twitter
    For Quick Alerts
    ALLOW NOTIFICATIONS  
    For Daily Alerts

    'ಡಿಯರ್ ಕಾಮ್ರೇಡ್' ಬಿಡುಗಡೆ ಸಮಯಕ್ಕೆ ಡಬ್ಬಿಂಗ್ ಚಿತ್ರಗಳ ಬಗ್ಗೆ ಪುಷ್ಕರ್ ಟ್ವೀಟ್

    |

    ಡಬ್ಬಿಂಗ್ ಗಲಾಟೆಗಳು ಮುಗಿದಿವೆ. ಡಬ್ಬಿಂಗ್ ಸಿನಿಮಾಗಳು ಯಾವುದೇ ಅಡೆತಡೆ ಇಲ್ಲದೆ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ. ಇಂದು (ಜುಲೈ 26) ಕೂಡ ತೆಲುಗಿನ 'ಡಿಯರ್ ಕಾಮ್ರೇಡ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗುತ್ತಿದೆ.

    ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಡಿಯರ್ ಕಾಮ್ರೇಡ್' ಬೇರೆ ಭಾಷೆಗಳ ಜೊತೆಗೆ ಏಕಕಾಲದಲ್ಲಿ ಡಬ್ ಆಗಿ ಕನ್ನಡದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾವಾಗಿದೆ. ಈ ಸಿನಿಮಾದ ಬಿಡುಗಡೆ ಸಮಯದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಡಬ್ಬಿಂಗ್ ಸಿನಿಮಾಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಕನ್ನಡ ಕಮರ್ಷಿಯಲ್ ಸಿನೆಮಾ: ಮೇಡ್ ಫಾರ್ ಹಿಂದಿ ಆಡಿಯನ್ಸ್! ಕನ್ನಡ ಕಮರ್ಷಿಯಲ್ ಸಿನೆಮಾ: ಮೇಡ್ ಫಾರ್ ಹಿಂದಿ ಆಡಿಯನ್ಸ್!

    Producer Pushkar Mallikarjunaiah Tweets About Dubbing Movie

    ''ಕನ್ನಡ ಪ್ರೇಕ್ಷಕರು ಬೇರೆ ಭಾಷೆಯ ಚಿತ್ರಗಳನ್ನು ತಮ್ಮ ಭಾಷೆಯಲ್ಲಿ ನೋಡಬೇಕು ಎನ್ನುವ ನಿಯಮ ಹಾಕಿಕೊಂಡಿಲ್ಲ. ಕನ್ನಡಕ್ಕೆ ಡಬ್ ಮಾಡುವುದು ಕೆಲಸಕ್ಕೆ ಬರುವುದಿಲ್ಲ. ಇದನ್ನು ಜನರು ಸ್ವೀಕರಿಸಲು ಸಮಯ ಬೇಕಾಗುತ್ತದೆ. ನಾವು ಹಿಂದಿನಿಂದ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿದ್ದೇವೆ. ಇದು ನಮ್ಮ ಸ್ಟ್ರೆಂತ್ ಮತ್ತು ವೀಕ್ನೆಸ್ ಎರಡೂ ಹೌದು. ನಾವು ಸಕಲ ಕಲ ಭಾಷಾ ಬಲ್ಲವರು.'' ಎಂದು ಪುಷ್ಕರ್ ಟ್ವೀಟ್ ಮಾಡಿದ್ದಾರೆ.

    ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಐದು ಸಿನಿಮಾಗಳ ಪಟ್ಟಿಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಐದು ಸಿನಿಮಾಗಳ ಪಟ್ಟಿ

    Producer Pushkar Mallikarjunaiah Tweets About Dubbing Movie

    ಪುಷ್ಕರ್ ಅವರ ಈ ಟ್ವೀಟ್ ನೋಡಿ ಕೆಲವರು ಅವರು ಡಬ್ಬಿಂಗ್ ವಿರುದ್ಧ ಮಾತನಾಡಿದ್ದಾರೆ ಎಂದು ತಿಳಿದರು. ಆ ಕಾರಣ ತಮ್ಮ ಮುಂದಿನ ಟ್ವೀಟ್ ನಲ್ಲಿ ''ನಾನು ಡಬ್ಬಿಂಗ್ ವಿರೋಧಿ ಅಲ್ಲ. ನಾನು ಓರಿಜಿನಲ್ ಸ್ವಮೇಕ್ ಸಿನಿಮಾಗಳನ್ನು ನಂಬುತ್ತೇನೆ. ನನ್ನ 12 ಸಿನಿಮಾಗಳು ಕೂಡ ಸ್ವಮೇಕ್ ಚಿತ್ರಗಳು.'' ಎಂದು ಸ್ಪಷ್ಟ ಪಡಿಸಿದ್ದಾರೆ.

    English summary
    Kanaada producer Pushkar Mallikarjunaiah tweets about dubbing movie.
    Friday, July 26, 2019, 9:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X