ಹೊಸ ಕಥೆ ಶುರು ಮಾಡಿದ ನಿರ್ಮಾಪಕ ಪುಷ್ಕರ್

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಈಗ ಅವರು ಮತ್ತೊಂದು ಹೊಸ ಚಿತ್ರವನ್ನು ಶುರು ಮಾಡುತ್ತಿದ್ದಾರೆ.

ಈ ಸಿನಿಮಾವನ್ನು ಸೆನ್ನಾ ಹೆಗಡೆ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ 'ಕಥೆಯೊಂದು ಶುರುವಾಗಿದೆ' ಸಿನಿಮಾ ಮಾಡಿದ್ದ ಈ ನಿರ್ದೇಶಕ ಈಗ ಹೊಸ ಕಥೆ ಶುರು ಮಾಡುತ್ತಿದ್ದಾರೆ. ಈ ಸಿನಿಮಾ ಮಾಡುತ್ತಿರುವ ವಿಷಯವನ್ನು ಫೇಸ್ ಬುಕ್ ಖಾತೆಯ ಮೂಲಕ ತಿಳಿಸಿದ್ದಾರೆ.

'ಕಥೆಯೊಂದು ಶುರುವಾಗಿದೆ' ಸಿನಿಮಾವನ್ನು ಪುಷ್ಕರ್ ಫಿಲ್ಮ್ಸ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಈಗ ಮತ್ತೆ ಈ ಜೋಡಿ ಒಂದಾಗಿದೆ. ಮತ್ತೆ ಇದೇ ಬ್ಯಾನರ್ ನಲ್ಲಿ ಸಿನಿಮಾ ಮಾಡುವುದು ಸಂತಸದ ವಿಷಯ ಎಂದು ಸೆನ್ನಾ ಹೆಗಡೆ ಹೇಳಿದ್ದಾರೆ.

producer pushkar mallikarjunaiah and director senna hegde together again for new movie

ನಿರ್ದೇಶಕ ಸೆನ್ನಾ ಹೆಗಡೆ ರಕ್ಷಿತ್ ಶೆಟ್ಟಿ ಅವರ 'ಉಳಿದವರು ಕಂಡತೆ' ಸಿನಿಮಾಗೆ ಕೆಲಸ ಮಾಡಿದ್ದರು. 'ಕಥೆಯೊಂದು ಶುರುವಾಗಿದೆ' ಅವರ ಎರಡನೇ ಸಿನಿಮಾವಾಗಿತ್ತು. ದಿಗಂತ್ ಸಿನಿಮಾದ ನಾಯಕನಾಗಿದ್ದರು.

'ಕಥೆಯೊಂದು ಶುರುವಾಗಿದೆ' ಸಿನಿಮಾ ಅಷ್ಟರಮಟ್ಟಿಗೆ ಹಿಟ್ ಆಗದೆ ಇದ್ದರೂ, ನೋಡಿದವರು ಒಳ್ಳೆಯ ಮಾತುಗಳನ್ನು ಆಡಿದರು. ಸಿನಿಮಾದ ಚಿತ್ರಕಥೆ ಹಾಗೂ ಮೇಕಿಂಗ್ ತುಂಬ ಚೆನ್ನಾಗಿತ್ತು.

More from Filmibeat

English summary
Kannada producer Pushkar Mallikarjunaiah and director Senna Hegde together again for new movie. Senna Hegde directed 'Katheyondu Shuruvagide' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X