ಬೆಂಗಳೂರಿನಲ್ಲಿ ಮತ್ತೆ ಸನ್ನಿ ಡ್ಯಾನ್ಸ್: ಪ್ರತಿಭಟನೆಗೆ ಸಜ್ಜಾದ ಕನ್ನಡ ಪರ ಸಂಘಟನೆ
Recommended Video

ಎಲ್ಲ ಅಂದುಕೊಂಡಂತೆ ಆಗಿದ್ದರೇ ಕಳೆದ ವರ್ಷ ಡಿಸೆಂಬರ್ ನಲ್ಲಿ, ಹೊಸ ವರ್ಷದ ಪ್ರಯುಕ್ತ ಸನ್ನಿಲಿಯೋನ್ ಕಾರ್ಯಕ್ರಮ ನಡೆಯಬೇಕಿತ್ತು. ಆದ್ರೆ, ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧ ಮತ್ತು ಭದ್ರತೆ ದೃಷ್ಠಿಯಿಂದ ಈ ಕಾರ್ಯಕ್ರಮ ರದ್ದಾಗಿತ್ತು. ಇದೀಗ, ಸನ್ನಿಯ ನೃತ್ಯಕ್ಕೆ ಮತ್ತೆ ಬೆಂಗಳೂರು ಸಜ್ಜಾಗಿದೆ.
ಹೌದು, ದಿ ಟೈಮ್ಸ್ ಕ್ರಿಯೇಷನ್ಸ್ ಸಂಸ್ಥೆ ಆಯೋಜಿಸಲಿರುವ ಮ್ಯೂಸಿಕ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಆಗಮಿಸುತ್ತಿದ್ದಾರೆ.
ನವೆಂಬರ್ 3 ರಂದು ಈ ಕಾರ್ಯಕ್ರಮ ನಡೆಯಲಿದ್ದು, ಮೂರು ಹಾಡುಗಳಿಗೆ ಸನ್ನಿ ಸೊಂಟ ಬಳುಕಿಸಲಿದ್ದಾಳೆ. ವಿಶೇಷ ಅಂದ್ರೆ, ಇದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘುದೀಕ್ಷಿತ್ ಅವರ ಕಾರ್ಯಕ್ರಮ ಕೂಡ ಅದೇ ದಿನ ನಡೆಯಲಿದೆ.

ಸನ್ನಿ ಲಿಯೋನ್ ಅವರ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಕನ್ನಡ ಪರ ಸಂಘಟನೆಗಳು ಮತ್ತೆ ಪ್ರತಿಭಟನೆಗೆ ಸಿದ್ಧವಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸನ್ನಿ ಲಿಯೋನ್ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲೂ ಸನ್ನಿ ಲಿಯೋನ್ ಅವರನ್ನ ವಿರೋಧಿಸಿ ಪ್ರತಿಭಟನೆ ಮಾಡಲು ಸಂಘಟನೆಗಳು ನಿರ್ಧರಿಸಿವೆ. ಸನ್ನಿ ಲಿಯೋನ್ ಕಾರ್ಯಕ್ರಮಗಳನ್ನ ಕರ್ನಾಟಕದಲ್ಲಿ ನಿಷೇಧ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಕನ್ನಡ ಪರ ಹೋರಾಟಗಾರರು ಹೇಳುತ್ತಿದ್ದಾರೆ.

ವಿಶೇಷ ಅಂದ್ರೆ ಕಳೆದ ಬಾರಿ ನಿಗದಿಯಾಗಿದ್ದ ಜಾಗದಲ್ಲೇ ಈ ಬಾರಿಯೂ ಸನ್ನಿ ಕಾರ್ಯಕ್ರಮ ನಡೆಯಲಿದೆ. ಮಾನ್ಯಾತಾ ಟೆಕ್ ಪಾರ್ಕ್ ನ ವೈಟ್ ಆರ್ಕೆಡ್ ನಲ್ಲಿ ಈ ಶೋ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಅವರ ಶೋ ಹೆಚ್ಚು ಕಾಲ ಇರಲಿದೆ. ಸನ್ನಿ ಕೇವಲ ಮೂರು ಹಾಡಿಗೆ ಮಾತ್ರ ಡ್ಯಾನ್ಸ್ ಮಾಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಹಾಗೋ ಹೀಗೋ ಕಳೆದ ಬಾರಿ ಮಿಸ್ ಅವಕಾಶ ಮತ್ತೆ ಸಿಗುತ್ತಿದೆ ಎಂಬ ನಿರೀಕ್ಷೆಯಲ್ಲಿ ಕೆಲವು ಅಭಿಮಾನಿಗಳು ಖುಷಿಯಾಗಿದ್ರೆ, ಈ ಬಾರಿಯೂ ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದ ಈ ಶೋ ರದ್ದಾಗಬಹುದಾ ಎಂಬ ಕುತೂಹಲ ಕಾಡುತ್ತಿದೆ.


Click it and Unblock the Notifications











