»   » 'ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ

'ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಮಟ್ಟಿಗೆ ಸದ್ಯ ದೊಡ್ಡ ಸುದ್ದಿ ಮಾಡುತ್ತಿರುವ ಚಿತ್ರ 'ಕುರುಕ್ಷೇತ್ರ'. ಈ ಚಿತ್ರವನ್ನ ಖ್ಯಾತ ನಿರ್ಮಾಪಕ ಮುನಿರತ್ನ ಅವರು ನಿರ್ಮಾಣ ಮಾಡಲಿದ್ದಾರೆ. ಮಹಾಭಾರತದ ಕಥಾವಸ್ತುವನ್ನಿಟ್ಟು ಮಾಡಲಾಗುತ್ತಿರುವ ಈ ಚಿತ್ರದಲ್ಲಿ ಕನ್ನಡದ ಟಾಪ್ ನಟರು ಅಭಿನಯಿಸಲಿದ್ದಾರೆ.[ದರ್ಶನ್, ಸುದೀಪ್, ಯಶ್ ಬಳಿ ಪುನೀತ್ ಗೆ ಇಷ್ಟವಾಗಿದ್ದೇನು!]

ಕನ್ನಡದ 'ಕುರುಕ್ಷೇತ್ರ'ದಲ್ಲಿ ಯಾವ ಯಾವ ನಟರು ಕಾಣಿಸಿಕೊಳ್ಳಲಿದ್ದಾರೆ ಮತ್ತು ಯಾವ ಯಾವ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಕುತೂಹಲಕ್ಕೆ ನಿರ್ಮಾಪಕ ಮುನಿರತ್ನ ಬ್ರೇಕ್ ಹಾಕಿದ್ದಾರೆ. ಬಿ-ಟಿವಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಮುನಿರತ್ನ, ಪಾಂಡವರು ಯಾರು? ಕೌರವರು ಯಾರು? ದ್ರೌಪದಿ ಯಾರು ಎಂಬುದನ್ನ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

'ಕುರುಕ್ಷೇತ್ರ'ಕ್ಕೆ ಸಜ್ಜಾಗಿದೆ ಸ್ಯಾಂಡಲ್ ವುಡ್!

'ಕುರುಕ್ಷೇತ್ರ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ, ಅಂಬರೀಶ್, ರವಿಚಂದ್ರನ್ ಸೇರಿದಂತೆ ಹಲವು ನಟರು ಅಭಿನಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಯಾರು ಯಾರು ಯಾವ ಪಾತ್ರಗಳನ್ನ ನಿರ್ವಹಿಸಲಿದ್ದಾರೆ ಎಂಬುದು ಮುಂದೆ ನೋಡಿ.....

ದರ್ಶನ್ 'ದುರ್ಯೋಧನ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, 'ಕುರುಕ್ಷೇತ್ರ' ಚಿತ್ರದಲ್ಲಿ ಕೌರವ ಸಾರ್ವಭೌಮ 'ದುರ್ಯೋಧನ'ನಾಗಿ ಮಿಂಚಲಿದ್ದಾರಂತೆ. ಈ ಹಿಂದೆ 'ಸಂಗೊಳ್ಳಿ ರಾಯಣ್ಣ'ನಾಗಿ ಅಬ್ಬರಿಸಿದ್ದ ದಾಸ ಈಗ 'ದುರ್ಯೋಧನ'ನಾಗಿ ಬಣ್ಣ ಹಚ್ಚಲಿದ್ದಾರೆ ಎಂದು ಸ್ವತಃ ನಿರ್ಮಾಪಕರೇ ಬಹಿರಂಗಪಡಿಸಿದ್ದಾರೆ.[ದರ್ಶನ್ '50'ನೇ ಚಿತ್ರದಲ್ಲಿ ಮತ್ತೊಂದು ಮೆಗಾ ಟ್ವಿಸ್ಟ್!]

'ಭೀಷ್ಮ'ನ ಪಾತ್ರಕ್ಕೆ ಅಂಬಿ!

