಲಿಕೆಯ ಬಳಿಕ ಅವರ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಆದ ಮೊದಲ ಸಿನಿಮಾ. ದಾನಿಶ್ ಸೇಠ್‌ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಪುನೀತ್ ರಾಜ್‌ಕುಮಾರ್ ಈ ಮೊದಲು ದಾನಿಶ್ ನಾಯಕನಾಗಿದ್ದ 'ಫ್ರೆಂಚ್ ಬಿರಿಯಾನಿ' ಸಿನಿಮಾ ನಿರ್ಮಾಣ ಮಾಡಿದ್ದರು.

ಮೂರು ಸಿನಿಮಾಗಳು ಬಿಡುಗಡೆಗೆ ರೆಡಿ

ಮೂರು ಸಿನಿಮಾಗಳು ಬಿಡುಗಡೆಗೆ ರೆಡಿ

ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ಇನ್ನೂ ಮೂರು ಸಿನಿಮಾಗಳು ನಿರ್ಮಾಣವಾಗಿದ್ದು ಬಿಡುಗಡೆಗೆ ತಯಾರಾಗಿವೆ. 'ಒನ್ ಕಟ್ ಟು ಕಟ್' ಬಳಿಕ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದ ಬಳಿಕ 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ನಿರ್ದೇಶನದ 'ಮ್ಯಾನ್ ಆಫ್‌ ದಿ ಮ್ಯಾಚ್' ಸಿನಿಮಾ ಬಿಡುಗಡೆ ಆಗಲಿದೆ. ಬಳಿಕ 'ಓ2' ಹೆಸರಿನ ಸಿನಿಮಾ ಬಿಡುಗಡೆ ಆಗಲಿದೆ. 'ಫ್ಯಾಮಿಲಿ ಪ್ಯಾಕ್' ಹಾಗೂ 'ಮ್ಯಾನ್ ಆಫ್‌ ದಿ ಮ್ಯಾಚ್' ಸಿನಿಮಾಗಳು ಅಮೆಜಾನ್ ಪ್ರೈಂನಲ್ಲಿಯೇ ಬಿಡುಗಡೆ ಆಗಲಿರುವುದು ವಿಶೇಷ.

ಚಿತ್ರಮಂದಿರಗಳಲ್ಲಿ 'ಗಂಧದ ಗುಡಿ'

ಚಿತ್ರಮಂದಿರಗಳಲ್ಲಿ 'ಗಂಧದ ಗುಡಿ'

ಪುನೀತ್ ರಾಜ್‌ಕುಮಾರ್ ಅವರ ಭಿನ್ನ ಪ್ರಯತ್ನ 'ಗಂಧದ ಗುಡಿ' ಟ್ರಾವೆಲ್ ಸಿನಿಮಾ ಸಹ ಪಿಆರ್‌ಕೆಯಿಂದಲೇ ನಿರ್ಮಾಣಗೊಂಡಿದ್ದು ಈ ಸಿನಿಮಾ ಮಾತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅಮೋಘವರ್ಷ ಹಾಗೂ ಪುನೀತ್ ರಾಜ್‌ಕುಮಾರ್ ಅವರು ರಾಜ್ಯದ ಹಲವು ಕಾಡು-ಮೇಡು, ಜಲಪಾತಗಳು ಸುತ್ತಿ ವಿಡಿಯೋ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಬಂದಿದ್ದು, ರಾಜ್ಯದ ಪ್ರಕೃತಿ ಸಂಪತ್ತನ್ನು ವೀಕ್ಷಕರ ಮುಂದೆ ಪ್ರಸ್ತುತಪಡಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯಗೊಂಡಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಶುರುವಾಗಲಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಪುನೀತ್ ನಾಯಕ ನಟನಾಗಿ ಅಭಿನಯಿಸಿದ ಕೊನೆಯ ಸಿನಿಮಾ 'ಜೇಮ್ಸ್' ಮಾರ್ಚ್ 17 ಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
PRK Productions use infinite symbol for Puneeth Rajkumar in their title card. PRK says He lives in our heart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X