'ಕುರುಕ್ಷೇತ್ರ' ನೋಡಲಿದ್ದಾರೆ ಮುನಿರತ್ನ: ಅಂದೇ ರಿಲೀಸ್ ದಿನಾಂಕ ಫಿಕ್ಸ್.!

Recommended Video

Kurukshethra : ಕುರುಕ್ಷೇತ್ರ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆಗಲಿದೆ....! |FILMIBEAT KANNADA

ಇಷ್ಟು ದಿನ 'ಕುರುಕ್ಷೇತ್ರ' ಸಿನಿಮಾ ಎಂದು ಬೀಗುತ್ತಿದ್ದ ಡಿ-ಬಾಸ್ ಭಕ್ತರು, ಈಗ 'ಮದಕರಿ ನಾಯಕ' ಎಂದು ಕೂಗುತ್ತಿದ್ದಾರೆ. ಯಾಕಂದ್ರೆ, ಕುರುಕ್ಷೇತ್ರ ಸಿನಿಮಾ ಇನ್ನೂ ಲೇಟ್. ಅದಕ್ಕೂ ಮುಂಚೆ 'ಯಜಮಾನ' ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಆದ್ರೆ, ಸೈಲೆಂಟ್ ಆಗಿ ಸಿನಿಮಾ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ. ಹಾಗಿದ್ರೆ, ಕುರುಕ್ಷೇತ್ರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದುಹೋಯಿತಾ.? ಮೊದಲ ಪ್ರತಿ ಸಿದ್ಧವಾಯ್ತಾ.? ಯಾವಾಗ ಬಿಡುಗಡೆ.? ಎಂಬ ಕುತೂಹಲ ಕಾಡುತ್ತಿದೆ.

ಇದಕ್ಕೆಲ್ಲಾ ಮುನಿರತ್ನ ಉತ್ತರ ಕೊಟ್ಟಿದ್ದಾರೆ. ಸ್ವತಃ ಮುನಿರತ್ನ ಅವರೇ ಕುರುಕ್ಷೇತ್ರ ಸಿನಿಮಾ ನೋಡ್ತಿದ್ದಾರಂತೆ. ಒಮ್ಮೆ ಇವರು ನೋಡಿದ ನಂತರ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಮಾಡ್ತಾರಂತೆ. ಹಾಗಿದ್ರೆ, ಮುನಿರತ್ನ ಸಿನಿಮಾ ನೋಡುವುದು ಯಾವಾಗ.? ಮುಂದೆ ಓದಿ.....

ಐದು ರಾಜ್ಯಗಳಲ್ಲಿ ಕೆಲಸ

ಐದು ರಾಜ್ಯಗಳಲ್ಲಿ ಕೆಲಸ

ಕುರುಕ್ಷೇತ್ರ ಚಿತ್ರೀಕರಣ ಕಂಪ್ಲೀಟ್ ಮಾಡಿದೆ. ದರ್ಶನ್ ಸೇರಿದಂತೆ ಎಲ್ಲಾ ಕಲಾವಿದರು ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಈಗೇನಿದ್ರೂ ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಪೌರಾಣಿಕ ಸಿನಿಮಾವಾಗಿರುವುದರಿಂದ ಹೆಚ್ಚು ಕೆಲಸ ಇದೆ ಎಂಬ ಕಾರಣಕ್ಕೆ ಸಿನಿಮಾ ಬಿಡುಗಡೆ ಕೂಡ ಮುಂದಕ್ಕೆ ಹೋಗಿತ್ತು. ಬಾಂಬೆ, ಹೈದ್ರಾಬಾದ್, ಕೇರಳ, ಚೆನ್ನೈ, ಬೆಂಗಳೂರಿನಲ್ಲಿ ಗ್ರಾಫಿಕ್ಸ್ ಕೆಲಸ ಸಾಗುತ್ತಿದೆ.