ಕುರುಕ್ಷೇತ್ರದಲ್ಲಿ 'ಭೀಷ್ಮನ ಪಾತ್ರ ತುಂಬಾ ಮುಖ್ಯವಾಗಿರುತ್ತೆ. ಬೆಳ್ಳಿತೆರೆಯಲ್ಲಿ ಈ ಪಾತ್ರವನ್ನ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಾಡುವ ಸಾಧ್ಯತೆಯಿದೆ ಎಂದು ನಿರ್ಮಾಪಕರೇ ಸ್ವಷ್ಟನೆ ನೀಡಿದ್ದಾರೆ. ಈಗಾಗಲೇ ಅಂಬರೀಶ್ ಅವರ ಬಳಿ ಭೀಷ್ಮನ ಪಾತ್ರದಲ್ಲಿ ಅಭಿನಯಿಸುವಂತೆ ಮಾತುಕತೆ ಕೂಡ ನಡೆಸಿದ್ದಾರಂತೆ.[ದರ್ಶನ್ '50'ನೇ ಚಿತ್ರ ಸ್ನೇಹಿತರಿಗೆ ಮೀಸಲು! ]

'ಧರ್ಮರಾಯ'ನ ಪಾತ್ರಕ್ಕೆ ಕ್ರೇಜಿಸ್ಟಾರ್!

ಪಂಚ ಪಾಂಡವರಲ್ಲಿ ಪ್ರಥಮರಾದ 'ಧರ್ಮರಾಯ'ನ ಪಾತ್ರಕ್ಕಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನ ಕರೆತರುವ ವಿಶ್ವಾಸದಲ್ಲಿದ್ದಾರಂತೆ ನಿರ್ಮಾಪಕರು. ಆದ್ರೆ, ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಎಂಬುದನ್ನ ಕಾದುನೋಡಬೇಕಿದೆ.

ಉಪೇಂದ್ರಗಾಗಿ ಒಂದು ಪಾತ್ರ ಫಿಕ್ಸ್!

ಇನ್ನು ನಿರ್ಮಾಪಕ ಮುನಿರತ್ನ ಅವರ ನೆಚ್ಚಿನ ನಟ ಉಪೇಂದ್ರ ಅವರಿಗೂ ಒಂದು ಪಾತ್ರ ಸೀಮಿತವಾಗಿದೆಯಂತೆ. ಈ ಹಿಂದೆ 'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ಮುನಿರತ್ನ ಹಾಗೂ ಉಪ್ಪಿ ಒಟ್ಟಾಗಿ ಕೆಲಸ ಮಾಡಿದ್ದರು. ಹೀಗಾಗಿ, ಉಪ್ಪಿ ಅವರು ಮಾಡುವುದು ಖಚಿತವಾಗಿದ್ದು, ಯಾವ ಪಾತ್ರವೆಂಬುದು ನಿಗೂಢವಾಗಿದೆ.

'ಭೀಮ'ನಿಗಾಗಿ ಹುಡುಕಾಟ!

'ಭೀಮ'ನ ಪಾತ್ರಕ್ಕಾಗಿ ಹುಡುಕಾಟ ನಡೆಯುತ್ತಿದೆಯಂತೆ. ಯಾಕಂದ್ರೆ, ದರ್ಶನ್ ಅವರಂತಹ ಕಟ್ಟುಮಸ್ತಾದ ನಾಯಕ 'ದುರ್ಯೋಧನ'ನ ಪಾತ್ರ ಮಾಡುತ್ತಿರುವಾಗ, ಅವರ ಎದುರು 'ಭೀಮ'ನ ಪಾತ್ರ ಮಾಡುವವರು ಕೂಡ ಅಷ್ಟೇ ಕಟ್ಟುಮಸ್ತಾಗಿ ಇರಬೇಕಾಗಿರುವುದರಿಂದ, ಆ ಪಾತ್ರವನ್ನ ಯಾರು ನಿರ್ವಹಿಸಬೇಕು ಎಂಬುದು ಯೋಚನೆಯಾಗಿದೆಯಂತೆ.

