twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣ-ಅಪ್ಪು ಒಟ್ಟಿಗೆ ಮಾಡಬೇಕಿತ್ತು ಹಲವು ಸಿನಿಮಾಗಳು!

    |

    ಪುನೀತ್ ರಾಜ್‌ಕುಮಾರ್ ಅಗಲಿ 21 ದಿನಗಳಾಗಿವೆ. ಆದರೆ ಅವರ ಅಗಲಿಕೆಯ ನೋವು ಇನಿತೂ ಕಡಿಮೆಯಾಗಿಲ್ಲ. ಪುನೀತ್ ಸಾವು ಕೇವಲ ವ್ಯಕ್ತಿಯ ಸಾವಲ್ಲ ಹಲವು ಕನಸುಗಳ, ಅವರಿಗಾಗಿ ಕಾಯುತ್ತಿದ್ದ ಸಿನಿಮಾಗಳ ಸಾವು.

    ಪುನೀತ್ ರಾಜ್‌ಕುಮಾರ್ ಅವರಿಗಾಗಿ ಹಲವು ಸಿನಿಮಾಗಳು ತಯಾರಾಗಿದ್ದವು. ಅದರಲ್ಲಿಯೂ ದೊಡ್ಮನೆ ಅಭಿಮಾನಿಗಳ ಬಹುದಿನದ ಕನಸಾಗಿರುವ ಶಿವಣ್ಣ-ಪುನೀತ್ ಅನ್ನು ಒಟ್ಟಿಗೆ ತೆರೆಯ ಮೇಲೆ ನೋಡುವ ಕನಸ್ಸನ್ನು ನನಸಾಗಿಸಲು ಯೋಜನೆಗಳು ಚಾಲ್ತಿಯಲ್ಲಿದ್ದವು. ಆದರೆ ಅಷ್ಟರಲ್ಲೇ ಪುನೀತ್ ಎಲ್ಲರನ್ನೂ ಅಗಲಿ ಹೋಗಿಬಿಟ್ಟರು.

    ಅಣ್ಣಾವ್ರ ಮಕ್ಕಳು ಮೂವರು ಒಂದು ಸಿನಿಮಾದಲ್ಲಿ ನಟಿಸಬೇಕು ಎಂಬುದು ಕನ್ನಡ ಸಿನಿಮಾ ಪ್ರೇಮಿಗಳ ಬಹುದಿನದ ಒತ್ತಾಯ. ಹಲವು ವರ್ಷಗಳಿಂದ ಹಲವರು ಇದಕ್ಕಾಗಿ ಏನೇನೋ ಯತ್ನ ಮಾಡಿದರು ಆದರೆ ಯಾವುದೂ ಸಫಲವಾಗಲಿಲ್ಲ. ಆದರೆ ಈಗ ಅದು ಸಾಧ್ಯವಾಗುವ ಹಂತದಲ್ಲಿತ್ತು ಆದರೆ ಪುನೀತ್ ಅಗಲಿಕೆಯಿಂದ ಆ ಕನಸು ಕನಸಾಗಿಯೇ ಉಳಿದು ಬಿಟ್ಟಿತು.

    'ಭರತೇಶವೈಭವ' ಹೆಸರಿನ ಸಿನಿಮಾ ಘೋಷಿಸಲಾಗಿತ್ತು

    'ಭರತೇಶವೈಭವ' ಹೆಸರಿನ ಸಿನಿಮಾ ಘೋಷಿಸಲಾಗಿತ್ತು

    ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಕೆಪಿ ಶ್ರೀಕಾಂತ್, ''ಅಣ್ಣಾವ್ರ ಕುಟುಂಬದ ಎಲ್ಲರನ್ನೂ ಹಾಕಿಕೊಂಡು ಸಿನಿಮಾ ಮಾಡಬೇಕು ಎಂದು ಕನಸು ಕಂಡವರು ಪಟ್ಟಾಭಿರಾಮ್. 'ಕುಮಾರರಾಮ' ಸಿನಿಮಾ ಮಾಡಿದ್ದ ಅವರು 'ಭರತೇಶವೈಭವ' ಹೆಸರಿನ ಸಿನಿಮಾದ ಜಾಹೀರಾತು ನೀಡಿದ್ದರು. ಅಪ್ಪಾಜಿ ಅವರೊಟ್ಟಿಗೆ ಈ ಬಗ್ಗೆ ಚರ್ಚೆಗಳನ್ನು ಸಹ ಮಾಡಿದ್ದರು. ಆದರೆ ಆ ಸಿನಿಮಾ ನಿಂತು ಹೋಯಿತು'' ಎಂದರು.

    ಕಾರ್ಪೊರೇಟ್ ಸಂಸ್ಥೆಯೊಂದು ಪ್ರಯತ್ನ ಮಾಡಿತ್ತು

    ಕಾರ್ಪೊರೇಟ್ ಸಂಸ್ಥೆಯೊಂದು ಪ್ರಯತ್ನ ಮಾಡಿತ್ತು

    ''ಆ ನಂತರ ಸುಮಾರು 15 ವರ್ಷಗಳ ಹಿಂದೆ ಕಾರ್ಪೊರೇಟ್ ಸಂಸ್ಥೆಯೊಂದು ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಅವರನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಲು ಮುಂದೆ ಬಂದಿತ್ತು. ಈ ಮೂವರನ್ನು ಒಟ್ಟಿಗೆ ತೆರೆ ಮೇಲೆ ತರಲು ದೊಡ್ಡ ಮೊತ್ತದ ಬಂಡವಾಳ ಬೇಕಾಗಿತ್ತು ಅಷ್ಟು ಬಂಡವಾಳ ಹೂಡಲು ಆ ಕಾರ್ಪೊರೇಟ್ ಸಂಸ್ಥೆ ತಯಾರಿತ್ತು. ಆ ಕಾರ್ಪೊರೇಟ್ ಸಂಸ್ಥೆ ಪತ್ರಿಕಾಗೋಷ್ಠಿ ಕರೆದು ಸಿನಿಮಾ ಘೋಷಿಸಿತ್ತು ಸಹ ಆ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ, ರಾಘಣ್ಣ, ಅಪ್ಪು ಸಹ ಭಾಗವಹಿಸಿದ್ದರು. ಆದರೆ ಆ ಸಿನಿಮಾ ಸಹ ಮುಂದುವರೆಯಲಿಲ್ಲ'' ಎಂದು ಮಾಹಿತಿ ನೀಡಿದರು ಶ್ರೀಕಾಂತ್.

    'ಟಗರು 2' ಸಿನಿಮಾ ಮಾಡುವ ಯೋಚನೆ

    'ಟಗರು 2' ಸಿನಿಮಾ ಮಾಡುವ ಯೋಚನೆ

    ''ಅದಾದ ನಂತರ ಶಿವಣ್ಣ ಮತ್ತು ಪುನೀತ್ ಒಟ್ಟಿಗೆ ನಟಿಸುವ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಅದಕ್ಕೆ 'ಟಗರು 2' ಎಂದು ಹೆಸರಿಡುವ ಬಗ್ಗೆ ಚರ್ಚೆ ಮಾಡಲಾಯ್ತು. ಈ ವಿಷಯವನ್ನು ನಿರ್ದೇಶಕ ಸೂರಿ ಅವರೇ ಶಿವಣ್ಣ ಹಾಗೂ ಅಪ್ಪು ಇಬ್ಬರ ಬಳಿ ಮಾತನಾಡಿದ್ದರು. ಆಗ ಅಪ್ಪು ಅವರು ಈ ಸಿನಿಮಾವನ್ನು ನಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಮಾಡ್ತೀನಿ ಎಂದರು. ನಿಮ್ಮ ಬ್ಯಾನರ್ ಬೇರೆಯಲ್ಲ, ನಮ್ಮ ಬ್ಯಾನರ್ ಬೇರೆಯಲ್ಲ ಎಂದು ನಾನು ಸಹ ಒಪ್ಪಿಕೊಂಡೆ'' ಎಂದರು ಶ್ರೀಕಾಂತ್. 'ಟಗರು' ಸಿನಿಮಾವನ್ನು ಇವರೇ ನಿರ್ಮಾಣ ಮಾಡಿದ್ದರು.

    ರವಿವರ್ಮಾ ಮಾಸ್ಟರ್ ಸಹ ಯತ್ನಿಸಿದ್ದರು: ಶ್ರೀಕಾಂತ್

    ರವಿವರ್ಮಾ ಮಾಸ್ಟರ್ ಸಹ ಯತ್ನಿಸಿದ್ದರು: ಶ್ರೀಕಾಂತ್

    ''ಅದಕ್ಕೂ ಮುನ್ನ ರವಿವರ್ಮ ಮಾಸ್ಟರ್ ಸಹ ಶಿವಣ್ಣ-ಪುನೀತ್ ಅವರನ್ನು ಇಟ್ಟುಕೊಂಡು ಸಿನಿಮಾ ಮಾಡಲು ತಯಾರಾಗಿದ್ದರು. ಕತೆ ಸಹ ಹೇಳಿದ್ದರು. ಆದರೆ ಬೇರೆ-ಬೇರೆ ಕಾರಣಗಳಿಂದ ಆ ಸಿನಿಮಾ ಆಗಲಿಲ್ಲ. ವಿಧಿ ಎನ್ನುವುದೇ ಇಷ್ಟು. ಯಾವ ಕನಸೂ ಈಡೇರಲಿಲ್ಲ. ಅವರಿಬ್ಬರನ್ನು ಒಟ್ಟಿಗೆ ನೋಡುವ ಅದೃಷ್ಟ ಅಭಿಮಾನಿಗಳಿಗೆ ಇರಲಿಲ್ಲ ಎನಿಸುತ್ತದೆ'' ಎಂದರು ಶ್ರೀಕಾಂತ್. ಪುನೀತ್ ಹಾಗೂ ಶಿವಣ್ಣನಿಗೆ ಸಿನಿಮಾ ಮಾಡುವ ಬಗ್ಗೆ ಸೂರಿ ಸಹ ಕೆಲ ದಿನಗಳ ಹಿಂದೆ ಮಾತನಾಡಿದ್ದರು.

    English summary
    Producer KP Shrikanth talks about Shiva Rajkumar and Puneeth Rajkumar movie together.
    Friday, November 19, 2021, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X