'ಪಡ್ಡೆಹುಲಿ' ಟ್ರೈಲರ್: ರಕ್ಷಿತ್ ಶೆಟ್ಟಿ ಸರ್ಪ್ರೈಸ್ ಉಡುಗೊರೆ
ಗಂಡುಗಲಿ ನಿರ್ಮಾಪಕ ಕೆ ಮಂಜು ಮಗ ಶ್ರೇಯಸ್ ಅಭಿನಯದ ಚೊಚ್ಚಲ ಸಿನಿಮಾ ಪಡ್ಡೆಹುಲಿ ಟ್ರೈಲರ್ ರಿಲೀಸ್ ಆಗಿದ್ದು, ಗಾಂಧಿನಗರದಲ್ಲಿ ಘರ್ಜಿಸುವ ಸೂಚನೆ ನೀಡಿದೆ.
ಮೊದಲ ಸಿನಿಮಾದಲ್ಲಿ ಡ್ಯಾನ್ಸ್, ಫೈಟ್, ಸ್ಟೈಲ್ ಎಲ್ಲವನ್ನ ರೂಢಿಸಿಕೊಂಡು ಬರ್ತಿರುವ ಶ್ರೇಯಸ್ ಇಂಡಸ್ಟ್ರಿಯಲ್ಲಿ ಹೊಸ ಇಮೇಜ್ ಗಿಟ್ಟಿಸಿಕೊಳ್ಳುವ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ ಎಂಬುದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ.
ಇನ್ನು ಹಲವು ವಿಶೇಷತೆಗಳೊಂದಿಗೆ ಬರ್ತಿರುವ ಪಡ್ಡೆಹುಲಿ ಟ್ರೈಲರ್ ನಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೊಂದು ಸರ್ಪ್ರೈಸ್ ಸಿಕ್ಕಿದೆ.

ಹೌದು, ಕೆ ಮಂಜು ಮಗನ ಮೊದಲ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜ್ ಸ್ಟೂಡೆಂಟ್ ಗೆಟಪ್ ನಲ್ಲಿ ಶ್ರೇಯಸ್ ಜೊತೆ ರಕ್ಷಿತ್ ಕೂಡ ಜೋಶ್ ಹೆಚ್ಚಿಸಿದ್ದಾರೆ.
ಇನ್ನುಳಿದಂತೆ ಗುರುದೇಶಪಾಂಡೆ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಎಂ ರಮೇಶ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications











