ಉದ್ಯೋಗ ಕೊಡಿಸುವುದಾಗಿ ವಂಚನೆ: ನಿರ್ಮಾಪಕ ಪ್ರಕಾಶ್ ಬಂಧನ

By ಫಿಲ್ಮಿಬೀಟ್ ಡೆಸ್ಕ್

ಕೆಎಂಎಫ್‌ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ನಿರ್ಮಾಪಕ ಪ್ರಕಾಶ್ ಅನ್ನು ಬೆಂಗಳೂರಿನ ಆಡುಗೊಡಿ ಪೊಲೀಸರು ಬಂಧಿಸಿದ್ದಾರೆ.

ಕೆಎಂಎಫ್ ನಲ್ಲಿ ತಾಂತ್ರಿಕ ಅಧಿಕಾರಿಯ ಹುದ್ದೆಕೊಡಿಸುವುದಾಗಿ ಹೇಳಿದ್ದ ನಿರ್ಮಾಪಕ ಪ್ರಕಾಶ್ ಚಿಕ್ಕಬಳ್ಳಾಪುರ ಮೂಲದ ಚರಣ್ ಹೆಸರಿನ ವ್ಯಕ್ತಿಯೊಬ್ಬರಿಂದ ಸುಮಾರು 10 ಲಕ್ಷ ಹಣ ಪಡೆದಿದ್ದರು. ಬಳಿಕ ಆ ವ್ಯಕ್ತಿಗೆ ನಕಲಿ ಆದೇಶ ಪತ್ರ ನೀಡಿ ವಂಚನೆ ಮಾಡಿದ್ದರು.

ಕೆಎಂಎಫ್‌ನ ನಿರ್ದೇಶಕರ ನಕಲಿ ಸಹಿ, ಲಾಂಛನ, ಸೀಲ್‌ಗಳನ್ನೆಲ್ಲ ಬಳಸಿ ಪ್ರಕಾಶ್ ನಕಲಿ ಉದ್ಯೋಗ ಪತ್ರ ತಯಾರಿಸಿದ್ದರು. ನಕಲಿ ಉದ್ಯೋಗ ಪತ್ರ ಹಿಡಿದು ಚರಣ್ ಕೆಎಂಎಫ್‌ಗೆ ಹೋದಾಗ ಪ್ರಕಾಶ್‌ನ ನಕಲಿತನ ಬಯಲಾಗಿದೆ.

Producer Praksh Arrested By Adugodi Police For 10 Lakh rs Frau

ನಿರ್ದೇಶಕರ ಸಹಿ, ಸೀಲ್‌ಗಳನ್ನು ಫೋರ್ಜರಿ ಮಾಡಿರುವುದು ಗೊತ್ತಾಗುತ್ತಿದ್ದಂತೆ ಕೆಎಂಎಫ್‌ನ ಸಿಬ್ಬಂದಿ ಆಡುಗೊಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚರಣ್ ವಿಚಾರಣೆ ನಡೆಸಿದ ಪೊಲೀಸರು ಫೋರ್ಜರಿ ಮಾಡಿದ ಹಾಗೂ ಹತ್ತು ಲಕ್ಷ ಹಣ ವಂಚನೆ ಮಾಡಿದ ಆರೋಪದಲ್ಲಿ ನಿರ್ಮಾಪಕ ಪ್ರಕಾಶ್‌ನನ್ನು ಬಂಧಿಸಿದ್ದಾರೆ.

ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಶಭಾಷ್ ಬಡ್ಡಿ ಮಗನೇ' ಸಿನಿಮಾವನ್ನು ಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈಗ ಪೊಲೀಸರ ಅತಿಥಿಯಾಗಿದ್ದಾರೆ.

More from Filmibeat

English summary
Shabash Baddi Magane Kannada movie producer Praksh arrested by Adugodi police for allegedly cheating a man rs 10 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X