»   » 'ಹೀಗೊಂದು ದಿನ' ಚಿತ್ರದ ನಿರ್ಮಾಪಕರ ಕಥೆ-ವ್ಯಥೆ: ಇದು ಸಿನಿಮಾದವರು ನೋಡಲೇಬೇಕು.!

'ಹೀಗೊಂದು ದಿನ' ಚಿತ್ರದ ನಿರ್ಮಾಪಕರ ಕಥೆ-ವ್ಯಥೆ: ಇದು ಸಿನಿಮಾದವರು ನೋಡಲೇಬೇಕು.!

Posted By:
Subscribe to Filmibeat Kannada

ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಕನಸು ಕಂಡಿರುವವರು ಈ ಸ್ಟೋರಿಯನ್ನ ಓದಲೇಬೇಕು. ಚಿತ್ರರಂಗದಲ್ಲಿ ನನಗೇನೂ ಗೊತ್ತೆ ಇಲ್ಲ ಎಂದುಕೊಂಡವವರು ಈ ಕಥೆಯನ್ನ ಓದಲೇಬೇಕು. ಸಿನಿಮಾದಲ್ಲಿ ನೆಲೆ ಕಾಣಲು ಮುನ್ನುಗ್ಗುತ್ತಿರುವ ಪ್ರತಿಭಾನ್ವಿತರು ಈ ವ್ಯಥೆಯ ಬಗ್ಗೆ ಕಣ್ಣಾಯಿಸಬೇಕು.

ಹೌದು, ಸಿಂಧು ಲೋಕನಾಥ್ ಅಭಿನಯದ 'ಹೀಗೊಂದು ದಿನ' ಚಿತ್ರದ ನಿರ್ಮಾಪಕರ ಚಂದ್ರಶೇಖರ್ ತುಂಬಾ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ಎಲ್ಲ ಅಂದುಕೊಂಡಿದ್ದರೇ ಈ ಸಿನಿಮಾ ಇಷ್ಟೋತ್ತಿಗಾಲೇ ಬಿಡುಗಡೆಯಾಗಬೇಕಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಯಾಕಂದ್ರೆ, ಅದಕ್ಕೆ ಹಲವು ಕಾರಣ.

ಒಬ್ಬ ನಿರ್ಮಾಪಕ ಸಿನಿಮಾ ಮಾಡ್ಬೇಕು ಅಂದ್ರೆ, ಇಲ್ಲಿಂದ ಆರಂಭವಾಗುತ್ತೆ.? ಈ ಕಥೆ ಪೂರ್ತಿ ಓದಿ....

Producer Chandrasekar Experience in Film Production

ಸಿನಿಮಾದವರಿಗೆ ಒಂದಾ ಎರಡಾ ಪ್ರಶ್ನೆಗಳು. ಸಿನಿಮಾ ಮಾಡಬೇಕು ಅಂದುಕೊಂಡ , ನಿರ್ಮಾಪಕನಿಗೆ ಮೊದಲು ಹುಟ್ಟೋ ಪ್ರಶ್ನೆ ಯಾವ ಜಾನರ್ ಕಥೆ ಮಾಡ್ಲಿ.? ಕಾಮಿಡಿ, ಲವ್ ಸ್ಟೋರಿ, ಮಾಸ್, ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಯಾವ ಕಥೆ ಮಾಡೋಣ.. ಒಟ್ಟಾರೆ ಯಾವುದೊ ಒಂದು ಕಥೆ ರೆಡಿ ಮಾಡಿ ಡೈರೆಕ್ಟರ್ ಜೊತೆ ಮಿಟಿಂಗ್ ಗೆ ಹೊರಟರೆ..ಹೀರೋ ಪಿಕ್ಸಾಬೇಕು, ಹೀರೋಯಿನ್ ಸಿಗ್ತಿಲ್ಲ, ಕಾಮಿಡಿಯನ್ ಡೇಟ್ ಇಲ್ಲ ಲೊಕೇಷನ್ಸ್ ಕಾಸ್ಟ್ಯೂಮ್ಸ್ ಮ್ಯೂಸಿಕ್ ಆಗ್ಬೇಕು. ಸಾರ್ ಮ್ಯೂಸಿಕ್ ಡೈರೆಕ್ಟರ್ ಬಜೆಟ್ ಜಾಸ್ತಿ ಕೇಳ್ತಿದ್ದಾರೆ, ಸಾರ್ ಇನ್ನೊಬ್ರಿದ್ರು ಪಾಪ ಬಿಸಿ ಅಂದ್ರು ಹೊಸಬ್ರು ಆಗಬಹುದಲ್ಲವಾ.? ಓಕೆ ಸರ್. ಮಾತಾಡಿ. ಅಡ್ವಾನ್ಸ್ ಮಾಡಿ ಅಗ್ರಿಮೆಂಟ್ ಮಾಡ್ಕೊಬೇಕು ಸರ್. ಸರಿ...

