For Quick Alerts
  ALLOW NOTIFICATIONS  
  For Daily Alerts

  ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ ಸ್ಟಾರ್ ನಿರ್ಮಾಪಕರ ಪುತ್ರಿ!

  By Pavithra
  |
  ದೊಡ್ಡ ನಿರ್ಮಾಪಕನ ಪುತ್ರಿ ಫೋಟೋಗೆ ಫಿದಾ ಆದ ನೆಟ್ಟಿಗರು..!! | Filmibeat Kannada

  ನಿರ್ಮಾಪಕ ಮಕ್ಕಳು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುವುದು ಸಾಮಾನ್ಯ ವಿಚಾರ. ಹೆಚ್ಚಿನವರು ಅಭಿನಯದಲ್ಲೇ ತೊಡಗಿಸಿಕೊಳ್ಳವ ಆಸೆಯನ್ನು ಹೊಂದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಪದ್ದತಿ ಕಡಿಮೆ ಆಗಿದೆ.

  ಆದರೂ ಸಿನಿಮಾ ನಾಯಕಿ ಆಗಬೇಕು, ನಾಯಕ ಆಗಬೇಕು ಎನ್ನುವ ಆಸೆ ಸಾಕಷ್ಟು ಅನೇಕರಲ್ಲಿ ಇರುತ್ತೆ. ರಾಜಕೀಯ ಹಾಗೂ ಸಿನಿಮಾರಂಗ ಎರಡೂ ಕ್ಷೇತ್ರದಲ್ಲಿ ಆದಷ್ಟು ಬೇಗ ಪ್ರಖ್ಯಾತಿ ಗಳಿಸುವ ಅವಕಾಶ ಹೆಚ್ಚಾಗಿ ಸಿಗುತ್ತೆ. ಆದ್ದರಿಂದಲೇ ಬಹುತೇಕರು ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

  ಸೆಲೆಬ್ರಿಟಿ ವಿಮರ್ಶೆ: ಹೃದಯ ಕದ್ದುಬಿಟ್ಟ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ಸೆಲೆಬ್ರಿಟಿ ವಿಮರ್ಶೆ: ಹೃದಯ ಕದ್ದುಬಿಟ್ಟ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

  ಸದ್ಯ ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ಮಾಪಕರ ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. ನೋಡಲು ತೆಳ್ಳಗೆ ಬೆಳ್ಳಗೆ ಇರುವ ಈಕೆಯ ಫೋಟೋ ಗಳು ಸಖತ್ ವೈರಲ್ ಆಗಿವೆ. ಹಾಗಾದರೆ ಯಾರು ಆಕೆ? ಸಿನಿಮಾರಂಗಕ್ಕೆ ಬರುವ ಆಲೋಚನೆ ಏನಾದರೂ ಮಾಡಿದ್ದಾರಾ? ಇಲ್ಲಿದೆ ಸಂಪೂರ್ಣ ಮಾಹಿತಿ, ಮುಂದೆ ಓದಿ

  ನಿರ್ಮಾಪಕರ ಪುತ್ರಿಯ ಹವಾ

  ನಿರ್ಮಾಪಕರ ಪುತ್ರಿಯ ಹವಾ

  ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸದ್ದು ಮಾಡುತ್ತಿರುವ ಕನ್ನಡ ಸ್ಟಾರ್ ನಿರ್ಮಾಪಕರ ಪುತ್ರಿ ಸೌಂದರ್ಯ ಜಗದೀಶ್. ಪ್ರೊಡ್ಯೂಸರ್ ಜಗದೀಶ್ ಅವರ ಪುತ್ರಿ ಮಾಡಿಸಿರುವ ಫೋಟೋ ಶೂಟ್ ಇನ್‌ಸ್ಟಾಗ್ರಾಂ ನಲ್ಲಿ ವೈರಲ್ ಆಗಿದೆ. ಜಗದೀಶ್ 'ಮಸ್ತ್ ಮಜಾ ಮಾಡಿ', 'ಸ್ನೇಹಿತರು' ಇನ್ನು ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

  ಚಿತ್ರರಂಗಕ್ಕೆ ಬರ್ತಾರಾ ಸೌಂದರ್ಯ?

  ಚಿತ್ರರಂಗಕ್ಕೆ ಬರ್ತಾರಾ ಸೌಂದರ್ಯ?

  ತಂದೆ ಚಿತ್ರದಲ್ಲಿ ದೊಡ್ಡ ಹೆಸರು ಮಾಡಿದ್ದು ಚಿತ್ರರಂಗದ ದೊಡ್ಡ ಸ್ಟಾರ್ ಗಳ ಜೊತೆ ಉತ್ತಮ ಬಾಂದವ್ಯವನ್ನು ಹೊಂದಿದ್ದಾರೆ. ಸಹೋದರ ಸ್ನೇಹಿತ್ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಸೌಂದರ್ಯ ಅವರ ಫೋಟೋಗಳನ್ನ ನೋಡಿರುವ ಗಾಂಧಿನಗರದ ಮಂದಿ ಒಳ್ಳೆ ನಾಯಕಿ ಆಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.

  ಹೆಸರಿಗೆ ತಕ್ಕಂತ ಸೌಂದರ್ಯ

  ಹೆಸರಿಗೆ ತಕ್ಕಂತ ಸೌಂದರ್ಯ

  ಸೌಂದರ್ಯ ಹಿಂದಿನಿಂದಲೂ ಫೋಟೋ ಶೂಟ್ ಮಾಡಿಸುತ್ತಾ ಬಂದಿದ್ದಾರೆ. ಸ್ಟಾರ್ ಕ್ಯಾಮೆರಾ ಮ್ಯಾನ್ ಭುವನ್ ಗೌಡ ಈ ಹಿಂದೆ ಸೌಂದರ್ಯ ಅವರ ಫೋಟೋಗಳನ್ನು ಕ್ಲಿಕ್ಕಿಸಿದ್ದರು. ಸದ್ಯ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು ಹೆಸರಿಗೆ ತಕ್ಕಂತೆ ಸೌಂದರ್ಯವಾಗಿದ್ದಾರೆ.

  ಚಿತ್ರರಂಗಕ್ಕೆ ಬೇಕಿದ್ದಾರೆ ನಾಯಕಿಯರು

  ಚಿತ್ರರಂಗಕ್ಕೆ ಬೇಕಿದ್ದಾರೆ ನಾಯಕಿಯರು

  ಸದ್ಯ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯರ ಅಭಾವ ಹೆಚ್ಚಿದೆ. ಕನ್ನಡ ಸಿನಿಮಾಗಳಿಗೆ ಪರಭಾಷೆಯಿಂದ ನಾಯಕಿಯರನ್ನು ಕರೆತರಬೇಕಾಗಿದೆ. ಆದ್ದರಿಂದ ಸೌಂದರ್ಯ ಜಗದೀಶ್ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೆ ಸ್ಯಾಮಡಲ್ ವುಡ್ ಗೆ ಒಬ್ಬ ಹೀರೋಯಿನ್ ಸಿಕ್ಕಂತಾಗುತ್ತೆ.

  English summary
  Kannada film producer jagadish daughter Soundarya Jagadish photos are viral in instagram. Jagadish have produced Snehitaru, Mast Maja Maadi many more films

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X