twitter
    For Quick Alerts
    ALLOW NOTIFICATIONS  
    For Daily Alerts

    'ಕಲಿ' ಸಿನಿಮಾ ಬರುತ್ತಾ ಇಲ್ವಾ? : ನಿರ್ಮಾಪಕರ ಕಡೆಯಿಂದ ಬಂದ ಸ್ಪಷ್ಟನೆ

    By Naveen
    |

    Recommended Video

    TheVillain : ಪ್ರೇಮ್ ಕೈ ಬಿಟ್ಟ ಕಲಿ ಮತ್ತೆ ಸೆಟ್ಟೇರಲಿದ್ಯಾ..? | Filmibeat Kannada

    ಅಂದುಕೊಂಡಂತೆ ಆಗಿದ್ದರೆ 'ದಿ ವಿಲನ್' ಸಿನಿಮಾದ ರೀತಿ 'ಕಲಿ' ಸಿನಿಮಾ ಸದ್ದು ಮಾಡಬೇಕಿತ್ತು. ಆದರೆ, ಈ ಸಿನಿಮಾ ಶುರು ಆಗುವುದಕ್ಕೆ ಮೊದಲೇ ನಿಂತು ಹೋಯ್ತು. ಅದ್ದೂರಿಯಾಗಿ ಮುಹೂರ್ತ ಆದ ಈ ಚಿತ್ರದ ಚಿತ್ರೀಕರಣವೆ ಶುರು ಆಗಲಿಲ್ಲ.

    ಪ್ರೇಮ್ ಕೂಡ 'ಕಲಿ' ಚಿತ್ರವನ್ನು ಕೈ ಬಿಟ್ಟು 'ದಿ ವಿಲನ್' ಸಿನಿಮಾವನ್ನು ಶುರು ಮಾಡಿದರು. ಆ ಸಿನಿಮಾದ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರೆ 'ದಿ ವಿಲನ್' ನಲ್ಲಿ ನಟಿಸಿದರು. ಹಾಗಾದರೆ, 'ಕಲಿ' ಸಿನಿಮಾ ನಿಂತು ಹೋಯ್ತಾ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡಿತ್ತು. ಈ ಬಗ್ಗೆ ಇದೀಗ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಮಾತನಾಡಿದ್ದಾರೆ.

    'ದಿ ವಿಲನ್' ಹೊಸ ಪೋಸ್ಟರ್ ಔಟ್: ಒಬ್ಬೊಬ್ಬರದ್ದು ಒಂದೊಂದು ಅವತಾರ.! 'ದಿ ವಿಲನ್' ಹೊಸ ಪೋಸ್ಟರ್ ಔಟ್: ಒಬ್ಬೊಬ್ಬರದ್ದು ಒಂದೊಂದು ಅವತಾರ.!

    ''ಕಲಿ' ನನ್ನ ಕನಸಿನ ಪ್ರಾಜೆಕ್ಟ್. ಆ ಸಿನಿಮಾವನ್ನು ಇಂದಲ್ಲ ನಾಳೆ ನಿರ್ಮಾಣ ಮಾಡುತ್ತೇನೆ. 'ಬಾಹುಬಲಿ' ರೇಂಜ್ ನಲ್ಲಿ ಆ ಸಿನಿಮಾ ಮಾಡುವ ಚಿಂತನೆ ಇದೆ. 'ಕಲಿ' ಒಂದು ಹಿಸ್ಟಾರಿಕಲ್ ಸಿನಿಮಾ. ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ. ಪ್ರೇಮ್ ಅವರ ಪ್ರತಿ ಸಿನಿಮಾದಲ್ಲಿಯೂ ತಾಯಿಯ ಸೆಂಟಿಮೆಂಟ್ ಇರುತ್ತದೆ. ಅದೇ ರೀತಿ 'ಕಲಿ' ಚಿತ್ರದಲ್ಲಿ ಕೂಡ ತಾಯಿಯ ಮಮತೆ ಇರಲಿದೆ'' ಎಂದು ಹೇಳಿದ್ದಾರೆ.

    producer c r manohar spoke about kali kannada movie

    'ಕಲಿ' ಚಿತ್ರ ಬಿಟ್ಟು 'ದಿ ವಿಲನ್' ಸಿನಿಮಾಗೆ ಬಂಡವಾಳ ಹಾಕಿದ್ದ ನಿರ್ಮಾಪಕ ಸಿ ಆರ್ ಮನೋಹರ್ 'ಕಲಿ' ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಆ ಸಿನಿಮಾ ಮಾಡುತ್ತೇನೆ ಎಂದು ಸಿ ಆರ್ ಮನೋಹರ್ ತಿಳಿಸಿದ್ದಾರೆ.

    producer c r manohar spoke about kali kannada movie

    'ದಿ ವಿಲನ್'ಗೆ ಉಘೇ ಎಂದು ಹಾರೈಸಿ: ಕೋಟ್ಯಾಂತರ ಕನ್ನಡಿಗರಲ್ಲಿ ಜಗ್ಗೇಶ್ ಮನವಿ.! 'ದಿ ವಿಲನ್'ಗೆ ಉಘೇ ಎಂದು ಹಾರೈಸಿ: ಕೋಟ್ಯಾಂತರ ಕನ್ನಡಿಗರಲ್ಲಿ ಜಗ್ಗೇಶ್ ಮನವಿ.!

    ಅಂದಹಾಗೆ, ಇತ್ತೀಚಿಗಷ್ಟೆ 'ದಿ ವಿಲನ್' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ 'ಕಲಿ' ಸಿನಿಮಾದ ಬಗ್ಗೆ ಆರ್ ಮನೋಹರ್ ಮಾತನಾಡಿದ್ದಾರೆ.

    English summary
    Producer C R Manohar spoke about 'Kali' kannada movie.
    Tuesday, August 21, 2018, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X