ಪುನೀತ್ ರಾಜ್‌ಕುಮಾರ್ ಆಪ್ತ ಕಪಾಲಿ ಮೋಹನ್ ಆತ್ಮಹತ್ಯೆ
ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್ ಅವರ ಆಪ್ತ ಕಪಾಲಿ ಮೋಹನ್ ಅವರು ನಗರದ ಹೋಟೆಲ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Recommended Video
ಡಾ.ರಾಜ್‌ಕುಮಾರ್ ಕುಟುಂಬದವರೊಂದಿಗೆ ವ್ಯವಹಾರ ಪಾಲುದಾರಿಕೆಯನ್ನು ಹೊಂದಿದ್ದ ಕಪಾಲಿ ಮೋಹನ್ ಅವರು, ಪುನೀತ್ ರಾಜ್‌ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರಿಗೆ ಬಹು ಆಪ್ತರಾಗಿದ್ದರು.
ಕಪಾಲಿ ಮೋಹನ್ ಅವರ ಮೃತ ದೇಹ ಹೋಟೆಲ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ವ್ಯಕ್ತಪಡಿಸಲಾಗಿದೆ.
ಹೋಟೆಲ್ ಉದ್ಯಮಿಯೂ ಆಗಿದ್ದ ಕಪಾಲಿ ಮೋಹನ್, ತಮ್ಮದೇ ಒಡೆತನದ ಸುಪ್ರಿಮೋ ಹೋಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಪೀಣ್ಯ ಎರಡನೇ ಹಂತ, ಸಿದ್ದಾರ್ಥ ನಗರದಲ್ಲಿ ಈ ಹೋಟೆಲ್ ಇದೆ.

ಕಪಾಲಿ ಮೋಹನ್ ಮನೆಯ ಮೇಲೆ ಸಿಸಿಬಿ ರೇಡ್ ಆಗಿತ್ತು
ಕಪಾಲಿ ಮೋಹನ್ ಅವರ ಮೇಲೆ ಈ ಹಿಂದೆ ಸಿಸಿಬಿ ರೇಡ್ ಸಹ ನಡೆದಿತ್ತು. ಸ್ಯಾಂಡಲ್‌ವುಡ್ ನ ಕೆಲವು ಸ್ಟಾರ್ ನಟರ ಮನೆಗಳ ಮೇಲೆ ರೇಡ್ ನಡೆದಾಗ ಇವರ ಮನೆಯ ಮೇಲೂ ರೇಡ್ ಆಗಿ ವಶಕ್ಕೂ ಪಡೆದಿದ್ದರು.

ಹೋಟೆಲ್ ಉದ್ಯಮದ ಜೊತೆಗೆ ಸಿನಿಮಾ ನಿರ್ಮಾಣ
ಹೋಟೆಲ್ ಉದ್ಯಮದ ಜೊತೆಗೆ ಸಿನಿಮಾ ನಿರ್ಮಾಣ, ವಿತರಣೆಯಲ್ಲಿಯೂ ತೊಡಗಿಸಿಕೊಂಡಿದ್ದ ಕಪಾಲಿ ಮೋಹನ್, ಬಡ್ಡಿ ವ್ಯವಹಾರ ಸಹ ನಡೆಸುತ್ತಿದ್ದರು ಎನ್ನಲಾಗಿತ್ತು. ಈ ಹಿಂದೆ ಇವರ ಒಡೆತನದ ಆರ್.ಜಿ ಹೋಟೆಲ್ ಮೇಲೆ ರೈಡ್ ಆಗಿದ್ದಾಗ ಜೂಜು ಅಡ್ಡೆಯ ಆರೋಪ ಹೊರಿಸಲಾಗಿತ್ತು.

ಕುಂದಾಪುರ ಮೂಲದ ಕಪಾಲಿ ಮೋಹನ್
ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ವಕ್ವಾಡಿಯವರಾಗಿರುವ ಕಪಾಲಿ ಮೋಹನ್ ಅವರು, ಇತ್ತೀಚೆಗೆ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರು. ಈ ಹಿಂದೆಯೂ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.

ರಾಜ್ ಕುಟುಂಬದೊಂದಿಗೆ ಬಹು ಆತ್ಮೀಯತೆ
ಡಾ.ರಾಜ್ ಕುಮಾರ್ ಅವರ ಕುಟುಂಬ ಸದಸ್ಯರೊಂದಿಗೆ ಆತ್ಮೀಯ ಭಾವವನ್ನು ಅವರು ಹೊಂದಿದ್ದರು. ಪುನೀತ್ ರಾಜ್‌ಕುಮಾರ್ ಶಿವರಾಜ್ ಕುಮಾರ್ ಅವರೊಂದಿಗೆ ಆತ್ಮೀಯ ಸ್ನೇಹ ಅವರಿಗಿತ್ತು. ಇವರೊಂದಿಗೆ ವ್ಯವಹಾರ ಪಾಲುದಾರಿಕೆಯನ್ನೂ ಸಹ ಅವರು ಹೊಂದಿದ್ದರು ಎನ್ನಲಾಗಿದೆ.


Click it and Unblock the Notifications











