For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರ ಹಿತರಕ್ಷಣೆ ಕಾಪಾಡಲು 'ಪ್ರೊಡ್ಯೂಸರ್ ಪ್ರೊಟೆಕ್ಷನ್ ಕಮಿಟಿ' ರಚಿಸಲು ನಿರ್ಧಾರ

  |

  ರೆಬೆಲ್ ಸ್ಟಾರ್ ಅಂಬರೀಶ್ ಗೆ ಮೊಟ್ಟ ಮೊದಲ ಬಾರಿಗೆ ಸೋಲು ಉಂಟಾಗಿದೆ. ಫಿಲ್ಮ್ ಚೇಂಬರ್ ನಲ್ಲಿ ನಿನ್ನೆ ಸಂಜೆ ನಡೆದ ಸಂಧಾನ ಸಭೆ ವಿಫಲಗೊಂಡಿದೆ. ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ನಡುವೆ ಒಮ್ಮತ ಮೂಡಲಿಲ್ಲ. ಹೀಗಾಗಿ, ರಾಜಿ ಮಾತುಕತೆ ಮುರಿದುಬಿದ್ದಿದೆ.

  ಸಂಧಾನ ಸಭೆ ವಿಫಲಗೊಂಡ ಹಿನ್ನಲೆ, #ಮೀಟೂ ಅಭಿಯಾನದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಎಚ್ಚೆತ್ತುಕೊಂಡಿದೆ.

  ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.!ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.!

  #ಮೀಟೂ ಅಭಿಯಾನದಿಂದ ಮುಂದೆ ಇಂಥ ವಿವಾದಗಳನ್ನು ತಡೆಯಲು, ನಿರ್ಮಾಪಕರ ಹಿತರಕ್ಷಣೆ ಕಾಪಾಡಲು 'ಪ್ರೊಡ್ಯೂಸರ್ ಪ್ರೊಟೆಕ್ಷನ್ ಕಮಿಟಿ' ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.

  ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!

  ಮೂರು ದಿನಗಳಲ್ಲಿ 'ಪ್ರೊಡ್ಯೂಸರ್ ಪ್ರೊಟೆಕ್ಷನ್ ಕಮಿಟಿ' ರೂಪುರೇಷೆ ಸಿದ್ಧತೆಗೊಳ್ಳಲಿದೆ ಎಂದು ಫಿಲ್ಮ್ ಚೇಂಬರ್ ಮೂಲಗಳು ತಿಳಿಸಿವೆ.

  ಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾ ಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾ

  ಅತ್ತ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ತಡೆಯಲು 'ಫೈರ್' ಸಂಸ್ಥೆ ರಚಿಸಲಾಗಿತ್ತು. ಆದ್ರೆ, ಪ್ರಿಯಾಂಕಾ ಉಪೇಂದ್ರ, ರೇಖಾ ರಾಣಿ, ವೀಣಾ ಸುಂದರ್, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವರು 'ಫೈರ್' ಸಂಸ್ಥೆಯಿಂದ ಹೊರಗೆ ಬಂದಿದ್ದಾರೆ. ಹೀಗಾಗಿ 'ಫೈರ್' ಸಂಸ್ಥೆಗೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ. ಒಟ್ನಲ್ಲಿ #ಮೀಟೂ ಅಭಿಯಾನದಿಂದ ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

  English summary
  Producer Protection committee to be formed to safeguard the rights of Producers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X