For Quick Alerts
  ALLOW NOTIFICATIONS  
  For Daily Alerts

  ನಟಿ ಅನುಶ್ರೀಯನ್ನು ಭೇಟಿ ಮಾಡಿದ ಕೆ.ಮಂಜು, ಇಮ್ರಾನ್ ಸರ್ದಾರಿಯಾ

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರಿಂದ ವಿಚಾರಣೆ ಎದುರಿಸಿರುವ ನಟಿ ಅನುಶ್ರೀ ಅವರನ್ನು ಇಂದು ಚಿತ್ರರಂಗದ ಕೆಲವು ಪ್ರಮುಖರು ಭೇಟಯಾದರು.

  ನಿರ್ಮಾಪಕ ಕೆ.ಮಂಜು ಹಾಗೂ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು ನಟಿ ಅನುಶ್ರೀ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಟ್ಟಿಗೆ ಮಾತುಕತೆ ನಡೆಸಿದರು.

  ಡ್ರಗ್ಸ್ ಪ್ರಕರಣದಲ್ಲಿ ನಟಿ ಅನುಶ್ರೀ ಹೆಸರು ಕೇಳಿಬಂದಿರುವ ಕಾರಣ ಅವರು ಸಾಕಷ್ಟು ವಿಚಲಿತಗೊಂಡಿದ್ದರು. ಫೇಸ್‌ಬುಕ್ ವಿಡಿಯೋ ಹಾಕಿ ಕಣ್ಣೀರು ಹಾಕಿದ್ದರು. ಹಾಗಾಗಿ ಅವರಿಗೆ ಧೈರ್ಯ ತುಂಬಲೆಂದು ಕೆ.ಮಂಜು ಹಾಗೂ ಇಮ್ರಾನ್ ಸರ್ದಾರಿಯಾ ಅನುಶ್ರೀ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

  ಅನುಶ್ರೀ ಧೈರ್ಯವಾಗಿದ್ದಾರೆ: ಕೆ.ಮಂಜು

  ಅನುಶ್ರೀ ಧೈರ್ಯವಾಗಿದ್ದಾರೆ: ಕೆ.ಮಂಜು

  ಅನುಶ್ರೀ ಅವರನ್ನು ಭೇಟಿಯಾಗಿ ಹೊರಬಂದು ಮಾಧ್ಯಮದೊಡನೆ ಮಾತನಾಡಿದ ಕೆ.ಮಂಜು, 'ಅನುಶ್ರೀ ಸಾಕಷ್ಟು ಧೈರ್ಯವಾಗಿದ್ದಾರೆ. ನಾನು ತಪ್ಪು ಮಾಡಿಲ್ಲ ಎಂದು ನಮ್ಮ ಬಳಿ ಹೇಳಿದ್ದಾರೆ ಎಂದು ಹೇಳಿದರು.

  ಆರೋಪ ಮುಕ್ತವಾಗಲಿದ್ದಾರೆ ಅನುಶ್ರೀ: ಕೆ.ಮಂಜು

  ಆರೋಪ ಮುಕ್ತವಾಗಲಿದ್ದಾರೆ ಅನುಶ್ರೀ: ಕೆ.ಮಂಜು

  ಅವರ ಪರಿಚಯದವರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಕಾರಣ ಇವರನ್ನು ವಿಚಾರಣೆಗೆ ಕರೆದಿದ್ದರು. ಅನುಶ್ರೀ ತಪ್ಪು ಮಾಡುವವಂಥಹವರಲ್ಲ ಎನ್ನುವ ನಂಬಿಕೆ ಇದೆ, ಅವರು ಆರೋಪ ಮುಕ್ತ ಆಗಲಿದ್ದಾರೆ ಎಂಬ ವಿಶ್ವಾಸವನ್ನು ಕೆ.ಮಂಜು ವ್ಯಕ್ತಪಡಿಸಿದ್ದಾರೆ.

  ಯಾರೊ ಸುಳ್ಳು ಸುದ್ದಿ ಹಬ್ಬಿದ್ದಾರೆ: ಕೆ.ಮಂಜು

  ಯಾರೊ ಸುಳ್ಳು ಸುದ್ದಿ ಹಬ್ಬಿದ್ದಾರೆ: ಕೆ.ಮಂಜು

  'ಅನುಶ್ರೀ ಅವರು ಮಾಜಿ ಸಿಎಂ ಒಬ್ಬರಿಗೆ ಕರೆ ಮಾಡಿದ್ದಾರೆ' ಎಂಬ ವಿಷಯದ ಬಗ್ಗೆ ಮಾತನಾಡಿದ ಕೆ.ಮಂಜು, 'ನಾನು ಯಾರಿಗೂ ಕರೆ ಮಾಡಿಲ್ಲ' ಎಂದು ಅನುಶ್ರೀ ಹೇಳಿದ್ದಾರೆ. ಇದೆಲ್ಲಾ ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕೆ.ಮಂಜು ಹೇಳಿದ್ದಾರೆ.

  ಗಂಡಸ್ತನ ಇದ್ರೆ ಸಾಬೀತು ಮಾಡಿ ತೋರ್ಸಿ ಅವಾಗ ಒಪ್ಕೋತೀನಿ | Kumarswamy | Filmibeat Kannada
  ಮಂಗಳೂರು ಸಿಸಿಬಿ ಪೊಲೀಸರಿಂದ ವಿಚಾರಣೆ

  ಮಂಗಳೂರು ಸಿಸಿಬಿ ಪೊಲೀಸರಿಂದ ವಿಚಾರಣೆ

  ಮಂಗಳೂರಿನ ಸಿಸಿಬಿ ಪೊಲೀಸರು ಮಂಗಳೂರು ಮೂಲದ ಬಾಲಿವುಡ್ ನಟ ಹಾಗೂ ನೃತ್ಯ ನಿರ್ದೇಶಕನನ್ನು ಮಾದಕ ವಸ್ತು ಸಮೇತ ಬಂಧಿಸಿದ್ದರು. ಆತ ಅನುಶ್ರೀಗೆ ಆಪ್ತ ಎಂದು ಹೇಳಲಾಗಿದ್ದು, ಆ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟವರ ವಿಚಾರಣೆ ವೇಳೆ ಅನುಶ್ರೀ ಹೆಸರು ಹೊರಬಂದಿದ್ದು, ಈಗಾಗಲೇ ಒಂದು ಬಾರಿ ಅನುಶ್ರೀ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  English summary
  Producer K Manju and dance director Imran Sardariya visited Anushree's house and talked with her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X