ಅಜಯ್ ರಾವ್‌ಗೆ ಕ್ಷಮೆ ಕೇಳ್ತೀನಿ: ಗುರು ದೇಶಪಾಂಡೆ

ಚಿತ್ರೀಕರಣದ ಸಮಯದಿಂದಲೂ ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಲೇ ಬಂದಿರುವ ಅಜಯ್ ರಾವ್, ರಚಿತಾ ರಾಮ್ ನಟನೆಯ 'ಲವ್ ಯು ರಚ್ಚು' ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಆಗಲಿದೆ.

ಆದರೆ ಬಿಡುಗಡೆ ಸಮಯದಲ್ಲಿಯೂ 'ಲವ್ ಯು ರಚ್ಚು' ಸಿನಿಮಾ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ. ಸಿನಿಮಾದ ನಾಯಕ ಅಜಯ್ ರಾವ್, ನಿರ್ಮಾಪಕ ಗುರು ದೇಶಪಾಂಡೆ ಅವರೊಟ್ಟಿಗೆ ಮುನಿಸಿಕೊಂಡಿದ್ದು, ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ.

ಗುರು ದೇಶಪಾಂಡೆ ಹಾಗೂ ನಟಿ ರಚಿತಾ ರಾಮ್ ಅವರುಗಳು ಮಾತ್ರವೇ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಾಯಕ ನಟ ಅಜಯ್ ರಾವ್ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ''ನಿರ್ಮಾಪಕರು ನನಗೆ ಅವಮಾನ ಮಾಡಿದ್ದಾರೆ. ನನಗೆ ಸ್ವಾಭಿಮಾನ ಇದೆ. ಅಪಮಾನ ಆದ ಜಾಗಕ್ಕೆ ನಾನು ಹೋಗಲಾರೆ, ಎಲ್ಲವನ್ನೂ ಮರೆತು ಅವರ ಪಕ್ಕ ಕುಳಿತುಕೊಂಡು ನಾನು ಪ್ರಚಾರ ಮಾಡಲಾರೆ'' ಎಂದು ಸ್ಪಷ್ಟಪಡಿಸಿದ್ದಾರೆ ಅಜಯ್ ರಾವ್.

ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ, ಸುದ್ದಿಗೋಷ್ಠಿಗಳಲ್ಲಿ ಈ ವಿಷಯದ ಬಗ್ಗೆ ಚಿತ್ರತಂಡ ಪ್ರಶ್ನೆಗಳನ್ನು ಎದುರಿಸುತ್ತಲೇ ಇದೆ. ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಗುರು ದೇಶಪಾಂಡೆ ಅವರಿಗೆ ಅಜಯ್ ರಾವ್ ಅವರ ಮೇಲಿನ ಮುನಿಸಿನ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರು.

ಪ್ರಶ್ನೆಗೆ ಉತ್ತರಿಸಿದ ಗುರು ದೇಶಪಾಂಡೆ, ''ಈ ಸಿನಿಮಾ ಮುಗಿಯುವವರೆಗೆ ನೀವು ನನ್ನ ಮೇಲೆ ಏನೋ ಒಂದು ಹೇಳಬಹುದು, ನಿರ್ಮಾಪಕರ ಜೊತೆ ಕುಳಿತುಕೊಳ್ಳಲ್ಲ, ಅವರೊಟ್ಟಿಗೆ ಕೆಲಸ ಮಾಡಲ್ಲ ಎನ್ನಬಹುದು. ಈ ಸಿನಿಮಾ ಮುಗಿದ ಮೇಲೆ ನಾನೂ ನಿಮ್ಮ ಪಕ್ಕ ಬಂದು ಕುಳಿತುಕೊಳ್ಳಲಾಗುವುದಿಲ್ಲ, ನೀವು ಕುಳಿತುಕೊಳ್ಳಲಾಗುವುದಿಲ್ಲ. ನನಗೆ ಯಾವುದೇ ಅಹಂ ಇಲ್ಲ. ಈಗೋ ಇಲ್ಲ. ನಿಮ್ಮಗಳ ಮೂಲಕ ನಾನು ಅಜಯ್‌ ರಾವ್‌ ಅವರಿಗೆ ಸಾರಿ (ಕ್ಷಮೆ) ಕೇಳುತ್ತೇನೆ'' ಎಂದರು. ಆ ಮೂಲಕ ವಿವಾದಕ್ಕೆ ಅಂತ್ಯ ಹಾಡಿ ಸಿನಿಮಾದ ಪ್ರಚಾರಕ್ಕೆ ಅಜಯ್ ರಾವ್ ಬರಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು.

'ಬಡವ ರಾಸ್ಕಲ್' ಪ್ರಚಾರ ನೋಡಿ ಖುಷಿಯಯ್ತು: ಗುರು ದೇಶಪಾಂಡೆ

'ಬಡವ ರಾಸ್ಕಲ್' ಪ್ರಚಾರ ನೋಡಿ ಖುಷಿಯಯ್ತು: ಗುರು ದೇಶಪಾಂಡೆ

''ಬಡವ ರಾಸ್ಕಲ್' ಸಿನಿಮಾದ ಪ್ರಚಾರ ನೊಡಿದರೆ ಖುಷಿಯಾಗುತ್ತದೆ. ನಾಯಕ ಡಾಲಿ ಧನಂಜಯ್ ಆಟೊ ತೆಗೆದುಕೊಂಡು ಎಲ್ಲೆಲ್ಲೊ ಒಡಾಡಿ ಸಿನಿಮಾದ ಪ್ರಚಾರ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ಬಹಳ ಖುಷಿಯಾಗುತ್ತದೆ. ನಮ್ಮ ನಾಯಕಿ ಸಹ ನಮಗೆ ಬಹಳ ಬೆಂಬಲ ಕೊಡುತ್ತಿದ್ದಾರೆ. ಅವರು ಮಂಗಳೂರಿನಿಂದ ಈ ಸುದ್ದಿಗೋಷ್ಠಿಗಾಗಿ ಬಂದಿದ್ದಾರೆ'' ಎಂದು ನಟಿ ರಚಿತಾ ರಾಮ್ ಅವರನ್ನು ಹೊಗಳಿದರು ಗುರು ದೇಶಪಾಂಡೆ.

