ನಿರ್ಮಾಪಕ ಕೆ ಮಂಜುಗೆ ಹೃದಯ ಸಮಸ್ಯೆ, ಆಸ್ಪತ್ರೆಗೆ ದಾಖಲು

By ಜೇಮ್ಸ್ ಮಾರ್ಟಿನ್

Recommended Video

ನಿರ್ಮಾಪಕ ಕೆ ಮಂಜುಗೆ ಹೃದಯ ಸಮಸ್ಯೆ, ಆಸ್ಪತ್ರೆಗೆ ದಾಖಲು | FILMIBEAT KANNADA

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ಮಂಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿದ್ದರು ಎಂದು ತಿಳಿದು ಬಂದಿದೆ.

ಮಂಜು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಯಾವುದೇ ರೀತಿ ಆತಂಕಪಡಬೇಕಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರಾಮಾಗಿ ಇದ್ದಾರೆ ಎಂದು ಚಿತ್ರಲೋಕ ವೆಬ್ ಸೈಟ್ ಖ್ಯಾತಿಯ ಪತ್ರಕರ್ತ, ಚಿತ್ರಕರ್ಮಿ ಕೆಎಂ ವಿರೇಶ್ ಅವರು ಹೇಳಿದ್ದಾರೆ.

ಹಿರಿಯ ನಟ ವಿ ರವಿಚಂದ್ರನ್ ಅವರು ಕೂಡಾ ಆಸ್ಪತ್ರೆಗೆ ತೆರಳಿ ಮಂಜು ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ.

ಕೆ ಮಂಜು ಸಿನಿಮಾಸ್,ಲಕ್ಷ್ಮೀಶ್ರೀ ಕಂಬೈನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುವ ಮಂಜು ಅವರು ಒಂದೇ ಬಾರಿಗೆ ಐದು ಸಿನಿಮಾ ನಿರ್ಮಿಸಿ ಲಿಮ್ಕಾ ದಾಖಲೆ ಬರೆದವರು. ದಯಾಳ್ ಪದ್ಮನಾಭನ್ ನಿರ್ದೇಶನದ ಸತ್ಯ ಹರಿಶ್ಚಂದ್ರ ಇವರ ನಿರ್ಮಾಣದ ಕೊನೆ ಚಿತ್ರವಾಗಿದೆ.

Producer K Manju

'ಅರಮನೆ', 'ಸಾಹುಕಾರ', 'ಸೂಪರ್ ರಂಗ', 'ರಾಜಾಹುಲಿ', 'ಸಂತು ಸ್ಟ್ರೈಟ್ ಫಾರ್ವಾರ್ಡ್' ಕೆ.ಮಂಜು ನಿರ್ಮಾಣದ ಪ್ರಮುಖ ಸಿನಿಮಾಗಳಾಗಿದೆ.

ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಕನ್ನಡ ಸಿನಿಮಾ ನಿರ್ಮಾಪಕ ಕೆ ಮಂಜು ಅವರು ಕಣಕ್ಕಿಳಿಯುವ ಸುದ್ದಿ ಬಂದಿದೆ. ಈ ಮುಂಚೆ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಇವರು ಈಗ ಜೆಡಿಎಸ್ ನಿಂದ ಟಿಕೆಟ್ ಪಡೆದು ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ರಾಜಕೀಯ ರಂಗಕ್ಕೆ ಇಳಿಯದೇ ಸಿನಿಮಾ ಕ್ಷೇತ್ರದಲ್ಲೇ ಉಳಿದಿದ್ದಾರೆ.

ಇತ್ತೀಚೆಗೆ ಯಶ್ ಅವರ ಕೆಜಿಎಫ್ ಸಿನಿಮಾ ಹಿಟ್ ಆಗುತ್ತಿದ್ದಂತೆ ಅವರ ಹಳೆ ಸಿನಿಮಾಗಳ ಹಿಂದಿ ಡಬ್ ಅವೃತ್ತಿಯನ್ನು ಅನುಮತಿ ಇಲ್ಲದೆ ಪ್ರದರ್ಶನ, ಅಪ್ಲೋಡ್ ಮಾಡಲಾಗುತ್ತಿತ್ತು. ಮಂಜು ನಿರ್ಮಾಣದ ರಾಜಾಹುಲಿ ಚಿತ್ರ ಕೂಡಾ ಹಿಂದಿಗೆ ಡಬ್ ಆಗಿ ವಿಡಿಯೋಗಳು ಹರಿದಾಡುತ್ತಿದ್ದವು. ಈ ಬಗ್ಗೆ ಮಂಜು ಆಕ್ರೋಶ ವ್ಯಕ್ತಪಡಿಸಿದ್ದರು.

More from Filmibeat

English summary
Producer K Manju has been admitted to hospital due to Heart problem. Actor V Ravichandran, Senior Journalist KM Veeresh of Chitraloka website fame visited the hospital
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X