ಏಳು ದಿನಗಳ ಒಳಗೆ ನಟಿ ಶ್ರುತಿ ಹರಿಹರನ್ ದಾಖಲೆ ಕೊಡಬೇಕು: ಮುನಿರತ್ನ

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಬಗ್ಗೆ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ವಿರುದ್ಧ ನಿರ್ಮಾಪಕ ಮುನಿರತ್ನ ಯರ್ರಾಬಿರ್ರಿ ಕೋಪಿಸಿಕೊಂಡಿದ್ದಾರೆ.

ನಟಿ ಶ್ರುತಿ ಹರಿಹರನ್ ನೆಗೆಟಿವ್ ಪಬ್ಲಿಸಿಟಿ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ನಿರ್ಮಾಪಕ ಮುನಿರತ್ನ ಆಕೆ ವಿರುದ್ಧ ಗುಡುಗಿದ್ದಾರೆ. ಅಲ್ಲದೇ, ನಟಿ ಶ್ರುತಿ ಹರಿಹರನ್ ಗೆ ಪತ್ರ ಬರೆಯಲು ಮುಂದಾಗಿರುವ ನಿರ್ಮಾಪಕ ಮುನಿರತ್ನ, ಏಳು ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಲಿದ್ದಾರೆ.

''ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷನಾಗಿ ನಾನು ಶ್ರುತಿ ಹರಿಹರನ್ ಗೆ ಪತ್ರ ಬರೆಯುತ್ತಿದ್ದೇನೆ. ಏಳು ದಿನಗಳ ಒಳಗಾಗಿ ಆಕೆ ಉತ್ತರ ಕೊಡಬೇಕು. ದಾಖಲೆಗಳನ್ನು ಒಂದು ವಾರದ ಒಳಗೆ ತಲುಪಿಸಬೇಕು. ಒಂದ್ವೇಳೆ ಉತ್ತರ ಕೊಡಲಿಲ್ಲ ಅಂದ್ರೆ ಆರೋಪ ಸುಳ್ಳು ಅಂತ ನಾನು ಭಾವಿಸುತ್ತೇನೆ. ಬಳಿಕ ನಮ್ಮ ಸಂಘದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ'' ಎಂದಿದ್ದಾರೆ ನಿರ್ಮಾಪಕ ಮುನಿರತ್ನ.

Producer Muniratna to write letter to Kannada Actress Sruthi Hariharan

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ನಟಿ ಶ್ರುತಿ ಹರಿಹರನ್, ''ಘಟನೆ ಬಗ್ಗೆ ನೀವೇ ಮುಂದೆ ನಿಂತು ತನಿಖೆ ಮಾಡಿಸಿ'' ಎಂದು ಮುನಿರತ್ನಗೆ ಹೇಳಿದ್ದಾರೆ.

ಒಟ್ನಲ್ಲಿ, ಶ್ರುತಿ ಹರಿಹರನ್ ಸಿಡಿಸಿರುವ ಬಾಂಬ್ ನಿಂದ ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದರಿಂದ ಇನ್ನೂ ಏನೇನ್ ಆಗುತ್ತೋ, ನೋಡಬೇಕು.

More from Filmibeat

English summary
Producer Muniratna to write letter to Kannada Actress Sruthi Hariharan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X