ಟ್ಯೂನ್ ರೆಡಿ ಆಯ್ತು. ಲಿರಿಕ್ ಬರೆಸ್ಬೇಕು. ಭಟ್ರು,ಕಾಯ್ಕಿಣಿ,ನಾಗೇಂದ್ರ ಪ್ರಸಾದ್, ಕವಿರಾಜ್ ಸರ್ ನಮ್ಮ ಅಸ್ಟೆಂಟ್ ಡೈರೆಕ್ಟರ್ ಒಂದು ಸಾಂಗ್ ಬರೆದ್ದಿದ್ದಾನೆ ಚೆನಾಗಿದೆ... ಆಯ್ತು ಹಾಕೊಳಿ.... ಓಕೆ ಸಾಂಗ್ ಸಕಾತ್ತಾಗಿ ಆಗಿದೆ. ರೆಕಾರ್ಡಿಂಗ್ ಮಾಡ್ಸೋಣ.. ಸಾರ್ ಸಿಂಗರ್ ಡೇಟ್ ಸಿಕ್ತಿಲ್ಲ... ರೆಕಾರ್ಡಿಂಗ್ ಆಯ್ತು...ಮಿಕ್ಸಿಂಗ್ ಮಾಸ್ಟ್ರಿಂಗ್ ಚನೈ ಅಲ್ಲಿ ಮಾಡ್ಸೋಣ... ಸರ್ ಡೇಟ್ಸ್ ಎಲ್ಲಾ ಮಾತಾಡಾಗಿದೆ ಮುಂದಿನ ವಾರ ಶೂಟಿಂಗ್ ಹೋಗೋಣ. ಮುಂದಿನ ತಿಂಗಳು ಹತ್ತರ ಮೇಲೆ ಮಾಡೋಣ ಇರಿ. ದುಡ್ಡಿಲ್ಲಾ....

ಒಂದು ಪೂಜೆ ಮಾಡೋಣ.... ಸೆಲೆಬ್ರಿಟಿ ಬೇಕು ಕ್ಲಾಪಿಂಗ್ ಮಾಡೋಕೆ. ಶಿವಣ್ಣನ ಕರೆಯೋಣ.? ಯಶ್.....? ಸುದೀಪ್....? ದರ್ಶನ್ ....? ಪೂಜೆಗೆ ನಮ್ ಸ್ವಾಮೀಜಿ ಹತ್ರ ಡೇಟ್ ಕೇಳ್ತೀನಿ ಇರ್ರೀ.. ಶನಿವಾರ ಪೂಜೆ ಮಾಡೋಣ ಡೈರೆಕ್ಟ್ರೇ ನಮ್ ಗುರುಜೀ ಟೈಮ್ ಕೊಟ್ಟಿದ್ದಾರೆ.... ಓಕೆ ಸರ್ ರೆಡಿ ಮಾಡ್ಕೋತಿವಿ. ಜೋರಾಗಿ ಮಾಡೋಣ ಕಣ್ರೀ , ನನ್ ಲೆವೆಲ್ಲಿಗೆ ಮಿನಿಸ್ಟರ್ ಎಲ್ಲಾ ಬರ್ತಾರೆ. ಓಕೆ ಸರ್.... ಮುಹೂರ್ತ ಸಕ್ಕತಾಗಿ ಆಯ್ತು ಸಾರ್ . ಗಾಂಧಿನಗರ ಫುಲ್ ನಮ್ ಸಿನಿಮಾದೇ ಟಾಕ್ ಸಾರ್. ಹೌದಾ..? ಟೀವಿಲಿ ಪೇಪರ್ ಅಲ್ಲಿ ಬರುತ್ತೆ ಅಂತ ಕಾಯ್ಕೋಂಡು ಕೂತ್ಕೋಳೊದು ನಮ್ಮುಡುಗರು ಯಾವ್ ಟೀವಿಲೂ ಬರ್ಲಿಲ್ಲ ಅಂತಿದ್ರೂ.? ಬಂದಿದೆ ಸಾರ್ ಇಲ್ನೋಡಿ ನಮ್ಮ ಹುಡುಗರು ವಿಡಿಯೋ ಮಾಡಿದಾರೆ... ಒಹ್ ಹೌದಾ ನಮ್ಮುಹುಡುಗರು ಟೈಂ ಸರ್ಯಾಗಿ ಟಿ ವಿ ಮುಂದೆ ಕುತಿಲ್ಲಾ ಅಂತಾ ಕಾಣಸತ್ತೆ... ಆದರೂ ನಮ್ಮನೆ ಪೇಪರ್ ನಲ್ಲಿ ಬಂದಿಲ್ವಲ್ರೀ.. ಶುಕ್ರವಾರ ಬರುತ್ತೆ ಸಾರ್.......