ಸಿನಿಮಾ ನೋಡಲಿದ್ದಾರೆ ಮುನಿರತ್ನ

ಸಿನಿಮಾ ನೋಡಲಿದ್ದಾರೆ ಮುನಿರತ್ನ

ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿರುವ ಕಾರಣ ಮುನಿರತ್ನ ಅವರು ಕುರುಕ್ಷೇತ್ರ ಚಿತ್ರವನ್ನ ನೋಡಲಿದ್ದಾರಂತೆ. ಅಂದ್ರೆ, ನವೆಂಬರ್ 5 ರಂದು ಸಂಪೂರ್ಣ ಕೆಲಸ ಮುಗಿಯುತ್ತಂತೆ. ನವೆಂಬರ್ 10 ರಂದು 2ಡಿ ವರ್ಷನ್ ನಲ್ಲಿ ಕುರುಕ್ಷೇತ್ರ ನೋಡಲಿದ್ದಾರಂತೆ.

ಅಂದೇ ರಿಲೀಸ್ ಡೇಟ್ ಫಿಕ್ಸ್.!

ಅಂದೇ ರಿಲೀಸ್ ಡೇಟ್ ಫಿಕ್ಸ್.!

ನವೆಂಬರ್ 10 ರಂದು ನಿರ್ಮಾಪಕ ಮುನಿರತ್ನ ಸಿನಿಮಾ ನೋಡಲಿದ್ದಾರೆ. ನೋಡಿದ ಬಳಿಕೆ ನಿರ್ಮಾಪಕರಿಗೆ ತೃಪ್ತಿಯಾದ್ರೆ, ಆಗಲೇ ರಿಲೀಸ್ ಡೇಟ್ ಫಿಕ್ಸ್ ಮಾಡ್ತಾರಂತೆ. ಇಲ್ಲವಾದಲ್ಲಿ, ಮತ್ತಷ್ಟು ಹೆಚ್ಚುವರಿ ಕೆಲಸಕ್ಕೆ ಸೂಚಿಸುತ್ತಾರಂತೆ. ಮೊದಲು ನಾನು ತೃಪ್ತಿಯಾಗಬೇಕು, ನಂತರ ಅಭಿಮಾನಿಗಳ ಮುಂದೆ ಸಿನಿಮಾ ಬರಲಿದೆ, ನನಗೆ ಇಷ್ಟವಾಗಿಲ್ಲ ಅಂದ್ರೆ, ಫ್ಯಾನ್ಸ್ ಒಪ್ಪಿಕೊಳ್ತಾರಾ ಎನ್ನುತ್ತಾರೆ ಮುನಿರತ್ನ.

ಕಾಂಪಿಟೇಶನ್ ಗೆ ನಾವು ರೆಡಿ

ಕಾಂಪಿಟೇಶನ್ ಗೆ ನಾವು ರೆಡಿ

ಹಾಗ್ನೋಡಿದ್ರೆ, 'ಕುರುಕ್ಷೇತ್ರ' ಸಿನಿಮಾಗೂ ಮುಂಚೆ ಯಜಮಾನ ಸಿನಿಮಾ ಬರುತ್ತೆ ಎನ್ನಲಾಗಿದೆ. ಬಟ್, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಿರ್ಮಾಪಕ ಮುನಿರತ್ನ ಅವರು, ನಾವು ಯಾರ ಬಗ್ಗೆಯೂ ಯೋಚನೆ ಮಾಡಲ್ಲ. ನಮ್ಮ ಸಿನಿಮಾ ರೆಡಿಯಾಗಿದ ತಕ್ಷಣ ನಾವು ಬರ್ತೀವಿ. ಯಾರೇ ಬಂದ್ರು ನಾವು ಯೋಚನೆ ಮಾಡಲ್ಲ. ನಾವು ಬಂದೇ ಬರ್ತೀವಿ ಎಂದು ಮುನಿರತ್ನ ಸ್ಪಷ್ಟಪಡಿಸಿದ್ದಾರೆ.

More from Filmibeat

English summary
Producer Munirathna will be watching kurukshetra movie at november 10th. the movie starring darshan, ambareesh, arjun sarja, ravichandran in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X