For Quick Alerts
  ALLOW NOTIFICATIONS  
  For Daily Alerts

  'ಮುಟ್ಟಾಳ ಅಜಯ್ ದೇವಗನ್‌ಗೆ ಧಿಕ್ಕಾರ': ಬೆಂಗಳೂರಿನಲ್ಲಿ ಪ್ರತಿಭಟನೆ!

  |

  ಸದ್ಯ ಎಲ್ಲೆಲ್ಲೂ ಹಿಂದಿ ಭಾಷೆಯ ರಾಷ್ಟ್ರೀಯ ಭಾಷೆ ಅಲ್ಲ ಎನ್ನುವ ಕೂಗು ಜೋರಾಗಿದೆ. ವಿಚಾರದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಕನ್ನಡದ ನಟ ಕಿಚ್ಚ ಸುದೀಪ್ ಮತ್ತು ಹಿಂದಿಯ ಅಜಯ್ ದೇವಗನ್ ನಡುವೆ ಶುರುವಾದ ವಾಗ್ವಾದ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಾ ಇದೆ. ಹೆಚ್ಚನ ಸಂಖ್ಯೆಯ ಜನರು ಈ ವಿಚಾರಕ್ಕೆ ಎಂಟ್ರಿ ಕೊಟ್ಟು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಟ್ವೀಟ್ ಮೂಲಕ ಸಣ್ಣದಾಗಿ ಶುರುವಾಗ ಈ ವಿವಾದ ಈಗ ದೊಡ್ಡ ಮಟ್ಟದಲ್ಲಿ ಹೊತ್ತಿ ಉರಿಯುತ್ತಿದೆ. ಇದರಲ್ಲಿ ಹೆಚ್ಚಿನ ಓಟು ಕಿಚ್ಚನಿಗೆ ದಕ್ಕಿದೆ. ಇನ್ನು ಅಜಯ್ ದೇವಗನ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಜಯ್ ದೇವಗನ್ ಪರವಾಗಿ ಧ್ವನಿ ಎತ್ತಲು ಯಾರೊಬ್ಬರು ಮುಂದೆ ಬಂದಂತೆ ಇಲ್ಲ.

  ಸುದೀಪ್‌ ಪರವಾಗಿ ಒಂದಾಯ್ತು ಇಡೀ ಸೌತ್ ಇಂಡಿಯಾ!ಸುದೀಪ್‌ ಪರವಾಗಿ ಒಂದಾಯ್ತು ಇಡೀ ಸೌತ್ ಇಂಡಿಯಾ!

  Recommended Video

  ರಾಷ್ಟ್ರ ಭಾಷೆ ಹಿಂದಿ ಅಂತ ಎಲ್ಲಿದೆ ? | Sudeep | Sathish Ninasam | Ajay Devgn

  ಆದರೆ ಅಜಯ್ ದೇವಗನ್ ಹೇಳಿಕೆಯ ವಿರುದ್ಧವಾಗಿ ಸಾಕಷ್ಟು ಧ್ವನಿಗಳು ಸದ್ದು ಮಾಡುತ್ತಿವೆ. ಇದು ಪ್ರತಿಭಟನೆಯ ಹಂತವನ್ನೂ ಕೂಡ ತಲುಪಿದ್ದು ಆಗಿದೆ. ಬೆಂಗಳೂರಿನಲ್ಲಿ ಅಜಯ್ ದೇವಗನ್ ವಿರುದ್ಧ ಕನ್ನಡದ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದು ಬಿಟ್ಟಿವೆ.

  ಕಿಚ್ಚನ ಬೆಂಬಲಕ್ಕೆ ನಿಂತ ಕನ್ನಡ ನಟ-ನಟಿಯರು ಯಾರು? ಕಿಚ್ಚನ ಬೆಂಬಲಕ್ಕೆ ನಿಂತ ಕನ್ನಡ ನಟ-ನಟಿಯರು ಯಾರು?

  ಬೆಂಗಳೂರಿನಲ್ಲಿ ಅಜಯ್ ದೇವಗನ್ ವಿರುದ್ಧ ಕಿಡಿ!

  ಬೆಂಗಳೂರಿನಲ್ಲಿ ಅಜಯ್ ದೇವಗನ್ ವಿರುದ್ಧ ಕಿಡಿ!

  ಕೆಲವು ಕನ್ನಡ ಪರ ಸಂಘಟನೆಗಳು ಇಂದು (ಏ.28) ಇದ್ದಕ್ಕಿದ್ದ ಹಾಗೆ ಪ್ರತಿಭಟನೆ ಮಾಡಲು ಮುಂದಾದವು. ಇದಕ್ಕೆ ಕಾರಣ ನಟ ಅಜಯ್ ದೇವಗನ್ ಮತ್ತು ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ನೀಡಿದ ಹೇಳಿಕೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಕನ್ನಡ ಪರ ಹೋರಾಟಗಾರರು ಅಜಯ್ ದೇವಗನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಗೆ ಇಳಿದಿದ್ದರು. 'ಮುಟ್ಟಾಳ ಅಜಯ್ ದೇವ್‌ಗನ್‌ಗೆ ಧಿಕ್ಕಾರ' ಎನ್ನುವ ಕೂಗು ಜೋರಾಗಿತ್ತು.

  ಅಜಯ್ ದೇವಗನ್ ವಿರುದ್ಧ ಧಿಕ್ಕಾರದ ಕೂಗು!

  ಅಜಯ್ ದೇವಗನ್ ವಿರುದ್ಧ ಧಿಕ್ಕಾರದ ಕೂಗು!

  ಪ್ರತಿಭಟನಕಾರರು ಅಜಯ್ ದೇವಗನ್ ಫೋಟೊ ಹಿಡಿದುಕೊಂಡು ಧಿಕ್ಕಾರ ಕೂಗಿದರು. ನಂತರ ಅನುಮತಿ ಇಲ್ಲದ ಕಾರಣ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಒಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಅಜಯ್ ದೇವಗನ್ ಹೇಳಿಕೆಗೆ ಭಾರಿ ವಿರೋದ್ಧ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಜನ ರಸ್ತೆಗೆ ಇಳಿದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಈ ಬೆಳವಣಿಗೆ ಹಿಂದಿ ಹೇರಿಕೆ ವಿರುದ್ಧ ಎಚ್ಚರಿಕೆಯ ಸಂದೇಶ ರವಾನೆ ಮಾಡಲಾಗಿದೆ.

  ಹಿಂದೆ ರಾಷ್ಟ್ರ ಭಾಷೆ ಎಂದ ಅಜಯ್ ದೇವಗನ್!

  ಹಿಂದೆ ರಾಷ್ಟ್ರ ಭಾಷೆ ಎಂದ ಅಜಯ್ ದೇವಗನ್!

  ಸಮಾರಂಭ ಒಂದರಲ್ಲಿ ನಟ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಹೇಳಿಕೆಗೆ ನೀಡಿದ್ದರು. ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. "ಹಿಂದಿ ರಾಷ್ಟ್ರೀಯ ಭಾಷೆ ಆಗಿತ್ತು. ಈಗಲೂ ಆಗಿದೆ. ಮುಂದೆನೂ ಇರುತ್ತೆ". ನಿಮ್ಮ ಚಿತ್ರಗಳನ್ನು ನೀವು ಹಿಂದಿಯಲ್ಲಿ ಯಾಕೆ ಡಬ್ ಮಾಡುತ್ತೀರಿ?" ಎಂದು ಪ್ರಶ್ನಿಸಿದ್ದರು.

  ಹಿಂದಿ ವಿರುದ್ಧ ದಕ್ಷಿಣ ಭಾರತದ ಕಿಡಿ!

  ಹಿಂದಿ ವಿರುದ್ಧ ದಕ್ಷಿಣ ಭಾರತದ ಕಿಡಿ!

  ಹಿಂದಿ ಹೇರಿಕೆ ಬಗ್ಗೆ, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ಹೌದು ಎನ್ನುವ ಬಗ್ಗೆ ಈ ಹಿಂದೆಯೂ ಸಾಕಷ್ಟು ಬಾರಿ ಚರ್ಚೆಗಳು, ವಿವಾದಗಳು ಎದ್ದಿವೆ. ಆದರೆ ಈ ಬಾರಿ ಎಲ್ಲರೂ ಒಟ್ಟಾದಂತೆ ಕಾಣುತ್ತಿದೆ. ಇದು ಕಿಚ್ಚನ ಒಂದು ಹೇಳಿಕೆಯಿಂದ ಹೊರ ಬಂದಿದೆ. ಹಾಗಾಗಿ ಕನ್ನಡಿಗರು ಮಾತ್ರ ಅಲ್ಲ. ದಕ್ಷಿಣ ಭಾರತೀಯ ಜನರೇ ಒಟ್ಟಾಗಿ ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ಹೇಳಿಕೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.

  English summary
  Pro-Kannada organizations protest in Bengaluru against Ajay Devgn's Hindi National Language Tweet, Know More
  Thursday, April 28, 2022, 15:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X