ಹೃದಯಾಘಾತದಿಂದ ಮೆಜೆಸ್ಟಿಕ್ ನಿರ್ಮಾಪಕ ಬಾ.ಮಾ.ಹರೀಶ್ ಮಗ ನಿಧನ ; ಮದುವೆ ಮನೆಯಲ್ಲಿ ಸೂತಕದ ಛಾಯೆ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.

ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಉಲ್ಲಾಸ್‌ ಗೌಡ ಅವರ ಅಕಾಲಿಕ ನಿಧನ ಮತ್ತೊಂದು ಉದಾಹರಣೆ.

Producer Ba Ma Harish s Son Ullas Gowda Tragically Loses His Life During Trekking

ಹೌದು, ಉಲ್ಲಾಸ್ ಗೌಡ.. ಕನ್ನಡದ ಖ್ಯಾತ ನಿರ್ಮಾಪಕ ಬಾ ಮಾ ಹರೀಶ್ ಅವರ ಮಗ. ಬದುಕಿ ಬಾಳಬೇಕಿದ್ದ, ಕಣ್ತುಂಬ ಕನಸು ಹೊಂದಿದ್ದ ಉಲ್ಲಾಸ್ ಗೌಡ ತಮ್ಮ ತಂದೆಯ ನಿರ್ಮಾಣ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಇಷ್ಟೇ ಅಲ್ಲದೇ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಅನ್ನೋ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದರು. ಇದಲ್ಲದೇ ಸಾಮಾಜಿಕ ಕಳಕಳಿ ಇರುವ ಸ್ವಚ್ಚ ಭಾರತ ಅಭಿಯಾನದ ಕುರಿತಂತೆ ಮಕ್ಕಳಿಂದಲೇ ''ನಿರ್ಮಲ'' ಎಂಬ ಚಿತ್ರ ನಿರ್ದೇಶಿಸಲು ಮುಂದಾಗಿದ್ದರು.

ಹೀಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಉಲ್ಲಾಸ್ ಗೌಡ, ನಿನ್ನೆ (ಜೂನ್ 26) ಗೆಳೆಯರ ಜೊತೆ ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿದ್ದರು. ಇದೇ ಸಮಯದಲ್ಲಿ ಇಂದು (ಜೂನ್ 27) ಬೆಟ್ಟ ಹತ್ತುವಾಗ 28 ವರ್ಷದ ಉಲ್ಲಾಸ್ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರ ಮೃತದೇಹವನ್ನು ಬೆಂಗಳೂರಿಗೆ ತರಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮದುವೆ ಮನೆಯಲ್ಲಿ ಸೂತಕದ ಛಾಯೆ

''ಮೆಜೆಸ್ಟಿಕ್''.. ''ಮಾಗಡಿ'' ಚಿತ್ರಗಳನ್ನು ನಿರ್ಮಾಣ ಮಾಡಿರುವ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ನಿರ್ಮಾಪಕ ಬಾ.ಮಾ ಹರೀಶ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಉಲ್ಲಾಸ್ ಗೌಡ ಮದುವೆ ನಿಶ್ವಯವಾಗಿತ್ತು. ದೀಪ ಶಾಸ್ತ್ರ ಕೂಡ ನಡೆದಿತ್ತು. ಇದೇ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಆಗಬೇಕಿತ್ತು. ಈ ಡಿಸೆಂಬರ್ ನಲ್ಲಿ ಅದ್ಧೂರಿಯಾಗಿ ಉಲ್ಲಾಸ್ ಗೌಡ ಮದುವೆಯಾಗಬೇಕಿತ್ತು. ಹೊಸ ಬದುಕಿಗೆ ಮುನ್ನುಡಿ ಬರೆಯಬೇಕಿತ್ತು. ಆದರೆ ವಿಧಿ ಲಿಖಿತ, ಮದುವೆ ಮುನ್ನ ದುರಂತ ಸಂಭವಿಸಿದೆ. ಮದುವೆ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಉಲ್ಲಾಸ್ ಗೌಡ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ. ಸಂತಾಪ ಸೂಚಿಸಿದ್ದಾರೆ. ಬಾ.ಮಾ. ಹರೀಶ್ ಮತ್ತು ಅವರ ಕುಟುಂಬಕ್ಕೆ ಸಾಂತ್ವಾನ ಹೇಳುತ್ತಿದ್ಧಾರೆ.ಸದ್ಯ ಮೃತದೇಹ ಶಿವಮೊಗ್ಗ ಸಮೀಪದ ಹೊಸನಗರದ ಆಸ್ಪತ್ರೆಯಲ್ಲಿದ್ದು, ಬಾ.ಮಾ.ಹರೀಶ್ ಅವರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

English summary
Tragic news from Sandalwood. Producer Ba Ma Harish’s son, Ullas Gowda, has breathed his last during a trip to Kodachadri. Full details inside.
Read more about: death ba ma harish
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X