Kabzaa Budget : ಉಪ್ಪಿ, ಕಿಚ್ಚನ 'ಕಬ್ಜ' ಬಜೆಟ್ ₹120 ಕೋಟಿನಾ? ಬಾಲಿವುಡ್ ನಿರ್ಮಾಪಕ ಬಿಚ್ಚಿಟ್ಟ ಗುಟ್ಟೇನು?

By ಫಿಲ್ಮಿಬೀಟ್ ಡೆಸ್ಕ್

ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದ ಮಾಡುವಂತ ಸಿನಿಮಾ ಇನ್ನೂ ಸಿಕ್ಕಿಲ್ಲ. '777 ಚಾರ್ಲಿ','ವಿಕ್ರಾಂತ್ ರೋಣ','ಕೆಜಿಎಫ್ 2','ಕಾಂತಾರ'ದಂತಹ ಸಿನಿಮಾಗಳ ಮೂಲಕ ಸದ್ದು ಮಾಡಿದ ಬಳಿಕ ಕೊಂಚ ಸೈಲೆಂಟ್ ಆಗಿತ್ತು. ಈಗ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಇದೂವರೆಗೂ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗಿತ್ತು. ಆದರೆ, ಆರ್‌.ಚಂದ್ರು 'ಕಬ್ಜ' ಸಿನಿಮಾವನ್ನು ಐದಲ್ಲ ಬರೋಬ್ಬರಿ ಏಳು ಭಾಷೆಯಲ್ಲಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅದಕ್ಕಾಗಿ ಬಾಲಿವುಡ್‌ ದೊಡ್ಡ ನಿರ್ಮಾಪಕರು ಈ ಸಿನಿಮಾ ಜೊತೆ ಕೈ ಜೋಡಿಸಿದ್ದಾರೆ.

Producer Anand Pandit Says Kabzaa Is More than 120crore film Is passion project

'ಕಬ್ಜ'ದ ಸಹ ನಿರ್ಮಾಪಕರಾಗಿ ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅಖಾಡಕ್ಕಿಳಿದಿದ್ದಾರೆ. ಈ ಸಿನಿಮಾ ಬಗ್ಗೆವನ್ನು ಕೇವಲ ವ್ಯಾಪಾರ ದೃಷ್ಟಿಯಿಂದ ನೋಡದೆ ಇದೊಂದು ಪ್ಯಾಷನ್ ಇಟ್ಕೊಂಡು ಮಾಡಿರುವ ಸಿನಿಮಾ ಎಂದಿದ್ದಾರೆ. ಆನಂದ್ ಪಂಡಿತ್ ಹಲವು ಭಾಷೆಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ, ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈಗ ಆರ್‌.ಚಂದ್ರು ಜೊತೆ ಕೈ ಜೋಡಿಸಿ, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ.

'ಕಬ್ಬ' ಸಿನಿಮಾದ ಬಜೆಟ್ ಎಷ್ಟು?

ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಶರಣ್ ಅಂತಹ ಸ್ಟಾರ್ ನಟರು ಸಿನಿಮಾದಲ್ಲಿದ್ದಾರೆ. ಈ ಕಾರಣಕ್ಕೆ 'ಕಬ್ಜ' ದೇಶದ ಉದ್ದಗಲಕ್ಕೂ ಗಮನ ಸೆಳೆದಿದೆ. ಈ ಕಾರಣಕ್ಕೆ ಆನಂದ್ ಪಂಡಿತ್ ಕೂಡ ಮುಂದೆ ಬಂದಿದ್ದು, ಹಿಂದಿ, ತೆಲುಗು ಹಾಗೂ ಮರಾಠಿ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಬಾಲಿವುಡ್ ಹಂಗಾಮ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಆರ್.ಚಂದ್ರು ಸಿನಿಮಾ ಬಗ್ಗೆ ಆನಂದ್ ಪಂಡಿತ್ ಕಾನ್ಫಿಡೆಂಟ್‌ ಆಗಿದ್ದು, ಸಿನಿಮಾದ ಬಜೆಟ್ ರಿವೀಲ್ ಮಾಡಿದ್ದಾರೆ.

Producer Anand Pandit Says Kabzaa Is More than 120crore film Is passion project

" ನಾನು ಯಾವಾಗಲೂ ಸ್ಟ್ರಾಂಗ್ ಕಂಟೆಂಟ್‌ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ. ಈ ಸಿನಿಮಾದಲ್ಲಿ ಕೇವಲ ಕಥೆಯಷ್ಟೇ ಅದ್ಭುತವಾಗಿಲ್ಲ, ದುಬಾರಿ ಆಕ್ಷನ್ ಇದೆ. ಇದು ₹120 ಕೋಟಿ ಸಿನಿಮಾ ಅನ್ನುವುದಕ್ಕಿಂತ ಹೆಚ್ಚಾಗಿ, ಪ್ಯಾಷನ್ ಇಟ್ಟುಕೊಂಡು ಮಾಡಿದ ಸಿನಿಮಾ" ಎಂದು ಆನಂದ್ ಪಂಡಿತ್ ಹೇಳಿದ್ದಾರೆ. ಹೀಗಾಗಿ ಕಬ್ಜ ಬಜೆಟ್ 120 ಕೋಟಿ ರೂ. ಇರಬಹುದಾ? ಎಂದು ಲೆಕ್ಕ ಹಾಕಲಾಗುತ್ತಿದೆ. ಆದರೆ, ಆರ್‌.ಚಂದ್ರು ಅಧಿಕೃತವಾಗಿ ಈ ಸಿನಿಮಾದ ಬಜೆಟ್ ಅನ್ನು ಇದೂವರೆಗೂ ಎಲ್ಲೂ ಹೇಳಿಕೊಂಡಿಲ್ಲ. ಆದರೆ, 7 ಭಾಷೆಯಲ್ಲಿ ತೆರೆಕಾಣುತ್ತಿರುವ ಸಿನಿಮಾಗೆ ಚಂದ್ರು ದೊಡ್ಡ ಬಜೆಟ್‌ನಲ್ಲಿಯೇ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಹೆಚ್ಚು ಹಣವನ್ನು ಸುರಿದಿದ್ದಾರೆ ಅನ್ನೋ ಮಾತು ಕನ್ನಡ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.

'ಕನ್ನಡ ಸಿನಿಮಾಗಳಲ್ಲಿ ವೈಬ್ರೇಷನ್ ಇರುತ್ತೆ'

ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ರಿಲೀಸ್ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾವಿದು. ಅಷ್ಟಕ್ಕೂ 'ಕಬ್ಜ' ಸಿನಿಮಾವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಅನ್ನೋದನ್ನೂ ಆನಂದ್ ಪಂಡಿತ್ ಬಾಲಿವುಡ್ ಹಂಗಾಮಗೆ ರಿವೀಲ್ ಮಾಡಿದ್ದಾರೆ. " ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಕ್ರಿಯೇಟಿವ್ ಹಾಗೂ ವೈಬ್ರೆಂಟ್ ಆಗಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಿವೆ. ಫ್ಯಾಮಿಲಿ ಎಂಟರ್‌ಟೈನರ್ '777 ಚಾರ್ಲಿ'ಯಿಂದ ಪ್ಯಾನ್ ಇಂಡಿಯಾ ಥ್ರಿಲ್ಲರ್ 'ಕೆಜಿಎಫ್ 2' ಹಾಗೇ 'ಕಾಂತಾರ' ಮೂಲಕ ಶಕ್ತಿಯುತವಾಗಿ ಹೊರಹೊಮ್ಮುತ್ತಿದೆ. 'ಕಬ್ಜ' ಕೂಡ ಪಕ್ಕಾ ಆಕ್ಷನ್ ಸಿನಿಮಾಗಳ ಸಾಲಿಗೆ ಸೇರುತ್ತೆ" ಎಂದು ಆನಂದ್ ಪಂಡಿತ್ ಹೇಳಿದ್ದಾರೆ.

ಹಾಗೇ ಉಪೇಂದ್ರ ಹಾಗೂ ಆರ್‌ .ಚಂದ್ರು ಕಾಂಬಿನೇಷನ್ ಸಿನಿಮಾ ಮ್ಯಾಜಿಕ್ ಮಾಡುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜಗತ್ತೇ ಮೆಚ್ಚುವಂತಹ ಕ್ಯಾಮರಾವರ್ಕ್ ನೋಡಬಹುದು ಎಂದೂ ಹೇಳಿದ್ದಾರೆ. ಹಾಗೇ 'ಕೆಜಿಎಫ್ 2' ಸಿನಿಮಾಗೆ ಸಂಗೀತ ನೀಡಿರುವ ರವಿ ಬಸ್ರೂರ್ ಈ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದಾರೆ. ಹೀಗಾಗಿ 'ಕಬ್ಜ' ಕೂಡ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ.

More from Filmibeat

English summary
Producer Anand Pandit Says Kabzaa Is More than 120crore film Is passion project, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X