'ದ್ರೌಪದಿ'ಗಾಗಿ ಬಹುಭಾಷಾ ನಟಿ

ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಒಟ್ಟಾಗಿ ಅಭಿನಯಿಸುವುತ್ತಿರುವ 'ಕುರುಕ್ಷೇತ್ರ' ಚಿತ್ರದಲ್ಲಿ 'ದ್ರೌಪದಿ' ಯಾರಾಗಬಹುದು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆದ್ರೆ, 'ದ್ರೌಪದಿ' ಪಾತ್ರಕ್ಕಾಗಿ ನಿರ್ಮಾಪಕರ ಕಣ್ಣು ಬಹುಭಾಷಾ ನಟಿ ಅನುಷ್ಕ ಶೆಟ್ಟಿ ಮೇಲೆ ಬಿದ್ದಿದೆಯಂತೆ.

ಸುದೀಪ್ ಅಭಿನಯಿಸ್ತಾರ?

ಈಗಾಗಲೇ 'ಕುರುಕ್ಷೇತ್ರ' ಚಿತ್ರಕ್ಕೆ ಸಂಬಂಧಪಟ್ಟಂತೆ ಕಿಚ್ಚ ಸುದೀಪ್ ಕ್ಲಾರಿಟಿ ಕೊಟ್ಟಿದ್ದು, ಸದ್ಯದ ಮಟ್ಟಿಗೆ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸುವುದರ ಬಗ್ಗೆ ನಿರ್ಧಾರವಾಗಿಲ್ಲ ಎಂದು ಸ್ವಷ್ಟನೆ ನೀಡಿದ್ದಾರೆ.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

'ಕುರುಕ್ಷೇತ್ರ'ದಲ್ಲಿ ಪುನೀತ್, ಯಶ್ ಇರ್ತಾರ?

ಪುನೀತ್ ರಾಜ್ ಕುಮಾರ್ ಮತ್ತು ಯಶ್ ಅವರ ಪಾತ್ರದ ಬಗ್ಗೆ ಬಿಟ್ಟುಕೊಡದ ನಿರ್ಮಾಪಕರು, ಸದ್ಯದಲ್ಲಿ ಖಚಿತ ಪಡಿಸುತ್ತೇವೆ ಎಂದು ಹೇಳಿದ್ದಾರೆ.

ನಾಗಣ್ಣ ನಿರ್ದೇಶಕ?

ಕನ್ನಡದ ಈ ಮೆಗಾಮೂವಿಗೆ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ 'ಸಂಗೊಳ್ಳಿ ರಾಯಣ್ಣ' ಅಂತಹ ಐತಿಹಾಸಿಕ ಚಿತ್ರವನ್ನ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನಾಗಣ್ಣ, ಈಗ ಮತ್ತೊಂದು ಮಹಾ ಚಿತ್ರಕ್ಕೆ ಸಜ್ಜಾಗಿದ್ದಾರೆ.['ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?]

ಸದ್ಯದಲ್ಲೇ ಸಿಗಲಿದೆ ಫುಲ್ ಡಿಟೇಲ್ಸ್!

ಅಂದ್ಹಾಗೆ, 'ಕುರುಕ್ಷೇತ್ರ' ಚಿತ್ರ ಪ್ರಿ-ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದ್ದು, ಆದಷ್ಟೂ ಬೇಗ ಉಳಿದ ಕಲಾವಿದರ ಪಟ್ಟಿ ಬಿಡುಗಡೆ ಮಾಡಲಿದ್ದಾರಂತೆ ನಿರ್ಮಾಪಕರು. ಜುಲೈ ಹೊತ್ತಿಗೆ ಸಿನಿಮಾ ಶುರುವಾಗಲಿದ್ದು, ಸುಮಾರು 6 ತಿಂಗಳು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಸೇರಿದಂತೆ ಚಿತ್ರೀಕರಣ ನಡೆಯಲಿದೆಯಂತೆ.

English summary
Kannada Producer Munirathna Gives Clarity About Upcoming Movie 'Kurukshetra'. According to Producer Munirathna Dasrshan will Doing Major Role in The Movie. Sudeep, Yash, Puneeth Rajkumar, Upendra, ambarish, Ravichandren will also featured in this Big Project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada