Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಸಂಜನಾ ಮನೆಗೆ ಭೇಟಿ ನೀಡಿದ ಖ್ಯಾತ ನಿರ್ಮಾಪಕ
ಡ್ರಗ್ಸ್ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಸಂಜನಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಸಂಜನಾ ಎಲ್ಲಿದ್ದಾರೆ, ಏನ್ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿರಲಿಲ್ಲ.
ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಶೇರ್ ಮಾಡುವ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬೇಗ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಇದೀಗ ಆಸ್ಪತ್ರೆಯಿಂದ ಮನೆಗೆ ಮರಳಿರುವ ಸಂಜನಾ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ.
ಇಸ್ಲಾಂ
ಧರ್ಮಕ್ಕೆ
ಮತಾಂತರವಾಗಿದ್ದು
ನನ್ನ
ವೈಯಕ್ತಿಕ
ಆಯ್ಕೆ:
ಸಂಜನಾ
ಗಲ್ರಾನಿ

ಸಂಜನಾ ಮನೆಗೆ ಭೇಟಿ ನೀಡಿದ ಕೆ ಮಂಜು
ಸಂಜನಾ ಮನೆಗೆ ಸ್ಯಾಂಡಲ್ ವುಡ್ ನ ನಿರ್ಮಾಪಕ ಕೆ ಮಂಜು ಭೇಟಿ ನೀಡುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆ ಮಂಜು ಜೊತೆ ಸಂಜನಾ ಕುಟುಂಬ ಬೋಜನ ಸವಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕೆ ಮಂಜುಗೆ ಧನ್ಯವಾದ ತಿಳಿಸಿದ ಸಂಜನಾ
ಫೋಟೋ ಶೇರ್ ಮಾಡಿ, 'ಕೆ ಮಂಜು ಅಣ್ಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಧನ್ಯವಾದಗಳು ಅಣ್ಣ ನಿಮ್ಮ ಭೇಟಿಗೆ' ಎಂದು ಬರೆದುಕೊಂಡಿದ್ದಾರೆ. ಜೈಲಿನಿಂದ ಬಂದ ಬಳಿಕ ಸಂಜನಾ ಆಕ್ಟೀವ್ ಆಗಿರುವುದನ್ನು ನೋಡಿ ಸಂಜನಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಹಾದಿ ಕಠಿಣವಾಗಿದೆ ಎಂದಿರುವ ನಟಿ
ಮೊನ್ನೆಮೊನ್ನೆಯಷ್ಟೆ ಮಾತನಾಡಿದ್ದ ಸಂಜನಾ 'ನನ್ನ ಮುಂದಿನ ಹಾದಿ ಬಹಳ ಕಠಿಣವಾಗಿರಲಿದೆ ಎಂಬ ಅರಿವಿದೆ. ನನಗೆ ಎದುರುಗೊಳ್ಳುವ ಎಲ್ಲ ಸಮಸ್ಯೆಗಳನ್ನು ನಗುವಿನೊಂದಿಗೆ, ಪ್ರೀತಿಯೊಂದಿಗೆ ಎದುರಿಸಲಿದ್ದೇನೆ. ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ. ನಾನು ಗೆಲುವು ಸಾಧಿಸಲಿದ್ದೇನೆ' ಎಂದಿದ್ದರು.
ಆಸ್ಪತ್ರೆಗೆ
ದಾಖಲಾದ
ಸಂಜನಾ:
'ಈ
ಹಿಂದಿಗಿಂತಲೂ
ಬಲವಾಗಿ
ಮರಳಲು
ಚೇತರಿಸಿಕೊಳ್ಳುತ್ತಿದ್ದೇನೆ'

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಸಂಜನಾ ಪ್ರತಿಕ್ರಿಯೆ
ಇನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜನಾ 'ನಾನು ಅಧ್ಯಾತ್ಮದ ಕಡೆ ಗಮನವಹಿಸುತ್ತಿದ್ದೇನೆ. ಕೆಲವು ತಿಂಗಳುಗಳಿಂದ ನಮಾಜ್ ಓದುವುದು ಅಭ್ಯಾಸ ಮಾಡಿಕೊಂಡಿದ್ದೇನೆ. ನಾನು ಕರ್ಮ ಮತ್ತು ದೇವರಲ್ಲಿ ನಂಬಿಕೆ ಇಟ್ಟವಳು, ಎಲ್ಲಾ ಧರ್ಮಗಳನ್ನು ನಾನು ಸಮಾನವಾಗಿ ಗೌರವಿಸುತ್ತೇನೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನನ್ನ ವೈಯಕ್ತಿಕ ಆಯ್ಕೆ. ನನ್ನ ಈ ನಿರ್ಧಾರವನ್ನು ರಾಜಕೀಯಗೊಳಿಸುವುದು, ವಿಮರ್ಶೆಗೊಳಪಡಿಸುವುದು ನನಗೆ ಇಷ್ಟವಿಲ್ಲ' ಎಂದಿದ್ದರು.
ಸದ್ಯ ಮತ್ತೆ ಚೇತರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಸಂಜನಾ ಬಣ್ಣದ ಲೋಕಕ್ಕೆ ವಾಪಸ್ ಆಗುತ್ತಾರಾ? ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.