»   » ಕಾಣೆಯಾಗಿದ್ದ ಪ್ರಸಿದ್ಧ ನಿರ್ಮಾಪಕ ಶವವಾಗಿ ಪತ್ತೆ

ಕಾಣೆಯಾಗಿದ್ದ ಪ್ರಸಿದ್ಧ ನಿರ್ಮಾಪಕ ಶವವಾಗಿ ಪತ್ತೆ

By: ಅನಂತರಾಮು, ಹೈದರಾಬಾದ್
Subscribe to Filmibeat Kannada
Ravi Shankar Prasad
ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ ರವಿಶಂಕರ್ ಪ್ರಸಾದ್ ಶನಿವಾರ (ಜು.13) ಶವವಾಗಿ ಪತ್ತೆಯಾಗಿದ್ದಾರೆ. ಜುಲೈ 8ರಂದು ಅವರು ನಾಪತ್ತೆಯಾಗಿದ್ದರು. ಪಶ್ಚಿಮ ಗೋದಾವರಿ ಜಿಲ್ಲೆಯ ಪೊಲಾವರಂ ಗ್ರಾಮದ ಬಳಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ವಿವರ ನೀಡಿದ್ದಾರೆ.

ಜುಲೈ 8ರಂದು ಮುಂಜಾನೆ ವಾಯುವಿಹಾರಕ್ಕೆಂದು ತೆರಳಿದ ರವಿಶಂಕರ್ ಕಾಣೆಯಾಗಿದ್ದರು. ಆಗ ಅವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ದಕ್ಷಿಣದ ಖ್ಯಾತ ನಿರ್ಮಾಪಕ ಎಲ್ ವಿ ಪ್ರಸಾದ್ ಅವರ ಮೊಮ್ಮಗ ರವಿಶಂಕರ್ ಪ್ರಸಾದ್.

ರವಿಶಂಕರ್ ಅವರು ಇದುವರೆಗೂ ತೆಲುಗಿನಲ್ಲಿ ಶಂಕರ್ ದಾದಾ ಎಂಬಿಬಿಎಸ್, ಶಂಕರ್ ದಾದಾ ಜಿಂದಾಬಾದ್ ಹಾಗೂ ತಮಿಳಿನಲ್ಲಿ ಜೆಮಿನಿ ಫಿಲಂ ಸರ್ಕ್ಯೂಟ್ ಬ್ಯಾನರ್ ನಡಿ ವಸೂಲ್ ರಾಜಾ ಎಂಬಿಬಿಎಸ್ ಚಿತ್ರಗಳನ್ನು ನಿರ್ಮಿಸಿದ್ದಾರೆ.

ದಕ್ಷಿಣ ಭಾರತದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಜೆಮಿನಿ ಫಿಲಂ ಸರ್ಕ್ಯೂಟ್ ಬ್ಯಾನರ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅವರು ಕೆಲಸ ಮಾಡುತ್ತಿದ್ದರು. ರೀಜೆನ್ಸಿ ಗ್ರೂಪ್ ಆಫ್ ಹೋಟೆಲ್ಸ್ ನ ಅಧ್ಯಕ್ಷರಾಗಿಯೂ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಈಗ ಅವರ ದೇಹ ಅನುಮಾನಾಸ್ಪದ ರೀತಿಯಲ್ಲಿ ದೊರಕಿದೆ. ಇದು ಹತ್ಯೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಇನ್ನಷ್ಟೇ ಬಗೆಹರಿಯಬೇಕಾಗಿದೆ. ವ್ಯಾಪಾರದಲ್ಲಿ ಏನಾದರೂ ನಷ್ಟ ಉಂಟಾಗಿದೆಯೇ? ಅಥವಾ ಕುಟುಂಬ ಸಮಸ್ಯೆಗಳೇನಾದರೂ ಇವೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

English summary
Shank Dada MBBS fame film producer Ravi Shankar Prasad, who went missing since July 8, was found dead. Sources say that the police have found his body at a village in East Godavari district. 
Please Wait while comments are loading...