Producer Chandrasekar Experience in Film Production

#ಶೂಟಿಂಗ್#
ತಿಂಡಿಗೆ ಚಿತ್ತಾನ್ನ , ಮಧ್ಯಾಹ್ನ ಮೊಸರನ್ನ , ಟಮೋಟೊ ಗೊಜ್ಜು , ರಾತ್ರಿಗೆ ಎಗ್ ರೈಸ್, ಟೀ ಅಂಗಡಿಯಲ್ಲಿ ಎರಡು ಪೇಜ್ ಸಾಲದ ಲೆಕ್ಕ... ಎಲ್ರೀ ಒಂಬತ್ತು ಗಂಟೆ ಆಯ್ತು ಶೂಟಿಂಗ್ ಶುರು ಮಾಡ್ಲಿಲ್ವಲ್ರಿ..? ಸಾರ್ ಶೂಟಿಂಗ್ ಏಳಕ್ಕೆ ಶುರು ಆಯ್ತು. ಅವಳಿನ್ನು ಈಗ ಬಣ್ಣ ಬಳುಸ್ಕೊತ್ತಾವ್ಳೆ ಹೀರೋಯಿನ್ನು. ಸಾರ್ ಅವ್ರದ್ದು ಮಧ್ಯಾಹ್ನ ಶಾಟ್ ಇರೋದು.ಇವಾಗ ಹೀರೋದು ಬಿಲ್ಡಪ್ ಶಾಟ್ಸ್ ಮಾಡಿದ್ವಿ. ಅಲ್ರೀ ಹೀರೋಯಿನ್ನೇ ಇಲ್ಲದೆ ಹೆಂಗ್ರಿ ಶೂಟಿಂಗ್ ಮಾಡಿದ್ರಿ. ಸಾರ್ ಅದು ಹಾಗಲ್ಲ... ಅದು... ಇದು... ಅದು ಇಲ್ಲ , ಇದು ಇಲ್ಲ ಬೇಗ ಬೇಗ ಮಾಡಿ... ಇವೆಲ್ಲದರ ಜೊತೆಗೆ ಸುಮಾರು ಮೂರರಿಂದ ನಾಲ್ಕು ತಿಂಗಳು ಕಳೆದು ಹೋಗುತ್ತದೆ ಈಗೇನು ಶೂಟಿಂಗ್ ಮುಗಿತಲ್ವಾ ಅನ್ಕೊತಿದ್ದೀರಾ..? ನೋ ವೇ ಚಾನ್ಸೇ ಇಲ್ಲ...

ಶೂಟಿಂಗ್, ಆರ್ಟಿಸ್ಟ್, ಡೇಟ್ಸ್, ಲೊಕೇಷನ್, ಪರ್ಫಾರ್ಮೆನ್ಸ್, ಓಕೆಶಾಟ್, ಕಟ್ಟು, ಟೇಕು, ಬ್ರೇಕ್, ಶಿಪ್ಟು, ರೀಜನ್ನು, ಪೇಮೆಂಟ್, ಡಮ್ಮಿಕ್ಯಾರೆಕ್ಟರ್, ಮೇಕಪ್ಪು, ಮ್ಯಾಚಿಂಗು, ಕಂಟಿನ್ಯೂಟಿ, ಶೆಡ್ಯೂಲ್ ಬ್ರೇಕ್, ಸಾಂಗ್ ಶೂಟು, ಫೈಟು, ಪೇಮೆಂಟ್ ಪ್ರಾಬ್ಲಮ್, ಡೇಟ್ಸ ಪ್ರಾಬ್ಲಮ್, ಪ್ಯಾಚ್ ವರ್ಕು.. ಫೈನಲೀ ಕುಂಬಳಕಾಯಿ.. ಸಾರ್ ಎಡಿಟಿಂಗ್ ಮಾಡ್ಸಿ ಮಾಡ್ಸಿ ಅಲ್ಲಾ ಎಡಿಟರ್ರುಅಡ್ವಾನ್ಸ್ ಕೇಳ್ತಿದ್ರು... ಕೊಡೋಣ ಮಾಡಿಸ್ರೀ.. ಸರ್ ಡಬ್ಬಿಂಗು, ಕನ್ವೆನ್ಸು. ಸರ್....... ಸರ್....... ಸಾರ್..... ಸಾರ್..... ಸಾರ್......

ಈ ಕಥೆಯನ್ನ ಪೂರ್ತಿ ಓದಲು ಮುಂದೆ ನೀಡಿರುವ ಫೇಸ್ ಬುಕ್ ಲಿಂಕ್ ಕ್ಲಿಕ್ ಮಾಡಿ.

English summary
Kannada filmmaker Chandrasekhar has written his own experiences in film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X