»   » 'ಮಜೆಸ್ಟಿಕ್’ ಸಿನಿಮಾದ 16 ವರ್ಷದ ನೆನಪು

'ಮಜೆಸ್ಟಿಕ್’ ಸಿನಿಮಾದ 16 ವರ್ಷದ ನೆನಪು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಧೂಳೆಬ್ಬಿಸಿದ 'ಮಜೆಸ್ಟಿಕ್' ಕನ್ನಡ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಬದುಕಿನ ಒಂದು ಹೊಸ ಅಧ್ಯಾಯ ಬರೆದ ಚಿತ್ರ ಸಹ ಹೌದು. ಮೆಜೆಸ್ಟಿಕ್ ಚಿತ್ರದಿಂದ ಕನ್ನಡ ಸಿನಿಮಾರಂಗಕ್ಕೆ ಡಿ ಬಾಸ್ ಎಂಟ್ರಿ ಪಡೆದುಕೊಂಡಿದ್ದರು.

ಚಂದನವನದಲ್ಲಿ ಔಟ್ ಅಂಡ್ ಔಟ್ ಮಾಸ್ ಚಿತ್ರವಾಗಿ ಗುರುತಿಸಿಕೊಂಡ ಮೆಜೆಸ್ಟಿಕ್ ಚಿತ್ರದ ಮೂಲಕ ದರ್ಶನ್ ಅವರ ಜೊತೆಯಲ್ಲಿ ಅನೇಕ ತಂತ್ರಜ್ಞರು ಚಿತ್ರರಂಗದಲ್ಲಿ ಗುರುತಿಸಿಕೊಂಡು ಜೊತೆಯಲ್ಲಿ ಅನೇಕ ಅವಕಾಶಗಳನ್ನ ಪಡೆದುಕೊಂಡರು.

ಲಂಬೋರ್ಗಿನಿ ಇದ್ದರೂ ಮಾರುತಿ 800 ಮರೆಯಲಿಲ್ಲ ಡಿ ಬಾಸ್

ಮೆಜೆಸ್ಟಿಕ್ ಸಿನಿಮಾ ಬಿಡುಗಡೆ ಆಗಿ 16 ವರ್ಷ ಪೂರೈಸಿದೆ, ಇದೇ ಹಿನ್ನಲೆಯಲ್ಲಿ ಸಿನಿಮಾತಂಡ ಚಿತ್ರದ ಯಶಸ್ಸಿಗಾಗಿ ದುಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ಸನ್ಮಾನ ಮಾಡಿದ್ದಾರೆ. ಕಾರ್ಯಕ್ರಮ ಎಲ್ಲಿ ನಡೆಯಿತು? ಯಾರೆಲ್ಲಾ ಬಾಗಿ ಆಗಿದ್ದರು. ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

16 ವರ್ಷ ಪೂರೈಸಿದ ಮೆಜೆಸ್ಟಿಕ್ ಸಿನಿಮಾ

ಕನ್ನಡದ ಮೆಜೆಸ್ಟಿಕ್ ಸಿನಿಮಾ ಬಿಡುಗಡೆ ಆಗಿ 16 ವರ್ಷ ಪೂರ್ತಿ ಆಗಿದೆ. ಈ ಖುಷಿಯ ಸಂಭ್ರಮವನ್ನ ನೆಲಮಂಗಲ ಬಳಿಯ ಖಾಸಗಿ ರೆಸಾರ್ಟ್ ಅಲ್ಲಿ ‘ಮಜೆಸ್ಟಿಕ್' ಸಿನಿಮಾದ 16ನೇ ವರ್ಷದ ನೆನಪು ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಯಿತು.

ಕಲಾವಿದರಿಗೆ ಗೌರವ ಅರ್ಪಣೆ

ಮೆಜೆಸ್ಟಿಕ್ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿ ಕಲಾವಿದರನ್ನ ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿತ್ತು. ಕಲಾವಿದರು ಹಾಗೂ ಟೆಕ್ನಿಷಿಯನ್ಸ್ ಗಳಿಗೆ ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಿದರು ದರ್ಶನ್.

ಸಂತಸ ವ್ಯಕ್ತ ಪಡಿಸಿದ ದಾಸ

ಮಜೆಸ್ಟಿಕ್ ಸಿನಿಮಾದ ನಿರ್ದೇಶಕರಾದ ಪಿ ಎನ್ ಸತ್ಯ, ಸಹ ನಿರ್ದೇಶಕರಾಗಿದ್ದ ಮಾದೇಶ್ ಹಾಗೂ ಸುರೇಶ್ ಗೋಸ್ವಾಮಿ, ಪ್ರಚಾರಕರ್ತ ವಿಜಯಕುಮಾರ್, ಛಾಯಾಗ್ರಾಹಕರಾದ ಎಂ ಆರ್ ಸೀನು ಹಾಗೂ ಅಣಜಿ ನಾಗರಾಜ್ , ಮ್ಯಾನೇಜರ್ ರಾಮು ಸ್ಥಿರ ಛಾಯಾಗ್ರಹಕ ರಮೇಶ್ ಇನ್ನು ಅನೇಕರನ್ನ ಒಟ್ಟಿಗೆ ಕಂಡು ದರ್ಶನ ಸಂತಸ ವ್ಯಕ್ತ ಪಡಿಸಿದರು.

ಹ್ಯಾಟ್ರಿಕ್ ಜೋಡಿ ಆಗಲು ನಿರ್ಧಾರ

ದರ್ಶನ್ ಅಭಿನಯದ ‘ಮಜೆಸ್ಟಿಕ್' ಹಾಗೂ ‘ಧರ್ಮ' ಸಿನಿಮಾಗಳನ್ನು ಎಂ ಜಿ ರಾಮಮೂರ್ತಿ ನಿರ್ಮಾಣ ಮಾಡಿದ್ದಾರೆ. ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಅದೇ ಜೋಡಿ ಮತ್ತೆ ಒಂದಾಗಿ ಹ್ಯಾಟ್ರಿಕ್ ಹಿಟ್ ಪಡೆಯಲು ಮುಂದಾಗಿದೆ.

English summary
Kannada movie mejestic competed 16 years, Darshan is the hero in the film. Ramamurthy produced the mejestic film.The producer Ramamurthy honored to artists and technicians who worked in the Mejestic film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada