'Boycott RRR': RRR ವಿರುದ್ಧ ಪ್ರತಿಭಟನೆಗೆ ಕನ್ನಡ ಸಂಘಟನೆಗಳು ಸಜ್ಜು, ಕರವೇ ಎಚ್ಚರಿಕೆ!

'RRR' ಚಿತ್ರ ಸದ್ಯ ತೆಲುಗು ರಾಜ್ಯಕ್ಕಿಂತಲೂ, ಕರ್ನಾಟಕದಲ್ಲೇ ಹೆಚ್ಚಾಗಿ ಸದ್ದು ಮಾಡುತ್ತಿದೆ. ಕರ್ನಾಟಕದಾತ್ಯಂತ 'ಆರ್‌ಆರ್‌ಆರ್' ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ. 'ಆರ್‌ಆರ್‌ಆರ್' ಚಿತ್ರದ ವಿರುದ್ಧ ಕನ್ನಡಿಗರು ಸಮರ ಸಾರುತ್ತಿದ್ದಾರೆ. ಅದಕ್ಕೆ ಚಿತ್ರತಂಡದ ನಡೆಯೇ ಕಾರಣ. 'ಆರ್‌ಆರ್‌ಆರ್' ಚಿತ್ರ ಕನ್ನಡಕ್ಕೆ ಡಬ್ ಆದರೂ ಕೂಡ, ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ ಎನ್ನುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣ ಆಗಿದೆ.

Recommended Video

ನಿಮ್ಮನ್ನ ಚಿಕ್ಕಬಳ್ಳಾಪುರಕ್ಕೆ ಬಿಟ್ಟಿದ್ದೆ ತಪ್ಪಾಯ್ತ ರಾಜಮೌಳಿ

ಪ್ಯಾನ್ ಇಂಡಿಯಾ ಸಿನಿಮಾ 'ಆರ್‌ಆರ್‌ಆರ್' ಕನ್ನಡದಲ್ಲೂ ರಿಲೀಸ್ ಆಗದೆ ಇರುವುದು ನ್ಯಾಯ. ಕನ್ನಡದಲ್ಲಿ ರಿಲೀಸ್ ಮಾಡಲಾಗುತ್ತೆ ಎಂದು ಚಿತ್ರತಂಡ ಸಾರಿ, ಸಾರಿ ಹೇಳಿಕೊಂಡಿದೆ. ಆದರೆ ಅದು ಈಗ ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರತಂಡ ಕೊಟ್ಟ ಮಾತಿನ ಹಾಗೆ ನಡೆದುಕೊಂಡಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಅವತರಣಿಗೆ ರಿಲೀಸ್ ಯಾಕೆ ಇಲ್ಲ ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಇದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಒಂದು ಅಭಿಯಾನವಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಪ್ರತಿಭಟನೆಯ ಸ್ವರೂಪ ಪಡೆದುಕೊಳ್ಳುವ ಸೂಚನೆ ಇದೆ. ಈಗಾಗಲೇ ಹಲವು ಕನ್ನಡ ಪರ ಸಂಘನೆಗಳು 'ಆರ್‌ಆರ್‌ಆರ್' ನಡೆಯನ್ನು ಖಂಡಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡುತ್ತಿವೆ.

Pro Kannada organizations ready to protest against RRR Movie says KaRaVe

ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ. ಕನ್ನಡದಲ್ಲಿ 'ಆರ್‌ಆರ್‌ಆರ್' ಚಿತ್ರವನ್ನು ರಿಲೀಸ್ ಮಾಡದೇ ಇದ್ದರೆ. ತೆಲುಗು, ಹಿಂದಿ, ತಮಿಳಿನಲ್ಲೂ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ವಿಡಿಯೋ ಮೂಲಕ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ, ಕನ್ನಡ ನಟರಿಂದ ಬೆಂಬಲ ಪಡೆದು ಈಗ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡದೇ ಇರುವುದು ತಪ್ಪು ಎಂದು ಕರವೇ ಅಧ್ಯಕ್ಷ ಪ್ರವೀಣ್ ಹೇಳಿದ್ದಾರೆ.

ಇದರೊಂದಿಗೆ ಇನ್ನಷ್ಟು ಸಂಘಟನೆಗಳು ಪ್ರತಿಭಟನೆಗೆ ಇಳಿಯುವ ಸೂಚನೆ ಕೊಟ್ಟಿದೆ. ಹಾಗಾಗಿ ಇನ್ನು ಕನ್ನಡದ ಸ್ಕ್ರೀನ್‌ಗಳು ಹೆಚ್ಚಾಗದೇ ಇದ್ದರೆ. ಹಲವು ಕನ್ನಡ ಪರ ಸಂಘಟನೆಗಳು 'ಆರ್‌ಆರ್‌ಆರ್' ಚಿತ್ರವನ್ನು ಬಹಿಷ್ಕರಿಸಲು ಮುಂದಾಗಿವೆ. ಹಾಗಾಗಿ ಎಷ್ಟರ ಮಟ್ಟಿಗೆ ಕನ್ನಡ ಶೋಗಳು ಹೆಚ್ಚಾಗುತ್ತವೆಯೋ ನೋಡ್ಬೇಕು.

More from Filmibeat

English summary
Pro Kannada organizations ready to protest against RRR Movie says KaRaVe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X