ಸಂಕ್ರಾಂತಿಗೆ ಭರ್ಜರಿಯಾಗಿ ಸೆಟ್ಟೇರಿದ ಜಯಣ್ಣ ನಿರ್ಮಾಣದ 2 ಚಿತ್ರಗಳು

By Suneetha

ಚಂದನವನದ ಚಿತ್ರ ನಿರ್ಮಾಪಕ ಕಮ್ ವಿತರಕರಾದ ಜಯಣ್ಣ ಅವರ ನಿರ್ಮಾಣದಲ್ಲಿ ಮೂಡಿಬರುವ ಯಾವುದೇ ಸಿನಿಮಾ ಆಗಲಿ ಅದು ಸೆಟ್ಟೇರೋದು ಮಾತ್ರ ಬೆಂಗಳೂರಿನ ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ.

ಅಂದಹಾಗೆ ನಿನ್ನೆ(ಜನವರಿ 15) ಸಂಕ್ರಾಂತಿ ಹಬ್ಬದಂದು ಜಯಣ್ಣ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡು ಚಿತ್ರಗಳು ಸೈಲೆಂಟ್ ಆಗಿ ಆರಂಭವಾಗಿದೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

ಒಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರು-ಸನ್ ಆಫ್ ಬಂಗಾರದ ಮನುಷ್ಯ' ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಸಂಕ್ರಾಂತಿ ಹಬ್ಬದ ಶುಭ ದಿನದಂದು ಮುಹೂರ್ತ ನೆರವೇರಿದೆ.

ಎರಡೂ ಚಿತ್ರಗಳ ನಾಯಕರು ದೇವರಿಗೆ ಕೈ ಮುಗಿಯುವ ದೃಶ್ಯವನ್ನು ಚಿತ್ರತಂಡದವರು ಶೂಟ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಿರ್ಮಾಪಕ ಜಯಣ್ಣ ಅವರ ಮೆಚ್ಚಿನ ನಟ ಯಶ್ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.[ಮನೋರಂಜನ್ ರವಿಚಂದ್ರನ್ ಚೊಚ್ಚಲ ಚಿತ್ರದ ಚಿತ್ರೀಕರಣ ಫಿಕ್ಸ್.!]

ರಾಕಿಂಗ್ ಸ್ಟಾರ್ ಯಶ್ ಅವರು ಮನೋರಂಜನ್ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಶಿವಣ್ಣ ಅವರ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದರು.

ಎರಡೂ ಚಿತ್ರಗಳು ಮಕರ ಸಂಕ್ರಾಂತಿ ಹಬ್ಬದಂದು ಸೆಟ್ಟೇರಿದರೂ ಕೂಡ ಚಿತ್ರೀಕರಣ ಆರಂಭವಾಗಲು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಶಿವಣ್ಣ ಅವರು ಎರಡು-ಮೂರು ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವುದರಿಂದ ಅವರ ಕಾಲ್ ಶೀಟ್ ಸಿಗುವುದು ಸ್ವಲ್ಪ ಕಷ್ಟ.[ರವಿಚಂದ್ರನ್ ಪುತ್ರ ಮನೋರಂಜನ್ 'ರಣಧೀರ' ಸಿನಿಮಾ ನಿಂತ್ಹೋಯ್ತಾ?]

ಇನ್ನು ಮನೋರಂಜನ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ನಾಯಕಿ ಮತ್ತು ಚಿತ್ರ ಟೈಟಲ್ ನ ಹುಡುಕಾಟ ನಡೆಯುತ್ತಿದ್ದು, ಅದು ಪಕ್ಕಾ ಆದ ಮೇಲೆ ಶೂಟಿಂಗ್ ಆರಂಭವಾಗಲಿದೆ.

More from Filmibeat

English summary
Producer Jayanna of Jayanna combines has launched two films on the festival day of Sankranthi. Both the films were launched at the Gangapathi Temple in Basaveshwaranagar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X