ನಿರ್ಮಾಪಕರು ಹಾಗೆ ಹೇಳಿದ್ದು ನನಗೆ ಬೇಸರವಾಯ್ತು: ರಚಿತಾ

ನಿರ್ಮಾಪಕರು ಹಾಗೆ ಹೇಳಿದ್ದು ನನಗೆ ಬೇಸರವಾಯ್ತು: ರಚಿತಾ

ಬಳಿಕ ಮಾತನಾಡಿದ ನಟಿ ರಚಿತಾ ರಾಮ್, ''ನಿರ್ಮಾಪಕರು ಇತ್ತೀಚೆಗೆ ಹೇಳಿದ ಒಂದು ಮಾತು ನನಗೆ ಇಷ್ಟವಾಗಲಿಲ್ಲ. ಸಿನಿಮಾ ಫ್ಲಾಪ್ ಆದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಆದರೆ ಅದು ಸರಿಯಲ್ಲ. ಅವರು ನಿರ್ಮಾಪಕರು ಅನ್ನದಾತರು. ಅವರು ಹಾಗೆ ಮಾತನಾಡಬಾರದು. ಅವರು ನಮ್ಮಂಥಹವರಿಗೆ, ಸಿನಿಮಾವನ್ನು ನಂಬಿಕೊಂಡಿರುವ ಹಲವು ಕುಟುಂಬಗಳಿಗೆ ಅನ್ನ ಹಾಕುವವರು'' ಎಂದರು ರಚಿತಾ ರಾಮ್.

ಡಿಸೆಂಬರ್ 31ಕ್ಕೆ ಬಿಡುಗಡೆ ಆಗಲಿದೆ ಸಿನಿಮಾ

ಡಿಸೆಂಬರ್ 31ಕ್ಕೆ ಬಿಡುಗಡೆ ಆಗಲಿದೆ ಸಿನಿಮಾ

'ಲವ್ ಯು ರಚ್ಚು' ಸಿನಿಮಾವು ಡಿಸೆಂಬರ್ 31 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ನಡೆಯುವಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಸಿನಿಮಾವನ್ನು ಕಾಡುತ್ತಲೇ ಇವೆ. ಚಿತ್ರೀಕರಣದ ಸಮಯದಲ್ಲಿ ಸಾಹಸ ಕಲಾವಿದ ವಿವೇಕ್ ಎಂಬುವರು ವಿದ್ಯುತ್ ಅವಘಡಕ್ಕೆ ಸಿಲುಕಿ ಮರಣ ಹೊಂದಿದರು. ಈ ಪ್ರಕರಣದಲ್ಲಿ ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ, ಕ್ರೇನ್ ಚಲಾಯಿಸುತ್ತಿದ್ದ ಮಹದೇವ ಅವರುಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದರು. ನಿರ್ಮಾಪಕ ಗುರು ದೇಶಪಾಂಡೆ ಮೇಲೂ ಪ್ರಕರಣ ದಾಖಲಾಗಿತ್ತು ಆದರೆ ಅವರು ತಲೆ ಮರೆಸಿಕೊಂಡಿದ್ದರು.

ಮುನಿಸಿಗೆ ಕಾರಣವೇನು?

ಮುನಿಸಿಗೆ ಕಾರಣವೇನು?

ವಿವೇಕ್ ಸಾವು ಪ್ರಕರಣ ನಡೆದಾಗ ಅಜಯ್ ರಾವ್ ಸಾಹಸ ನಿರ್ದೇಶಕರ ಹಾಗೂ ನಿರ್ಮಾಪಕರ ವಿರುದ್ಧ ಮಾತನಾಡಿದ್ದರು. ಸರಿಯಾದ ಮುಂಜಾಗೃತೆವಹಿಸದೇ ಇದ್ದದ್ದಕ್ಕೆ ಹೀಗಾಗಿದೆ ಎಂದು ಆರೋಪಿಸಿದ್ದರು. ಅದೇ ಹೇಳಿಕೆ ಇದೀಗ ಗುರು ದೇಶಪಾಂಡೆ ಹಾಗೂ ಅಜಯ್ ರಾವ್ ನಡುವಿನ ಮುನಿಸಿಗೆ ಕಾರಣವಾಗಿದೆ. ''ನಿರ್ಮಾಪಕರು ನನಗೆ ಅಪಮಾನ ಮಾಡಿದ್ದಾರೆ ಹಾಗಾಗಿ ನಾನು ಸಿನಿಮಾದ ಪ್ರಚಾರಕ್ಕೆ ಬರೆನು'' ಎಂದು ಅಜಯ್ ರಾವ್ ಹೇಳಿದ್ದರೆ. ''ಸಿನಿಮಾ ಫ್ಲಾಪ್ ಆದರೆ ಅವನನ್ನು (ಅಜಯ್ ರಾವ್) ಸುಮ್ಮನೆ ಬಿಡೊಲ್ಲ'' ಎಂದು ಆವಾಜ್ ಹೊಡೆದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.

More from Filmibeat

English summary
Producer Guru Deshpande said he is ready to ask sorry to Ajay Rao. He said I do not have ego problems, our movie should go well that is only intension I have.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X